ಲೋಹಿತ್​ ಅಂದ್ರೆ ಅಲ್ಪಾಯುಷಿ, ಪುನೀತ್​ ಅಂದ್ರೆ... ಹೆಸರು ಬದಲಾವಣೆ ಹಿಂದಿನ ಕಾರಣ ತಿಳಿಸಿದ ಚಿನ್ನೇಗೌಡ

Puneeth
Published on

ಬೆಂಗಳೂರು: ಅಸಂಖ್ಯಾತ ಅಭಿಮಾನಿಗಳ ಮನದಲ್ಲಿ ‘ರಾಜಕುಮಾರ’ನಂತೆ ಮೆರೆದಿದ್ದ ಕರುನಾಡಿನ ‘ವೀರ ಕನ್ನಡಿಗ’, ಸ್ಯಾಂಡಲ್​ವುಡ್​ನ ‘ಪವರ್​ಸ್ಟಾರ್​’, ಕನ್ನಡಿಗರ ಪ್ರೀತಿಯ ಅಪ್ಪು ನಮ್ಮನ್ನಗಲಿ ಇಂದಿಗೆ ಐದು ದಿನಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ ರಾಜ್​ ಕುಟುಂಬ ಅಪ್ಪು ಸಮಾಧಿಗೆ 5ನೇ ದಿನದ ಹಾಲು-ತುಪ್ಪ ಕಾರ್ಯ ನೇರವೇರಿಸಿದೆ.

ಕಾರ್ಯಕ್ರಮದ ಬಳಿಕ ಮಾತನಾಡಿದ ಪುನೀತ್​ ಅವರ ಮಾವ ಚಿನ್ನೇಗೌಡ ಅವರು ಮಾಸ್ಟರ್​ ಲೋಹಿತ್​ ಎಂದಿದ್ದ ಹೆಸರನ್ನು ಪುನೀತ್​ ಎಂದು ಬದಲಾಯಿಸಲು ಕಾರಣವನ್ನು ತಿಳಿಸಿದರು.

ಲೋಹಿತ್​ ಅಂದರೆ ಅಲ್ಪಾಯುಷಿ ಅಂತಾ ಆಗಲೇ ಹೇಳಿದ್ದರು. ಹೀಗಾಗಿ ಪುನೀತ್​ ಎಂದು ಬದಲಾಯಿಸಲಾಯಿತು. ಪುನೀತ್​ ಎಂದರೆ ಆಂಜನೇಯ. ಆಂಜನೇಯ ಅಂದರೆ ಚಿರಂಜೀವಿ ಎಂದರ್ಥ. ಹೀಗಾಗಿ ಲೋಹಿತ್​ ಎಂದಿದ್ದ ಹೆಸರನ್ನು ಬದಲಾಯಿಸಲಾಯಿತು ಎಂದು ಚಿನ್ನೇಗೌಡ ಅವರು ತಿಳಿಸಿದರು.

ಹಾಲುತುಪ್ಪ ಕಾರ್ಯದ ಬಗ್ಗೆ ಮಾತನಾಡಿದ ಅವರು ಅಪ್ಪು ಮೃತಪಟ್ಟ ಮೂರನೇ ದಿವಸಕ್ಕೆ ಈಓ ಕಾರ್ಯ ಮಾಡಬೇಕಾಯಿತು. ಆದರೆ, ಇನ್ನು ಅಂತ್ಯಕ್ರಿಯೆ ಆಗದಿದ್ದರಿಂದ ಅಲ್ಲದೆ, ಕುಟುಂಬ ತುಂಬಾ ದಣಿದಿದ್ದರಿಂದ 5ನೇ ದಿನಕ್ಕೆ ಹಾಲು ತುಪ್ಪ ಕಾರ್ಯಕ್ರಮ ನಡೆಯಿತು. ಎಲ್ಲ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಸರ್ಕಾರವನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net