ಸಾಲಕ್ಕೆ ಹೆದರಿ ದುಡುಕಿನ ನಿರ್ಧಾರ: ಮದ್ವೆಯಾದ ಎರಡೇ ವರ್ಷಕ್ಕೆ ಮೈಸೂರಿನಲ್ಲಿ ದಂಪತಿ ಬದುಕು ದುರಂತ ಅಂತ್ಯ

MYS Couple
Published on

ಮೈಸೂರು: ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ದಂಪತಿ ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಉದಯಗಿರಿಯ ಸಾತಗಳ್ಳಿ ಲೇಔಟ್​ನಲ್ಲಿ ನಿನ್ನೆ (ಜ.26) ನಡೆದಿದೆ.

ಸಂತೋಷ್(26) ಮತ್ತು ಭವ್ಯಾ (22) ಮೃತ ದಂಪತಿ. ಮೊದಲು ಊಟದಲ್ಲಿ ವಿಷ ಬೆರೆಸಿಕೊಂಡು ದಂಪತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದು ಕುಟುಂಬಸ್ಥರಿಗೆ ತಿಳಿದು ಕೂಡಲೇ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆಗೆ ಸಹಕರಿಸದೆ ಇಬ್ಬರೂ ಕೊನೆಯುಸಿರೆಳೆದಿದ್ದಾರೆ.

ಮದುವೆಯಾಗಿ ಕೇವಲ ಎರಡು ವರ್ಷ ಕಳೆದಿತ್ತು. ಕಳೆದ ಕೆಲ ದಿನಗಳಿಂದ ದಂಪತಿ ಆರ್ಥಿಕ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದರು. ಹೀಗಾಗಿ ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಉದಯಗಿರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net