ಚಾಯ್-ಸ್ಯಾಮ್ ಇಬ್ಬರಲ್ಲಿ ಯಾರು ಮೊದಲು ಡಿವೋರ್ಸ್​ ಬಯಸಿದ್ದು? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ನಾಗಾರ್ಜುನ!

Samantha
Published on

ಹೈದರಾಬಾದ್​: ಮಾಜಿ ತಾರದಂಪತಿ ನಾಗಚೈತನ್ಯ ಮತ್ತು ಸಮಂತಾ ಅವರ ವಿಚ್ಛೇದನ ಸುದ್ದಿ ಇಡೀ ಚಿತ್ರರಂಗ ಹಾಗೂ ಸಿನಿರಸಿಕರನ್ನು ಅಲ್ಲೋಲ ಕಲ್ಲೋಲ ಮಾಡಿದ್ದು ಹಳೇ ಸಂಗತಿಯಾದರೂ, ಇಬ್ಬರ ನಡುವಿನ ಡಿವೋರ್ಸ್​ಗೆ ಕಾರಣ ಏನಿರಬಹುದೆಂಬ ಹುಡಕಾಟ ಇಂದಿಗೂ ನಡೆಯುತ್ತಲೇ ಇದೆ. ಎಲ್ಲ ಅಂತೆ-ಕಂತೆಗಳ ನಡುವೆ ತಾರಾದಂಪತಿಯ ನಡುವೆ ನಡೆದಿದ್ದಾರೂ ಏನು ಎಂಬ ಕುತೂಹಲ ಮನೆ ಮಾಡಿದ್ದು, ಇದೀಗ ನಾಗಚೈತನ್ಯ ಅವರ ತಂದೆ ನಾಗಾರ್ಜುನ ಕೆಲ ಸ್ಫೋಟಕ ಮಾಹಿತಿಗಳನ್ನು ಹೊರಹಾಕಿದ್ದಾರೆ.

ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿರುವ ನಾಗಾರ್ಜುನ, ಮೊದಲು ಡಿವೋರ್ಸ್​ ಬಯಸಿದ್ದು ಮತ್ತು ಅರ್ಜಿ ಹಾಕಿದ್ದು ಸಮಂತಾ ಎಂದು ಹೇಳಿದ್ದಾರೆ. ನಾಗಚೈತನ್ಯ ಆಕೆಯ ನಿರ್ಧಾರವನ್ನು ಸ್ವೀಕರಿಸಿದ ಆದರೆ, ಆತನಿಗೆ ನನ್ನ ಬಗ್ಗೆಯೇ ಚಿಂತೆ ಆಗಿತ್ತು. ನಾನು ಏನು ಅಂದುಕೊಳ್ಳತ್ತೇನೋ ಮತ್ತು ಕುಟುಂಬದ ಗೌರವ ಏನಾಗಬಹುದೆಂದು ಚಿಂತಿಸುತ್ತಿದ್ದ ಎಂದು ತಿಳಿಸಿದ್ದಾರೆ.

ನಾನು ಚಿಂತಾಕ್ರಾಂತನಾಗುತ್ತೇನೆ ಎಂದು ನಾಗಚೈತನ್ಯ ನನಗೆ ತುಂಬಾ ಸಾಂತ್ವನ ಹೇಳಿದ. ದಾಂಪತ್ಯ ಜೀವನದಲ್ಲಿ ಅವರಿಬ್ಬರೂ 4 ವರ್ಷಗಳಿಂದ ಒಟ್ಟಿಗೆ ಇದ್ದಾರೆ ಆದರೆ, ಅಂತಹ ಯಾವುದೇ ಸಮಸ್ಯೆ ಅವರ ನಡುವೆ ಬಂದಿಲ್ಲ. ಇಬ್ಬರೂ ತುಂಬಾ ಆತ್ಮೀಯರಾಗಿದ್ದರು. ಅದು ಹೇಗೆ ಈ ನಿರ್ಧಾರ ಅವರಿಬ್ಬರ ನಡುವೆ ಬಂದಿತು ಎಂದು ನನಗೆ ತಿಳಿದಿಲ್ಲ. 2021ರ ಹೊಸ ವರ್ಷವನ್ನು ಸಹ ಇಬ್ಬರು ಒಟ್ಟಿಗೆ ಕಳೆದರು. 2021ರ ನಂತರವೇ ಇಬ್ಬರ ನಡುವೆ ಏನೋ ಸಮಸ್ಯೆ ಉಂಟಾಗಿರಬಹುದು ಅನಿಸುತ್ತದೆ ಎಂದಿದ್ದಾರೆ.

ಇನ್ನು ನಾಗಚೈತನ್ಯ ಕೂಡ ಬಂಗಾರರಾಜು ಸಿನಿಮಾ ಪ್ರಚಾರದ ವೇಳೆ ಡಿವೋರ್ಸ್​ ಬಗ್ಗೆ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದರು. ಇಬ್ಬರು ಬೇರೆಯಾಗಿರುವುದು ಸರಿ. ಅದು ನಮ್ಮ ವೈಯಕ್ತಿಕ ಸಂತೋಷಕ್ಕಾಗಿ ಮಾಡಿದ ಪರಸ್ಪರ ನಿರ್ಧಾರ. ಅವರು ಸಂತೋಷವಾಗಿದ್ದರೆ, ನಾನು ಕೂಡ ಸಂತೋಷವಾಗಿರುತ್ತೇನೆ. ಅಂತಹ ಪರಿಸ್ಥಿತಿಯಲ್ಲಿ ಡಿವೋರ್ಸ್​ ಒಂದು ಉತ್ತಮ ನಿರ್ಧಾರ ಎಂದು ನಾಗಚೈತನ್ಯ ಹೇಳಿದ್ದಾರೆ. ಸಮಂತಾ ಕೂಡ ಹಲವು ಸಂದರ್ಭದಲ್ಲಿ ಡಿವೋರ್ಸ್​ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net