

ಹೈದರಾಬಾದ್: ಸುಮಾರು 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಟಾಲಿವುಡ್ನ ಹಿರಿಯ ನಟಿ ಪದ್ಮಾ ಜಯಂತಿ ಈಗಲೂ ಅನೇಕ ಸಿನಿಮಾಗಳಲ್ಲಿ ತಮ್ಮ ನಟನೆಯನ್ನು ಮುಂದುವರಿಸಿದ್ದಾರೆ. ಇತ್ತೀಚೆಗಷ್ಟೇ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ತೆಲುಗು ಚಿತ್ರರಂಗದ ಹಿರಿಯ ಹಾಸ್ಯ ಕಲಾವಿದನ ಬಗ್ಗೆ ಶಾಕಿಂಗ್ ಆರೋಪ ಮಾಡಿದ್ದಾರೆ.
ದಿವಂಗತ ಹಾಸ್ಯನಟ ಎಂ.ಎಸ್. ನಾರಾಯಣ ಅವರು ಶೂಟಿಂಗ್ ಸೆಟ್ಗೆ ಕುಡಿದು ಬಂದು ಅಸಭ್ಯವಾಗಿ ವರ್ತಿಸಿದ್ದಾಗಿ ಪದ್ಮಾ ಅವರು ಆರೋಪಿಸಿದ್ದಾರೆ. ನಾನು ಇಂಡಸ್ಟ್ರಿಯಲ್ಲಿ ತುಂಬಾ ಕಷ್ಟಪಟ್ಟಿದ್ದೇನೆ. ಆದರೆ, ನಾನೆಂದು ಕಣ್ಣೀರಾಕಲಿಲ್ಲ. ಆದರೆ, ಅನೇಕರು ಕಣ್ಣೀರಾಕಿರುವುದನ್ನು ನಾನು ನೋಡಿದ್ದೇನೆ. ಅನೇಕ ರೀತಿಯಲ್ಲಿ ಹಲವರು ನನಗೆ ಕಿರುಕುಳ ನೀಡಿದ್ದಾರೆ ಎಂದು ದೂರಿದ್ದಾರೆ.
ನಾರಾಯಣ ಮತ್ತು ನಾನು ಒಟ್ಟಿಗೆ ಸಿನಿಮಾ ಮಾಡಿದ್ದೇವೆ. ನನ್ನ ಅತ್ತೆ ಸಾವಿಗೀಡಾದ ಒಂದು ತಿಂಗಳ ಬಳಿಕ ನಾನು ಸಿನಿಮಾ ಶೂಟಿಂಗ್ಗೆ ಹಾಜರಾದೆ. ಸುಮಾರು 22 ಹಾಸ್ಯ ಕಲಾವಿದರ ಸಮ್ಮುಖದಲ್ಲಿ ಶೂಟಿಂಗ್ ನಡೆಯುತ್ತಿತ್ತು. ನಾನು ಸೆಟ್ನಲ್ಲಿ ಕುಳಿತಿದ್ದೆ. ಈ ವೇಳೆ ಹಿಂದಿನಿಂದ ಬಂದು ನನ್ನ ಕೈ ಹಿಡಿಕೊಂಡು ತಬ್ಬಿಕೊಳ್ಳಲು ಮುಂದಾದರು. ಯಾರೆಂದು ತಿರುಗಿ ನೋಡಿದಾಗ ಹಿಂದೆ ನಾರಾಯಣ ಇದ್ದರು.
ಅಷ್ಟಕ್ಕೆ ಸುಮ್ಮನಾಗದ ಅವರು ನನ್ನನ್ನು ಎಳೆದು ತಬ್ಬಿಕೊಂಡರು. ಏನಿದು ಸರ್ ಎಂದು ಪ್ರಶ್ನಿಸಿದೆ. ಈಗ ಮಾತನಾಡುವ ಸಮಯವಲ್ಲ. ನನ್ನೊಂದಿಗೆ ಬಾ ಎಂದು ಕರೆದೊಯ್ದರು. ಅವರ ಬಾಯಿಯಿಂದ ಮಧ್ಯದ ವಾಸನೆ ಬರುತ್ತಿತ್ತು. ಪಾನಮತ್ತ ಸ್ಥಿತಿಯಲ್ಲಿ ನನ್ನನ್ನು ಹಿಡಿದುಕೊಂಡು ರೂಮ್ ಒಳಗೆ ಎಳೆದುಕೊಂಡು ಹೋಗಿ ಲಾಕ್ ಮಾಡಿಕೊಂಡರು.
