More

    ರಾಜನಂತೆ ಹುಟ್ಟಿ, ಬೆಳೆದು, ಜೀವಿಸಿ, ರಾಜನಂತೆಯೇ ಹೋದ: ಕಿಚ್ಚನಿಂದ ಅಪ್ಪುಗೆ ಅಂತಿಮ ನುಡಿ ನಮನ

    ಬೆಂಗಳೂರು: ಬಾಲ್ಯದ ಗೆಳೆಯ ಹಾಗೂ ಚಿತ್ರರಂಗದ ಸಹೋದ್ಯೋಗಿ ನಟ ಪುನೀತ್​ ರಾಜ್​ಕುಮಾರ್​ ಅಕಾಲಿಕ ಮರಣದಿಂದ ಆಘಾತಕ್ಕೆ ಒಳಗಾಗಿರುವ ನಟ ಸುದೀಪ್ ಮತ್ತೊಮ್ಮೆ ಭಾವುಕ ಪತ್ರ ಬರೆಯುವ ಮೂಲಕ ಗೆಳೆಯನಿಗೆ ಅಂತಿಮ ನುಡಿ ನಮನ ಸಲ್ಲಿಸಿದ್ದಾರೆ. ನಿನ್ನೆಯಷ್ಟೇ ಪುನೀತ್​ ಕುರಿತು ಬಾಲ್ಯದ ಜೀವನ ಮೆಲುಕು ಹಾಕಿದ್ದ ಸುದೀಪ್​, ಇಂದು ಪುನೀತ್​ ಅಂತ್ಯಕ್ರಿಯೆ ಬಳಿಕ ನೆಚ್ಚಿನ ಗೆಳೆಯನಿಗೆ ಪದ ನಮನ ಸಲ್ಲಿಸಿದ್ದಾರೆ. ​

    ಈ ಮೂರು ದಿನಗಳು ನಮ್ಮ ನೆಚ್ಚಿನ ಮುಖ್ಯಮಂತ್ರಿಗಳು ಮತ್ತು ಸರ್ಕಾರವು ಎಲ್ಲ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಉತ್ತಮ ಕೆಲಸವನ್ನು ಮಾಡಿದೆ. ಪ್ರತಿಯೊಂದು ವ್ಯವಸ್ಥೆಯನ್ನು ತುಂಬಾ ಘನತೆ ಹಾಗೂ ಶಿಸ್ತಿನಿಂದ ನಿರ್ವಹಿಸಿದ್ದಾರೆ. ಇಂತಹ ಒಳ್ಳೆಯ ಸ್ಪಂದನೆ ನೀಡಿದ ಎಲ್ಲ ಸರ್ಕಾರಿ ಅಧಿಕಾರಿಗಳಿಗೂ ಹಾಗೂ ಗೌರವಾನ್ವಿತ ಮುಖ್ಯಮಂತ್ರಿಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಪುನೀತ್​ ಅವರನ್ನು ಬಹಳ ಒಳ್ಳೆಯ ರೀತಿಯಲ್ಲಿ ಕಳುಹಿಸಿಕೊಡುವಲ್ಲಿ ನೀವೆಲ್ಲ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದೀರಿ. ಇದೀಗ ಎಲ್ಲವೂ ಮುಗಿದಿದೆ ಎಂದು ಸುದೀಪ್​ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.

