ಮತ್ತೆ ಒಂದಾಗ್ತಾರಾ ಮಾಜಿ ತಾರಾದಂಪತಿ? ಸಮಂತಾರ ಈ ನಡೆಯಿಂದ ಅಭಿಮಾನಿಗಳಲ್ಲಿ ಚಿಗುರಿದ ಆಸೆ!

samanta
Published on

ಹೈದರಾಬಾದ್​: ಸಮಂತಾ ಮತ್ತು ನಾಗಚೈತನ್ಯ ಕಳೆದ ಅಕ್ಟೋಬರ್​ 2 ರಂದು ದಿಢೀರನೇ ಡಿವೋರ್ಸ್​ ಘೋಷಣೆ ಮಾಡಿದ್ದು, ಅವರ ಅಭಿಮಾನಿಗಳಿಗೆ ಬಹುದೊಡ್ಡ ಆಘಾತ ನೀಡಿದಂತಾಗಿದೆ. ಇನ್ನು ಕೂಡ ಅದರಿಂದ ಹೊರಬರಲಾಗದೇ ಇಬ್ಬರು ಮತ್ತೆ ಒಂದಾಗುತ್ತಾರಾ ಎಂದು ಎದುರು ನೋಡುತ್ತಿದ್ದಾರೆ. ಆದರೆ, ಇತ್ತೀಚೆಗೆ ಸಮಂತಾ ಮಾಡಿರುವ ಒಂದು ಕೆಲಸವನ್ನು ನೋಡಿ ಅಭಿಮಾನಿಗಳಲ್ಲಿ ಮತ್ತೆ ಆಸೆ ಚಿಗುರಿದೆ.

ಸಮಂತಾ ಮಾಡಿದ ಆ ಕೆಲಸ ಏನೆಂದರೆ, ತಮ್ಮ ಇನ್​ಸ್ಟಾಗ್ರಾಂನಲ್ಲಿದ್ದ ಡಿವೋರ್ಸ್​ ಘೋಷಣೆಯ ಪೋಸ್ಟ್​ ಅನ್ನು ಡಿಲೀಟ್​ ಮಾಡಿದ್ದಾರೆ. ಇದರಿಂದ ಅಭಿಮಾನಿಗಳು ಅಚ್ಚರಿಗೆ ಒಳಗಾಗಿದ್ದು, ಸಮಂತಾ ಈ ರೀತಿ ಯಾಕೆ ಮಾಡಿದರೂ ಎಂದು ಯೋಚಿಸುತ್ತಿದ್ದಾರೆ. ಇಬ್ಬರು ಮತ್ತೆ ಒಂದಾಗುತ್ತಾರಾ? ಸಮಂತಾ ಮತ್ತೆ ಅಕ್ಕಿನೇನಿ ಕುಟುಂಬಕ್ಕೆ ಮರಳಲು ಯತ್ನಿಸುತ್ತಿದ್ದಾರಾ? ಎಂಬ ಚರ್ಚೆ ಆರಂಭವಾಗಿದೆ.

ಆದರೆ, ನಾಗಚೈತನ್ಯ ಇನ್​ಸ್ಟಾಗ್ರಾಂ ಖಾತೆಯಲ್ಲಿ ಡಿವೋರ್ಸ್​ ಪೋಸ್ಟ್​ ಹಾಗೇ ಇದೆ. ಒಂದು ವೇಳೆ ಒಂದಾಗುವುದಾದರೆ, ನಾಗಚೈತನ್ಯ ಖಾತೆಯಲ್ಲೂ ಪೋಸ್ಟ್​ ಡಿಲೀಟ್​ ಆಗಬೇಕಿತ್ತು. ಆದರೆ, ಡಿಲೀಟ್​ ಆಗದಿರುವುದು ಅಭಿಮಾನಿಗಳಿ ಮತ್ತೊಮ್ಮೆ ನಿರಾಸೆಯಾಗಿದೆ. ಇನ್​ಸ್ಟಾಗ್ರಾಂನಲ್ಲಿ ಕಹಿ ನೆನಪುಗಳನ್ನು ಅಳಿಸುವ ಪ್ರಕ್ರಿಯೆಯಲ್ಲಿ ಡಿವೋರ್ಸ್​ ಪೋಸ್ಟ್​ ಕೂಡ ಡಿಲೀಟ್​ ಆಗಿದೆ ಎಂದು ಹೇಳಲಾಗುತ್ತಿದೆ.

ಡಿವೋರ್ಸ್​ ಆಗಿರುವ ತಾರಾದಂಪತಿ ಸದ್ಯ ತಮ್ಮ ಗಮನವನ್ನು ಸಂಪೂರ್ಣ ಸಿನಿಮಾ ಕಡೆ ಹರಿಸಿದ್ದಾರೆ. ನಾಗಚೈತನ್ಯ ಅಭಿನಯದ ಬಂಗಾರರಾಜು ಚಿತ್ರ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಬಾಕ್ಸ್​ಆಫೀಸ್​ನಲ್ಲಿ ಸದ್ದು ಮಾಡುತ್ತಿದೆ. ಇತ್ತ ಸಮಂತಾ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ನಟ ಅಲ್ಲು ಅರ್ಜುನ್​ ಅಭಿನಯದ ಪುಷ್ಪ ಚಿತ್ರದಲ್ಲಿ ಮೊದಲ ಬಾರಿಗೆ ಐಟಂ ಡಾನ್ಸ್​ನಲ್ಲಿ ಸಮಂತಾ ಸೊಂಟ ಬಳುಕಿಸಿದ್ದು, ಹಾಡು ಸಿಕ್ಕಾಪಟ್ಟೆ ಹಿಟ್​ ಆಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net