ಮತ್ತೆ ಏನು ಮಾಡುತ್ತೀದ್ದೀರಾ ಸರ್ ಎಂದು ಪ್ರಶ್ನಿಸಿದೆ. ಹಿಡಿದುಕೊಂಡಿದ್ದ ನನ್ನ ಕೈಯನ್ನು ಬಿಟ್ಟು, ನೀನು ಸುಂದರವಾಗಿದ್ದೀಯ.. ತುಂಬಾ ಸೆಕ್ಸಿ ಆಗಿದ್ದೀಯ ಎಂದರು. ಅಲ್ಲದೆ, ನಿನ್ನೊಂದಿಗೆ ಕೆಲಸ ಮಾಡಬೇಕೆಂದುಕೊಂಡಿದ್ದೇನೆ ಅಂದರು. ಆದರೆ, ಏನೆಂದು ನನಗೆ ಅರ್ಥವಾಗಲಿಲ್ಲ. ಆ ಬಳಿಕ ಆತನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡೆ. ಅಷ್ಟರಲ್ಲಾಗಲೇ ನನ್ನ ಬಲವಂತಾಗಿ ತಬ್ಬಿಕೊಂಡರು. ಏನು ಮಾಡ್ತಿದ್ದೀರಾ ಸರ್ ಎಂದು ಪ್ರಶ್ನಿಸಿದೆ. ನಾವು ಶೂಟಿಂಗ್ ಸ್ಥಳದಲ್ಲಿದ್ದೇವೆ. ನೀವು ಮಾಡುತ್ತಿರುವುದು ಸರಿಯಲ್ಲ ಎಂದು ಕೇಳಿದೆ. ಆದರೂ ನನ್ನನ್ನು ಬಿಡದೆ ನಾನಿಂದು ಶೂಟಿಂಗ್ ಮೂಡ್ನಲ್ಲಿಲ್ಲ. ಮನೆಗೆ ಹೋಗೋಣ ನಡಿ ಎಂದರು.
ಈ ವೇಳೆ ಇಬ್ಬರ ನಡುವೆ ತುಂಬಾ ಗಲಾಟೆ ನಡೆಯಿತು. ಆದರೂ ನನ್ನೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುತ್ತಲೇ ಇದ್ದರು. ನಾನು ನಿರಾಕರಿಸಿದೆ. ಅಳಲು ಆರಂಭಿಸಿದೆ. ಆದರೆ, ತಕ್ಷಣ ನನ್ನನ್ನು ಎತ್ತಿಕೊಂಡು ಕೆಳಗೆ ಬೀಳಿಸಿ ಅತ್ಯಾಚಾರ ಮಾಡಲ ಯತ್ನಿಸಿದರು. ನಾನು ಜೋರಾಗಿ ಕಿರುಚಿಕೊಂಡೆ. ಈ ವೇಳೆ ಎಲ್ಲರೂ ಓಡಿ ಬಂದರು. ನಾರಾಯಣರನ್ನು ಹೊರಗಡೆ ಎಳೆದೊಯ್ದು ನನ್ನನ್ನು ಸಮಾಧಾನಪಡಿಸಿದರು.
ಅಂದು ಅವರೊಬ್ಬ ದೊಡ್ಡ ಹಾಸ್ಯ ಕಲಾವಿದನಾಗಿದ್ದರಿಂದ ಈ ವಿಚಾರವನ್ನು ದೊಡ್ಡದು ಮಾಡಲಿಲ್ಲ. ಆದರೆ, ಸುಮ್ಮನೇ ಬಿಡಬಾರದೆಂಬ ಉದ್ದೇಶದಿಂದ ನಾನು ಸಂಘಟನೆಯಲ್ಲಿ ದೂರು ನೀಡಿದೆ. ಹಿರಿಯ ಬಂದು ಮಾತನಾಡುವುದಾಗಿ ಹೇಳಿದರು. ಅದರಂತೆ ಹಿರಿಯರು ಬಂದು ನನ್ನನ್ನು ಕರೆದರು. ನಿನಗೆ ಯಾವುದೇ ಜೀವನವಿಲ್ಲ. ನೀವು ದೊಡ್ಡ ಬಂಡೆಗೆ ಡಿಕ್ಕಿ ಹೊಡೆಯುತ್ತಿದ್ದೀಯ ಎಂದು ಹೇಳುವ ಮೂಲಕ ಪ್ರಕರಣವನ್ನು ದೊಡ್ಡದು ಮಾಡಬೇಡ ಎಂದರು. ನಾನು ಅದರಿಂದ ಹಿಂದೆ ಸರಿಯಲಿಲ್ಲ.
ನಾನಿಂದು ಸುಮ್ಮನಾಗಿಬಿಟ್ಟರೆ, ನನ್ನಂತಹ ಜನರು ತೊಂದರೆ ಅನುಭವಿಸುತ್ತಾರೆ ಎಂದು ನಾನು ಭಾವಿಸಿದೆ. ಇದೇ ವೇಳೆ ನನಗನಿಸಿದ್ದೇನೆಂದರೆ, ನಮಗೆ ಬೆಂಬಲವಿಲ್ಲದಿದ್ದರೆ ಯಾರಾದರೂ ಲಾಭ ಪಡೆಯುತ್ತಾರೆ ಎಂದು ತಿಳಿಯಿತು. ಈ ಘಟನೆಯಿಂದ ಸುಮಾರು 10 ಚಿತ್ರಗಳನ್ನು ಕಳೆದುಕೊಂಡೆ. ಇದರ ನಡುವೆ ಅನೇಕರು ಬೆದರಿಕೆ ಹಾಕಿದರು. ನಂತರದ ದಿನಗಳಲ್ಲಿ ಉದ್ಯಮವು ಘಟನೆಯನ್ನು ಮರೆಯುತ್ತಾ ಬಂದಿತು. ಮತ್ತೆ ನಾನು ನಿಧಾನವಾಗಿ ನನ್ನ ಚಲನಚಿತ್ರಗಳಲ್ಲಿ ತೊಡಗಿಕೊಂಡೆ ಎಂದು ಪದ್ಮ ಜಯಂತಿ ಅವರು ತನಗಾದ ಅನ್ಯಾಯದ ಬಗ್ಗೆ ಹೇಳಿದರು. (ಏಜೆನ್ಸೀಸ್)