ಅಪ್ಪು ಆರೋಗ್ಯ ಸ್ಥಿತಿ ಗಂಭೀರ: ಗಾಜನೂರಿನಲ್ಲಿದ್ದ ಡಾ.ರಾಜ್ ಕುಟುಂಬಸ್ಥರು ಬೆಂಗಳೂರಿಗೆ ದೌಡು

Puneeth - Final
Puneeth
Published on

ಚಾಮರಾಜನಗರ: ಪುನೀತ್ ರಾಜ್ ಕುಮಾರ್ ಆರೋಗ್ಯ ಸ್ಥಿತಿ ಗಂಭೀರ ಹಿನ್ನಲೆಯಲ್ಲಿ ಗಾಜನೂರಿನಲ್ಲಿದ್ದ ಡಾ.ರಾಜ್ ಕುಟುಂಬಸ್ಥರು ಬೆಂಗಳೂರಿಗೆ ದೌಡಾಯಿಸುತ್ತಿದ್ದಾರೆ.

ಡಾ.ರಾಜ್ ಸಹೋದರಿ, ಮಗ ಗೋಪಾಲ್,‌ ಗೋಪಾಲ್ ಪತ್ನಿ ಪ್ರೇಮ ಬೆಂಗಳೂರಿನತ್ತ ಪಯಣಿಸುತ್ತಿದ್ದಾರೆ. ದೊಡ್ಮನೆಯಿಂದ ಮೊಬೈಲ್ ಕರೆ ಹಿನ್ನಲೆಯಲ್ಲಿ ಸಂಬಂಧಿಕರು ಬೆಂಗಳೂರಿಗೆ ದೌಡಾಯಿಸಿದ್ದಾರೆ.

ಒಂದು ತಿಂಗಳ ಹಿಂದಷ್ಟೇ ಪುನೀತ್​ ಗಾಜನೂರಿಗೆ ಭೇಟಿ ನೀಡಿದ್ದರು. ಸಹೋದರ ಡಾ.ಶಿವರಾಜಕುಮಾರ್ ಜತೆ ಪುನೀತ್ ಭೇಟಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net