More

    ಅಲ್ಲು ಅರ್ಜುನ್​ಗೆ 100 ಕೋಟಿ ರೂಪಾಯಿ? ಎರಡನೆಯ ಪಟ್ಟಕ್ಕೇರಿದ ನಟ

    ‘ಪುಷ್ಪ’ ಚಿತ್ರದಿಂದ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವುದಷ್ಟೇ ಅಲ್ಲ, ಅವರ ಸಂಭಾವನೆಯೂ ಡಬಲ್ ಆಗಿದೆ. ‘ಪುಷ್ಪ’ ಚಿತ್ರಕ್ಕೆ ಅವರು 40 ಕೋಟಿ ಸಂಭಾವನೆ ಪಡೆದಿದ್ದರಂತೆ. ಇದೀಗ ಹೊಸ ಚಿತ್ರವೊಂದಕ್ಕೆ ಅರ್ಜುನ್, 100 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೂಲಕ 100 ಕೋಟಿ ರೂ. ಸಂಭಾವನೆ ಪಡೆಯುತ್ತಿರುವ ಪ್ರಭಾಸ್ ನಂತರ ತೆಲುಗಿನ ಎರಡನೇ ನಟರಾಗಿದ್ದಾರೆ.

    ಮೂಲಗಳ ಪ್ರಕಾರ, ತಮಿಳಿನ ಜನಪ್ರಿಯ ನಿರ್ಮಾಣ ಸಂಸ್ಥೆಯಾದ ಲೈಕಾ ಪ್ರೊಡಕ್ಷನ್ಸ್, ತಮ್ಮ ಮುಂದಿನ ಚಿತ್ರದಲ್ಲಿ ನಟಿಸುವಂತೆ ಅಲ್ಲು ಅರ್ಜುನ್​ಗೆ ಕೇಳಿಕೊಂಡಿದೆಯಂತೆ. ನಟಿಸಿದರೆ 100 ಕೋಟಿ ರೂ. ಸಂಭಾವನೆ ಕೊಡುವುದಕ್ಕೂ ತಯಾರಿದೆಯಂತೆ. ಈ ಚಿತ್ರವನ್ನು ಅಟ್ಲಿ ಕುಮಾರ್ ನಿರ್ದೇಶಿಸುವ ಸಾಧ್ಯತೆ ಇದೆ. ಈಗಾಗಲೇ ಅರ್ಜುನ್ ಮತ್ತು ಅಟ್ಲಿ ಇಬ್ಬರಿಗೂ ಆಫರ್ ನೀಡಲಾಗಿದ್ದು, ಇಬ್ಬರ ಕಡೆಯಿಂದಲೂ ಇನ್ನಷ್ಟೇ ಗ್ರೀನ್ ಸಿಗ್ನಲ್ ಬರಬೇಕಿದೆ.

    ಒಂದು ಪಕ್ಷ ಇಬ್ಬರು ಒಪ್ಪಿಕೊಂಡರೂ, ಚಿತ್ರ ಶುರುವಾಗುವುದಕ್ಕೆ ಇನ್ನೊಂದು ವರ್ಷವಾದರೂ ಬೇಕು. ಏಕೆಂದರೆ, ಅರ್ಜುನ್ ಮೊದಲಿಗೆ ‘ಪುಷ್ಪ 2’ ಚಿತ್ರವನ್ನು ಮುಗಿಸಬೇಕಿದೆ. ಆ ಚಿತ್ರ ನವೆಂಬರ್​ನಲ್ಲಿ ಬಿಡುಗಡೆಯಾದ ಮೇಲಷ್ಟೇ, ಹೊಸ ಚಿತ್ರದ ಬಗ್ಗೆ ಗಮನಹರಿಸಲಿದ್ದಾರೆ. -ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts