

ಹೊಟ್ಟೆ ಮತ್ತು ಸೊಂಟದ ಕೊಬ್ಬು ಕೂಡ ಕರಗಿಸುವುದರ ಜತೆ ಜೀರ್ಣಶಕ್ತಿ ಹೆಚ್ಚಿಸುವಲ್ಲಿ ಊರ್ಧ್ವ ಧನುರಾಸನ ಪ್ರಮುಖ ಪಾತ್ರವಹಿಸುತ್ತದೆ. ಇದರ ನಿಯಮಿತ ಅಭ್ಯಾಸದಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.
ಊರ್ಧ್ವ ಧನುರಾಸನದ ಬಗ್ಗೆ ಹಿರಿಯ ಯೋಗ ತಜ್ಞರಾದ ಗೋಪಾಲಕೃಷ್ಣ ದೇಲಂಪಾಡಿ ಅವರು ತಿಳಿಸಿಕೊಟ್ಟಿದ್ದು, ಊರ್ಧ್ವ ಧನುರಾಸನವನ್ನು ಮಂಗಳೂರಿನ ಸೇಂಟ್ ಎಲೆಸಿಯಸ್ ಕಾಲೇಜು ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ್ದಾರೆ.
ಅಭ್ಯಾಸಕ್ರಮ: ಜಮಖಾನದ ಮೇಲೆ ನೇರವಾಗಿ ನಿಂತುಕೊಳ್ಳಬೇಕು. ನಿಲ್ಲುವಾಗ ಕಾಲುಗಳ ನಡುವೆ ಅಂತರ ಇರಬೇಕು. ದೀರ್ಘವಾಗಿ ಉಸಿರನ್ನು ತೆಗೆದುಕೊಂಡು, ಉಸಿರನ್ನು ಬಿಡುತ್ತಾ ನಿಧಾನವಾಗಿ ಸೊಂಟದ ಮೇಲ್ಭಾಗದಿಂದ ಆದಷ್ಟು ಹಿಂದಕ್ಕೆ ಬಾಗಬೇಕು. ಆದಷ್ಟು ಕೈಗಳು ಕಾಲಿನ ಹತ್ತಿರ ತರಬೇಕು.
ಪ್ರಯೋಜನಗಳೇನು?
ಊರ್ಧ್ವ ಧನುರಾಸನದಿಂದ ಬೆನ್ನೆಲುಬು ಬಲಗೊಳ್ಳುತ್ತದೆ. ಹೃದಯದ ಮಾಂಸಖಂಡಗಳು ಮತ್ತು ಶ್ವಾಸಕೋಸ ಹೆಚ್ಚು ಬಲಗೊಂಡ ದೇಹದ ಆರೋಗ್ಯವನ್ನು ಹೆಚ್ಚಿಸುತ್ತದೆ. ಅಲ್ಲದೆ, ಹೊಟ್ಟೆ ಮತ್ತು ಸೊಂಟದ ಕೊಬ್ಬು ಕೂಡ ಕರಗುತ್ತದೆ ಹಾಗೂ ಜೀರ್ಣಶಕ್ತಿ ಹೆಚ್ಚುತ್ತದೆ. ಪ್ರಮುಖವಾಗಿ ಮನಸ್ಸು ಸದಾ ಲವಲವಿಕೆಯಿಂದ ಇರುತ್ತದೆ ಹಾಗೂ ಉದರ ಸಮಸ್ಯೆ ನಿಯಂತ್ರಣವಾಗುತ್ತದೆ. ಮಲಬದ್ದತೆ ಮತ್ತು ಮೂಲವ್ಯಾಧಿ ಸಮಸ್ಯೆ ಪರಿಹಾರವಾಗುತ್ತದೆ.
ಈ ಆಸನವನ್ನು ಯಾರು ಮಾಡಬಾರದು?
ಹೃದಯಸಂಬಂಧಿ ಕಾಯಿಲೆ ಮತ್ತು ಸೊಂಟ ನೋವು ಇರುವವರು ಈ ಆಸನವನ್ನು ಅಭ್ಯಾಸ ಮಾಡಬಾರದು.