    ಸಹಜ ಸ್ಥಿತಿಗೆ ಬರಲು ನಮಗೆ ಸಾಕಷ್ಟು ದಿನಗಳು ಬೇಕಾಗುತ್ತದೆ. ಇದು ದೊಡ್ಡ ನಷ್ಟ ಮಾತ್ರವಲ್ಲ, ಇಡೀ ಇಂಡಸ್ಟ್ರಿ ಮತ್ತು ಜನರಿಗೆ ದಿಢೀರ್​ ಆಘಾತವಾಗಿದೆ. ಇಷ್ಟು ದಿನಗಳು ಸಾಕ್ಷಿಯಾಗಿದ್ದ ಸುಂದರ ಅಧ್ಯಾಯ ಇಂದು ಅಂತ್ಯವಾಗಿದೆ. ಅಂತಿಮ ಸಂಸ್ಕಾರದ ಸ್ಥಳದಲ್ಲಿ ನಾನು ಕೂಡ ಆಸೀನನಾಗಿದ್ದೆ. ಪುನೀತ್​ ಮಕ್ಕಳ ಮನಸ್ಸಿನಲ್ಲಿ ಏನಾಗುತ್ತಿರಬಹುದು ಎಂದು ಆಲೋಚಿಸುತ್ತಿದೆ. ಅಲ್ಲಿದ್ದ ಹಿರಿಯ ಮನಸ್ಸಿನಲ್ಲಿ ಏನಾಗುತ್ತಿರಬಹುದು ಎಂಬ ಎಲ್ಲ ಆಲೋಚನೆಗಳಿಂದ ನನ್ನ ಮನಸ್ಸು ವಿಚಲಿತಗೊಳ್ಳುತ್ತಿತ್ತು.

    ಪುನೀತ್​ ಯಾವಾಗಲೂ ಎಲ್ಲರ ಪ್ರೀತಿ ಪಾತ್ರನಾಗಿದ್ದ ಮತ್ತು ಎಲ್ಲರ ಆಶೀರ್ವಾದವೂ ಆತನ ಮೇಲಿತ್ತು. ಅಂತಿಮವಾಗಿ ಇಂದು ಬೆಳಗ್ಗೆ ಅವರ ಪಾಲಕರನ್ನು ಬಿಟ್ಟು ಶಾಶ್ವತವಾಗಿ ಮರೆಯಾದ. ಪುನೀತ್​ ಬಗ್ಗೆ ಯೋಚಿಸುತ್ತಲೇ ಅಲ್ಲಿಂದ ಹೊರಡಿದೆ. ರಾಜನಂತೆಯೇ ಹುಟ್ಟಿದ ಪುನೀತ್​, ರಾಜನಂತೆಯೇ ಬೆಳೆದ, ರಾಜನಂತೆಯೇ ಜೀವಿಸಿದ ಮತ್ತು ರಾಜನಂತೆಯೇ ಹೋದ. ನಮ್ಮ ಈ ನಕ್ಷತ್ರ (ಪುನೀತ್​) ಆಕಾಶಕ್ಕೆ ಸ್ವಂತ. ರಾತ್ರಿಯಲ್ಲಿ ನಾನು ತಲೆಯೆತ್ತಿ ನೋಡುವಾಗ, ನೀವು ಯಾವಾಗಲೂ ವಿಶ್ರಾಂತಿಗಿಂತ ಪ್ರಕಾಶಮಾನವಾಗಿ ಮಿನುಗುತ್ತಿರುವುದನ್ನು ನಾನು ಖಚಿತವಾಗಿ ನೋಡುತ್ತೇನೆ ಎಂದು ಸುದೀಪ್​ ತುಂಬಾ ಭಾವುಕರಾಗಿ ಬರೆದುಕೊಂಡಿದ್ದಾರೆ.

    ಇಬ್ಬರಿಗೆ ಪುನೀತ್​ ಕಣ್ಣುಗಳ ಅಳವಡಿಕೆ: ನಾರಾಯಣ ನೇತ್ರಾಲಯದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

    ಮಂತ್ರಾಲಯದಲ್ಲಿ ಪುನೀತ್​ ಮಾತನಾಡುತ್ತಿರುವಾಗಲೇ ಅಲುಗಾಡಿದ್ದ ವೀಣೆ: ಸ್ಪಷ್ಟನೆ ನೀಡಿದ ಸುಭುದೇಂದ್ರ ಶ್ರೀಗಳು

    ಪವರ್​ ಸ್ಟಾರ್​ ಪುನೀತ್​ ನಿಧನಕ್ಕೆ ಪುಟಾಣಿ ಅಭಿಮಾನಿ ಕಣ್ಣೀರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts