ಕಿರುತೆರೆ ನಟಿ ಸವಿ ಮಾದಪ್ಪ ಸಾವಿನ ಪ್ರಕರಣ: ಪಿಎ ಮಹೇಶ್​ನನ್ನು ವಶಕ್ಕೆ ಪಡೆದ ಪೊಲೀಸರು

Savi Madappa
Published on

ರಾಮನಗರ: ಕಿರುತೆರೆ ನಟಿ ಸೌಜನ್ಯ ಅಲಿಯಾಸ್​ ಸವಿ ಮಾದಪ್ಪ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಮೇಕಪ್ ಮ್ಯಾನ್, ಪಿಎ ಮಹೇಶ್​ನನ್ನ ಕುಂಬಳಗೂಡು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸೌಜನ್ಯ ತಂದೆ ದೂರಿನನ್ವಯ ವಶಕ್ಕೆ ಪಡೆದಿರುವ ಪೊಲೀಸರು ಮಹೇಶ್​ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಸೌಜನ್ಯಾಳ ಪ್ರತಿ ಚಲನವಲನದ ಬಗ್ಗೆ ಮಹೇಶ್​ಗೆ ಮಾಹಿತಿ ಇತ್ತು. ಆಕೆಯ ಕೆಲಸದ ವಿಚಾರ ಹಾಗೂ ಬ್ಯಾಂಕ್ ವ್ಯವಹಾರದ ಬಗ್ಗೆ ಮಹೇಶ್​ಗೆ ಇಂಚಿಂಚು ತಿಳಿದಿತ್ತು ಎನ್ನಲಾಗಿದೆ.

ಸದ್ಯ ಮಹೇಶ್​ನನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಕಿರುತೆರೆ ನಟ ವಿವೇಕ್​ ಮೇಲೆಯೂ ಸೌಜನ್ಯ ತಂದೆ ಪ್ರಭು ಮಾದಪ್ಪ ದೂರು ನೀಡಿದ್ದು, ಆತನನ್ನು ಪೊಲೀಸರು ವಶಕ್ಕೆ ನಡೆಸಲಿದ್ದಾರೆ. ನಿನ್ನೆ ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯ ಸನ್ ವರ್ತ್​ ಅಪಾರ್ಟ್​ಮೆಂಟ್​ನಲ್ಲಿ ಸೌಜನ್ಯ ಶವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಮಗಳ ಸಾವಿನ ಸುದ್ದಿ ತಿಳಿದ ಬೆನ್ನಲ್ಲೇ ಸೌಜನ್ಯ ತಂದೆ ಪ್ರಭು ಮಾದಪ್ಪ ನಟ ವಿವೇಕ್​ ಮತ್ತು ಪಿಎ ಮಹೇಶ್​ ವಿರುದ್ಧ ಕುಂಬಳಗೂಡು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net