ಜಾಲತಾಣದಲ್ಲಿ ತಮ್ಮ ಫೋಟೋ ನೋಡಿ ನಟಿಗೆ ಬಿಗ್​ ಶಾಕ್​: ದೂರಿನ ಬೆನ್ನಲ್ಲೇ ಆರೋಪಿಗಳ ಬಂಧನ

Praveena
Published on

ತಿರುವನಂತಪುರಂ: ಕೇರಳ ನಟಿ ಪ್ರವೀಣಾ ಅವರ ಫೋಟೋವನ್ನು ಅಶ್ಲೀಲವಾಗಿ ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಭಾಗ್ಯರಾಜ್​ (22) ಎಂದು ಗುರುತಿಸಲಾಗಿದ್ದು, ದೆಹಲಿಯಲ್ಲಿ ಬಂಧಿಸಲಾಗಿದೆ.

ಕೇರಳ ಎಡಿಜಿಪಿ ಮನೋಜ್​ ಅಬ್ರಾಹಂ ನಿರ್ದೇಶನದ ಮೇರೆಗೆ ತಿರುವನಂತಪುರಂ ನಗರ ಪೊಲೀಸ್​ ಆಯುಕ್ತ ಬಲರಾಮ್​ ಉಪಾಧ್ಯಾಯ್​ ನೇತೃತ್ವದಲ್ಲಿ ನಡೆದ ತನಿಖೆಯ ವೇಳೆ ಆರೋಪಿಯನ್ನು ಬಂಧಿಸಲಾಗಿದೆ. ಇದಕ್ಕೂ ಮುನ್ನ ತಮಿಳುನಾಡಿನ ಕನ್ಯಾಕುಮಾರಿ ಮೂಲದ ಮಣಿಕಂದನ್​ ಶಂಕರ್​ ಎಂಬಾತನ್ನು ಇದೇ ಪ್ರಕರಣದಲ್ಲಿ ಬಂಧಿಸಲಾಗಿದೆ.

ನಟಿಯ ಹೆಸರಿನಲ್ಲಿ ನಕಲಿ ಖಾತೆ ತೆರೆದು ಎಡಿಟ್​ ಮಾಡಲಾದ ಅಶ್ಲೀಲ ಚಿತ್ರಗಳನ್ನು ಆರೋಪಿಗಳು ಹರಿಬಿಡುತ್ತಿದ್ದರು. ಸಾಮಾಜಿಕ ಜಾಲತಾಣ ವೀಕ್ಷಣೆ ಮಾಡುವಾದ ತಮ್ಮ ಅಶ್ಲೀಲ ಫೋಟೋಗಳನ್ನು ನೋಡಿ ನಟಿಗೆ ಶಾಕ್​ ಆಗಿತ್ತು. ಈ ಸಂಬಂಧ ನಟಿ ಪ್ರವೀಣಾ ದೂರು ದಾಖಲಿಸಿದ್ದರು. ಇದೀಗ ಆರೋಪಿಗಳ ಬಂಧನವಾಗಿದ್ದು, ನಟಿ ಸಂತಸ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net