ಈ ಒಂದು ಷರತ್ತಿಗೆ ಒಪ್ಪಿಗೆ ನೀಡಿದ್ರೆ ಮಾತ್ರ ಮದುವೆ ಆಗುತ್ತಾರಂತೆ ನಟಿ ಸಾರಾ ಅಲಿ ಖಾನ್​!

Sara ali Khan
Published on

ಮುಂಬೈ: ಪಡ್ಡೆ ಹುಡುಗರ ಕಣ್ಮನ ಸೆಳೆಯುವ ನಟಿ ಸಾರಾ ಅಲಿ ಖಾನ್​ ಬಾಲಿವುಡ್​ನ​ ಬಹು ಬೇಡಿಕೆಯ ನಾಯಕಿ. ಬಹುದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಸಾರಾ, ತಮ್ಮ ಸಿನಿ ಜರ್ನಿ ಆರಂಭಿಸುವುದಕ್ಕೂ ಮುನ್ನ ತೂಕ ಇಳಿಕೆ, ನಟನೆಯ ತರಬೇತಿ ಸೇರಿದಂತೆ ಸಾಕಷ್ಟು ಸರ್ಕಸ್​ ಮಾಡಿ ಇಂದು ವೃತ್ತಿ ಜೀವನ ಯಶಸ್ಸಿನಲ್ಲಿದ್ದಾರೆ. ತಮ್ಮ ಮುಂದಿನ "ಅತ್ರಂಗಿ ರೇ" ಚಿತ್ರದ ಟ್ರೈಲರ್​ನಲ್ಲಿ ರಿಂಕು ಪಾತ್ರದಲ್ಲಿ ಸಾರಾ ಮೋಡಿ ಮಾಡಿದ್ದಾರೆ.

ಬಿಡುಗಡೆಗೆ ಸಿದ್ಧವಾಗಿರುವ ಅಂತ್ರಗಿ ರೇ ಚಿತ್ರದ ಪ್ರಚಾರ ಕೆಲಸದಲ್ಲಿ ಸಾರಾ ಬಿಜಿಯಾಗಿದ್ದಾರೆ. ಹೀಗಾಗಿ ಸಾಲು ಸಾಲು ಮಾಧ್ಯಮ ಸಂದರ್ಶನ ನೀಡುತ್ತಿರುವ ಸಾರಾ, ಸಂದರ್ಶನವೊಂದರಲ್ಲಿ ತಮ್ಮ ಮದುವೆ ಕುರಿತು ಮಾತನಾಡಿದ್ದಾರೆ.

ಸಾರಾ ಅವರನ್ನು ಮದುವೆ ಆಗಲು ಒಂದು ಷರತ್ತು ಇದೆಯಂತೆ. ಆ ಷರತ್ತಿಗೆ ಒಪ್ಪಿಗೆ ಸೂಚಿಸಿದರೆ ಮಾತ್ರ ಮದುವೆ ಆಗುತ್ತಾರಂತೆ. ಏನಪ್ಪಾ ಆ ಷರತ್ತು ಅಂತಾ ನೋಡುವುದಾದರೆ, ಸಾರಾ ಅವರಿಗೆ ತಾಯಿ ಅಮೃತಾ ಸಿಂಗ್​ ಅಂದರೆ ತುಂಬಾ ಇಷ್ಟ. ಪ್ರವಾಸಕ್ಕೆ ಹೋದಾಗಲೂ ಅವರ ತಾಯಿ ಜತೆಯಲ್ಲೇ ಇರುತ್ತಾರೆ. ತಾಯಿಯನ್ನು ಬಿಟ್ಟು ಹೆಚ್ಚು ಇರುವುದೇ ಇಲ್ಲ. ಹೀಗಾಗಿ ತನ್ನನ್ನು ಮದುವೆ ಆಗುವುದಾದರೆ, ನಮ್ಮ ಕುಟುಂಬದ ಜತೆಯಲ್ಲೇ ಉಳಿಯಬೇಕು ಎಂದಿದ್ದಾರೆ. ಅಂದರೆ, ಮನೆಯ ಅಳಿಯನಾಗಿ ಇರಬೇಕಂತೆ.

ನಾನೆಂದಿಗೂ ನನ್ನ ತಾಯಿಯನ್ನು ಒಂಟಿಯಾಗಿ ಬಿಟ್ಟು ಇರಲಾರೆ. ನನ್ನ ಷರತ್ತಿಗೆ ಒಪ್ಪಿಕೊಂಡರೆ ಮಾತ್ರ ಮದುವೆ ಆಗುತ್ತೇನೆ. ಇಲ್ಲವಾದಲ್ಲಿ ಮದುವೆ ಆಗುವುದಿಲ್ಲ ಎಂದು ಸಾರಾ ಹೇಳಿಕೊಂಡಿದ್ದಾರೆ.

ಅಂದಹಾಗೆ ಅತ್ರಾಂಗಿ ರೇ ಚಿತ್ರವನ್ನು ಆನಂದ್ ಎಲ್ ರೈ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಸಾರಾ ಬಿಹಾರಿ ಹುಡುಗಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ವಿಷು ಪಾತ್ರದಲ್ಲಿ ಧನುಷ್ ನಟಿಸಿದ್ದಾರೆ. ಆದಾಗ್ಯೂ, ಅಕ್ಷಯ್ ಕುಮಾರ್ ಪಾತ್ರದ ಬಗ್ಗೆ ಹೆಚ್ಚ ತಿಳಿಸಿಲ್ಲ. ರೊಮ್ಯಾಂಟಿಕ್ ಕಾಮಿಡಿ ಪ್ರೇಮಕಥೆಯಾಗಿದೆ. ಇದನ್ನು ಭೂಷಣ್ ಕುಮಾರ್ ಅವರ ಟಿ-ಸೀರೀಸ್, ಕಲರ್ ಯೆಲ್ಲೋ ಪ್ರೊಡಕ್ಷನ್ಸ್ ಮತ್ತು ಕೇಪ್ ಆಫ್ ಗುಡ್ ಫಿಲ್ಮ್ಸ್ ನಿರ್ಮಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net