ಇಬ್ಬರಿಗೆ ಪುನೀತ್​ ಕಣ್ಣುಗಳ ಅಳವಡಿಕೆ: ನಾರಾಯಣ ನೇತ್ರಾಲಯದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

New Project (6)
Published on

ಬೆಂಗಳೂರು: ನಗುಮುಖ, ಸರಳ ವ್ಯಕ್ತಿತ್ವದಿಂದಲೇ ಎಲ್ಲರಿಗೂ ಇಷ್ಟವಾಗುತ್ತಿದ್ದ ಅಪ್ಪು, ಇಂದು ಭೂತಾಯಿಯ ಮಡಿಲಲ್ಲಿ ಲೀನವಾಗಿದಾರೆ. ಬದುಕಿದ್ದಾಗಲೂ ಲಕ್ಷಾಂತರ ಜನರಿಗೆ ಸ್ಫೂರ್ತಿಯ ಚಿಲುಮೆಯಂತಿದ್ದ ಅಪ್ಪು, ಸಾವಿನ ಬಳಿಕ ನೇತ್ರದಾನ ಮಾಡುವ ಮೂಲಕ ಇಬ್ಬರ ಬಾಳಿಗೆ ಬೆಳಕಾಗಿದ್ದಾರೆ. ಪುನೀತ್​ ಕಣ್ಣುಗಳು ಇಬ್ಬರಿಗೆ ಅಳವಡಿಸಲಾಗಿದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಸಾವಿನಲ್ಲೂ ಸಾರ್ಥಕತೆ ಮೆರೆದ ಪುನೀತ್​, ಕನ್ನಡಿಗರ ಮನಸ್ಸಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

ಅ.29ರಂದು ಹೃದಯಾಘಾತದಿಂದ ಮೃತಪಟ್ಟರು. ಪ್ರೀತಿ ಅಪ್ಪು ಇನ್ನಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದ ಇಡೀ ಕರುನಾಡು ಕಣ್ಣೀರ ಸಾಗರಲ್ಲಿ ಮುಳುಗಿತ್ತು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ತಂದೆ ಡಾ.ರಾಜ್​ಕುಮಾರ್​ ಅವರ ನಡೆಯನ್ನೇ ಅನುಸರಿದ್ದ ಪುನೀತ್​, ತಾವು ಸತ್ತ ಬಳಿಕ ಕಣ್ಣುಗಳನ್ನ ಮಣ್ಣುಮಾಡಬೇಡಿ, ನೇತ್ರದಾನ ಮಾಡಿ ಎಂದಿದ್ದರು. ಅವರ ಆಸೆಯಂತೆ ನೇತ್ರದಾನ ಪ್ರಕ್ರಿಯೆಗೆ ದೊಡ್ಮನೆ ಕುಟುಂಬಸ್ಥರು ಸಹಕರಿದ್ದರು. ಪುನೀತ್​ ಕಣ್ಣುಗಳು ಇಬ್ಬರಿಗೆ ಅಳವಡಿಸಲಾಗಿದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ನಾರಾಯಣ ನೇತ್ರಾಲಯ ಆಸ್ಪತ್ರೆಯಲ್ಲಿ ನಿನ್ನೆ(ಶನಿವಾರ) ಒಬ್ಬರಿಗೆ, ಇಂದು (ಭಾನುವಾರ) ಮತ್ತೊಬ್ಬರಿಗೆ ಇನ್ನೊಂದು ಕಣ್ಣನ್ನು ಅಳವಡಿಲಾಗಿದೆ. ಈ ಬಗ್ಗೆ ಮಂಗಳವಾರ ಆಸ್ಪತ್ರೆಯಿಂದ ಪೂರ್ಣ ಮಾಹಿತಿ ಲಭ್ಯವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net