

ಹೈದರಾಬಾದ್: ಬಾಲಿವುಡ್ನಲ್ಲಿ 2013ರಲ್ಲಿ ತೆರೆಕಂಡ ‘ಮದ್ರಾಸ್ ಕೆಫೆ’ ಚಿತ್ರದೊಂದಿಗೆ ಸಿನಿಮಾ ಕೆರಿಯರ್ ಆರಂಭಿಸಿದ್ದ ರಾಶಿ ಖನ್ನಾ, ಅದಾದ ಮೇಲೆ ದಕ್ಷಿಣದ ಸಿನಿಮಾಗಳಲ್ಲಿಯೇ ಹೆಚ್ಚು ಕಾಣಿಸಿಕೊಂಡರು. ಈಗಲೂ ತಮಿಳು ಮತ್ತು ತೆಲುಗಿನಲ್ಲಿ ರಾಶಿ ತುಂಬಾ ಬಿಜಿಯಾಗಿದ್ದಾರೆ. ಇದರ ನಡುವೆ ಹಿಂದಿಗೂ ಕಮ್ ಬ್ಯಾಕ್ ಮಾಡಿರುವ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.
ಸದ್ಯ ರಾಶಿ ಅವರು ಟಾಲಿವುಡ್ ಸೂಪರ್ ಸ್ಟಾರ್ ಗೋಪಿಚಂದ್ ನಟನೆಯ "ಪಕ್ಕಾ ಕಮರ್ಷಿಯಲ್" ಸಿನಿಮಾದಲ್ಲಿ ನಟಿಸಿದ್ದು, ಈ ಚಿತ್ರ ನಾಳೆ (ಜುಲೈ 1) ಬಿಡುಗಡೆಯಾಗುತ್ತಿದೆ. ಹೀಗಾಗಿ ಪ್ರಚಾರದಲ್ಲಿ ಭಾಗಿಯಾಗಿರುವ ರಾಶಿ, ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ನೀಡಿರುವ ಹೇಳಿಕೆ ಭಾರೀ ವೈರಲ್ ಆಗಿದೆ.
ಕಾಮಿಡಿ ಮಾಡುವುದು ತುಂಬಾ ಕಷ್ಟ. ಹಾಸ್ಯ ಪಾತ್ರಗಳಲ್ಲಿ ನಟಿಸುವುದು ಕಷ್ಟಕರ ಎಂಬುದನ್ನು ಕಂಡುಕೊಂಡಿದ್ದೇನೆ. ಅದಕ್ಕಿಂತ ರೊಮ್ಯಾನ್ಸ್ ಮಾಡುವುದೇ ತುಂಬಾ ಸುಲಭ. ಕಾಮಿಡಿಗಿಂತ ಹೀರೋಗಳ ಜೊತೆಯಲ್ಲಿ ರೊಮ್ಯಾನ್ಸ್ ಮಾಡುವುದೇ ತುಂಬಾ ಸುಲಭ ಎಂದು ನನಗೀಗ ಅನಿಸುತ್ತಿದೆ ಎಂದಿದ್ದಾರೆ.
ಇದುವರೆಗೂ ಸಾಕಷ್ಟು ಸಿನಿಮಾಗಳಲ್ಲಿ ನಾನು ಇಂಟಿಮೇಟ್ ದೃಶ್ಯಗಳಲ್ಲಿ ನಟಿಸಿದ್ದೇನೆ. ಅಂತಹ ದೃಶ್ಯಗಳಿಂದ ತುಂಬಾ ಬೇಸರವಾಗಿದೆ. ಇದೇ ಮೊದಲ ಬಾರಿಗೆ ಪಕ್ಕಾ ಕಮರ್ಷಿಯಲ್ ಸಿನಿಮಾದಲ್ಲಿ ಕಾಮಿಡಿ ಪಾತ್ರವನ್ನು ಮಾಡಿದ್ದೇನೆ. ಕಾಮಿಡಿಯನ್ನು ತುಂಬಾ ಎಂಜಾಯ್ ಮಾಡಿದ್ದೇನೆ. ನನ್ನ ಕಾಮಿಡಿ ಟೈಮ್ ಕೂಡ ಈ ಸಿನಿಮಾದಲ್ಲಿ ಚೆನ್ನಾಗಿದೆ. ಸಿನಿಮಾ ನೋಡುವ ಪ್ರೇಕ್ಷಕರು ತುಂಬಾ ನಗಲಿದ್ದಾರೆ ಎಂದಿದ್ದಾರೆ. (ಏಜೆನ್ಸೀಸ್)