

ಕೋಲಾರ: ಕನ್ನಡ ಚಿತ್ರರಂಗವಲ್ಲದೆ ದೇಶ ವಿದೇಶಗಳಲ್ಲೂ ಪುನೀತ್ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಅವರ ಅಕಾಲಿಕ ಸಾವನ್ನು ನೆನೆದು ಮರಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ದೇಶದ ಇಡೀ ಚಿತ್ರರಂಗ ಸಂತಾಪ ಸೂಚಿಸಿದೆ.
ಇದರ ನಡುವೆ ಆಂಧ್ರಪ್ರದೇಶದ ಪುನೀತ್ ರಾಜ್ಕುಮಾರ್ ಅಭಿಮಾನಿಯೊಬ್ಬ ಉಪ್ಪಿನಲ್ಲಿ ಅಪ್ಪು ಚಿತ್ರ ಬಿಡಿಸಿ ತನ್ನ ಅಭಿಮಾನವನ್ನ ಮೆರದಿದ್ದಾನೆ. ಚಿತ್ತೂರು ಜಿಲ್ಲೆಯ ಕುಪ್ಪಂನ ಕಲಾವಿದನೊಬ್ಬ ಅಪ್ಪುವಿನ ಚಿತ್ರವನ್ನ ಉಪ್ಪಿನಲ್ಲಿ ಬಿಡಿಸುವ ಮೂಲಕ ಸಂತಾಪ ಸೂಚಿಸಿದ್ದಾನೆ.
ಪೂರಿ ಆರ್ಟ್ಸ್ನ ಪುರುಷೋತ್ತಮ್ ಕನ್ನಡ ಧ್ವಜದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಚಿತ್ರ ಬಿಡಿಸಿ, ವಿ ಮಿಸ್ ಯೂ ಅಪ್ಪು ಎಂದು ಬರೆದಿದ್ದಾನೆ. ಅಪ್ಪು ಕನ್ನಡ ಸಿನಿಮಾಗಳನ್ನ ಮಾತ್ರ ಮಾಡಿದ್ರು ತೆಲುಗು, ತಮಿಳಿನಲ್ಲೂ ತನ್ನ ಅಪಾರ ಅಭಿಮಾನಿಗಳನ್ನ ಹೊಂದಿದ್ದಾರೆ ಅನ್ನೋದಕ್ಕೆ ಇದೆಲ್ಲಾ ಸಾಕ್ಷಿಯಾಗಿದೆ.