ಅತಿ ಹೆಚ್ಚು ಗಳಿಕೆ ಮಾಡಿದ ದಕ್ಷಿಣ ಭಾರತ ಸಿನಿಮಾಗಳ ಪಟ್ಟಿ ಹೀಗಿದೆ... ಕೆಜಿಎಫ್​-2 ಎಷ್ಟನೇ ಸ್ಥಾನದಲ್ಲಿದೆ?

South Films
Published on

ಹೈದರಾಬಾದ್: ದಕ್ಷಿಣ ಭಾರತದ ಚಿತ್ರಗಳ ಆರ್ಭಟಕ್ಕೆ ಬಾಲಿವುಡ್​ ಕಂಗಾಲಾಗಿದೆ. ಹಿಂದೆ ಬಿಗ್​ಬಜೆಟ್​ ಸಿನಿಮಾಗಳಿಗೆ ಬಾಲಿವುಡ್​ ಹೆಸರಾಗಿತ್ತು. ಆದರೆ, ಈಗ ನಾವ್ಯಾರಿಗೂ ಕಮ್ಮಿ ಇಲ್ಲ ಎನ್ನುವಂತೆ ದಕ್ಷಿಣ ಭಾರತದ ಚಿತ್ರರಂಗ ಬಿಗ್​ಬಜೆಟ್​ ಜತೆ ವಿಭಿನ್ನ ಕಥಾಹಂರದ ಮೂಲಕ ಬಾಲಿವುಡ್​ಗೆ ಟಕ್ಕರ್​ ಕೊಡುತ್ತಿವೆ. ಬಾಲಿವುಡ್​ ಬಾಕ್ಸ್​ಆಫೀಸ್​ನಲ್ಲಿಯೂ ದಕ್ಷಿಣ ಭಾರತದ ಚಿತ್ರಗಳದ್ದೇ ಹವಾ ಜೋರಾಗಿದೆ. ಇದು ಹೀಗೆ ಮುಂದುವರಿದರೆ ಇಡೀ ಭಾರತೀಯ ಚಿತ್ರರಂಗವನ್ನು ದಕ್ಷಿಣ ಭಾರತದ ಚಿತ್ರರಂಗ ಆಳುವುದರಲ್ಲಿ ಸಂಶಯವೇ ಇಲ್ಲ.

ಬಾಹುಬಲಿಯಿಂದ ಹಿಡಿದು ಇತ್ತೀಚೆಗೆ ಬಿಡುಗಡೆಯಾದ ಕೆಜಿಎಫ್​ ಚಾಪ್ಟರ್​ 2 ಚಿತ್ರದವರೆಗೂ ಎಲ್ಲ ಸಿನಿಮಾಗಳು ಬಾಲಿವುಡ್​ ಗಲ್ಲಾಪೆಟ್ಟಿಗೆಯನ್ನೂ ದೋಚಿವೆ. ಹಾಗಾದರೆ, ಇದುವರೆಗೂ ಹೆಚ್ಚು ಗಳಿಕೆ ಮಾಡಿದ ದಕ್ಷಿಣ ಭಾರತದ ಸಿನಿಮಾಗಳ ಪಟ್ಟಿ ಹೀಗಿದೆ ನೋಡಿ....

  1. ಬಾಹುಬಲಿ-2: 1810 ಕೋಟಿ ರೂ.
  2. RRR: 1071 ಕೋಟಿ ರೂ.
  3. 2ಪಾಯಿಂಟ್0 : 709 ಕೋಟಿ ರೂ.
  4. ಬಾಹುಬಲಿ: 605 ಕೋಟಿ ರೂ.
  5. ಕೆಜಿಎಫ್: ಚಾಪ್ಟರ್​ 2 : ರೂ 500 ಕೋಟಿ (4 ದಿನಗಳು)
  6. ಸಾಹೋ: 435 ಕೋಟಿ ರೂ.
  7. ಪುಷ್ಪ: 360 ಕೋಟಿ ರೂ.
  8. ಬಿಗಿಲ್: 300 ಕೋಟಿ ರೂ.
  9. ಕಬಾಲಿ: 294 ಕೋಟಿ ರೂ.
  10. ರೋಬೋಟ್: 288 ಕೋಟಿ ರೂ.
  11. ಸರ್ಕಾರ್: 260 ಕೋಟಿ ರೂ.
  12. ಅಲಾ ವೈಕುಂಠಪುರಮುಲೂ: 256.35 ಕೋಟಿ ರೂ.
  13. ಮೆರ್ಸಲ್: 245 ಕೋಟಿ ರೂ.
  14. ಕೆಜಿಎಫ್‌ಸಿ ಚಾಪ್ಟರ್-1 : 242 ಕೋಟಿ ರೂ.
  15. ಐ: 240 ಕೋಟಿ ರೂ.
  16. ಸೈರಾ ನರಸಿಂಹ ರೆಡ್ಡಿ: 236.40 ಕೋಟಿ ರೂ.
  17. ಮಾಸ್ಟರ್: 236 ಕೋಟಿ ರೂ.
  18. ಪೆಟ್ಟಾ: 228 ಕೋಟಿ ರೂ.
  19. ಸರಿಲೇರು ನೀಕೆವ್ವರು : 223.05 ಕೋಟಿ ರೂ.
  20. ರಂಗಸ್ಥಳ: 216.70 ಕೋಟಿ ರೂ.
  21. ದರ್ಬಾರ್: 205 ಕೋಟಿ ರೂ.

(ಸುದ್ದಿಮೂಲ : ಟಾಲಿವುಡ್​ ಡಾನ್​ ನೆಟ್​ ವೆಬ್​ಸೈಟ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net