More

    ಪ್ರೇಕ್ಷಕರು ಕೆಜಿಎಫ್​ 2 ಅನ್ನೇ ಮರೆತುಬಿಡಬೇಕು.. ಪುಷ್ಪ ನಿರ್ದೇಶಕ ಸುಕುಮಾರ್ ಹಿಂದೆ ಬಿದ್ದ ಬನ್ನಿ ಫ್ಯಾನ್ಸ್​​

    ಬೆಂಗಳೂರು​: ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಚಾಪ್ಟರ್​-2 ಸಿನಿಮಾ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ. ಕೆಜಿಎಫ್​ ಚಾಪ್ಟರ್​ 1 ಗಿಂತ ಚಾಪ್ಟರ್​ 2 ಎಲ್ಲೆಡೆ ಅದ್ಧೂರಿ ಓಪನಿಂಗ್​ ಪಡೆದುಕೊಂಡಿದ್ದು, ಮೊದಲ ದಿನವೇ 150 ಕೋಟಿಗೂ ಅಧಿಕ ಕಲೆಕ್ಷನ್​ ಮಾಡಿದೆ. ಅಲ್ಲಿಗೆ ಎರಡೂ ಚಾಪ್ಟರ್​ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದೇ ಗೆಲುವು ಪುಷ್ಪ ಚಿತ್ರದ ನಿರ್ದೇಶಕ ಸುಕುಮಾರ್​ ಮೇಲೆ ಬಿದ್ದಿದೆ ಎಂದು ಹೇಳಲಾಗಿದೆ.

    ಹೀಗೊಂದು ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ. ಈಗಾಗಲೇ ಪುಷ್ಪ ಮೊದಲನೇ ಭಾಗ ಬಿಡುಗಡೆಯಾಗಿದ್ದು, ಕೆಜಿಎಫ್​ನಷ್ಟು ಸದ್ದು ಮಾಡದಿದ್ದರೂ ತಕ್ಕಮಟ್ಟಿಗೆ ಹೆಸರು ಮಾಡಿದೆ. ಇದೀಗ ಪುಷ್ಟ ಎರಡನೇ ಭಾಗಕ್ಕೆ ಸಿದ್ಧತೆ ನಡೆದಿದೆ. ಸದ್ಯ ನಿರ್ದೇಶಕ ಸುಕುಮಾರ್​ ಅಮೆರಿಕ ಪ್ರವಾಸದಲ್ಲಿ ಇರುವುದರಿಂದ ಪುಷ್ಪ ನಿರ್ಮಾಣ ಕೊಂಚ ವಿಳಂಬವಾಗಲಿದೆ. ಕೆಜಿಎಫ್​ 2 ನೋಡಿದ ಮೇಲೆ ಕೆಲವು ಸಂಗತಿಗಳನ್ನು ಬದಲಾಯಿಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಇದಲ್ಲದೆ, ಪುಷ್ಪ 2ನೇ ಭಾಗದ ಕ್ಲೈಮ್ಯಾಕ್ಸ್​ ಬದಲಾಯಿಸುವಂತೆಯೂ ಮತ್ತು ತಾಯಿ ಸೆಂಟಿಮೆಂಟ್​ ಜಾಸ್ತಿ ಇಡುವಂತೆ ಕೇಳಿಕೊಂಡಿದ್ದಾರೆ.

    ಕೆಜಿಎಫ್​ 2 ಅನ್ನು ಸೋಲಿಸುವಂತಹ ಸ್ಟೋರಿ ಲೈನ್​ ಇರುವಂತೆ ಸ್ಕ್ರೀಪ್ಟ್​ ರೆಡಿ ಮಾಡುವಂತೆ ಅಲ್ಲು ಅರ್ಜುನ್​ ಫ್ಯಾನ್ಸ್​ ಸುಕುಮಾರ್​ ಅವರಿಗೆ ಒತ್ತಾಯಿಸಿದ್ದಾರೆ. ಕೆಜಿಎಫ್​ 2 ಅನ್ನೇ ಪ್ರೇಕ್ಷಕರ ಮರೆತುಬಿಡುಬೇಕು ಅಂತಹ ಬಲವಾದ ಸ್ಕ್ರೀನ್​ ಪ್ಲೇ ಬರೆಯುವಂತೆ ಕೇಳಿಕೊಂಡಿದ್ದಾರೆ.

    ಆದರೆ, ಸುಕುಮಾರ್​ ಅವರು ಅಭಿಮಾನಿಗಳು ಹೇಳಿದಂತೆ ಬದಲಾವಣೆ ಮಾಡುತ್ತಾರಾ? ಅಥವಾ ತಮ್ಮ ಮೂಲ ಸ್ಕ್ರಿಪ್ಟ್​ ಹೇಗಿದೆ ಹಾಗೇ ಅದನ್ನು ಮುಂದುವರಿಸುತ್ತಾರೋ ಕಾದು ನೋಡಬೇಕಿದೆ. ಮುಂದಿನ ದಿನಗಳಲ್ಲಿ ಯಾವ ರೀತಿ ಸುಕುಮಾರ್​ ಪ್ರತಿಕ್ರಿಯೆ ನೀಡುತ್ತಾರೆ ಎಂಬುದು ಅಭಿಮಾನಿಗಳ ಕುತೂಹಲವಾಗಿದೆ.

    ಇನ್ನು ಕೆಜಿಎಫ್​ 2 ವಿಚಾರಕ್ಕೆ ಬರುವುದಾದರೆ, ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಸ್ಮ್​ ಕೆಜಿಎಫ್​-ಚಾಪ್ಟರ್​ 2ನ ಭಾರತದಾದ್ಯಂತದ ಮೊದಲ ದಿನದ ಗಳಿಕೆ 134.5 ಕೋಟಿ ರೂಪಾಯಿ ಎಂದು ತಿಳಿಸಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ.. ಹೀಗೆ ಐದು ಭಾಷೆಗಳಲ್ಲಿ ತೆರೆ ಕಂಡಿರುವ ಈ ಚಿತ್ರದ ಮೊದಲ ದಿನದ ಗಳಿಕೆ 134.5 ಕೋಟಿ ರೂ. ಆಗಿದೆ. ಇನ್ನು ಜಗತ್ತಿನಾದ್ಯಂತದ ಗಳಿಕೆ ಸುಮಾರು 150 ಕೋಟಿ ರೂ. ಎನ್ನಲಾಗುತ್ತಿದೆ. (ಏಜೆನ್ಸೀಸ್​)

    ಕೆಜಿಎಫ್​-2 ಮಾಡಿದ ನಿಮ್ಗೆ ನಾಚಿಕೆಯಾಗ್ಬೇಕು, ಟಾಪ್ ಕ್ಲಾಸ್ ಲದ್ದಿ ಚಿತ್ರ, 3 ಗಂಟೆಯ ಟಾರ್ಚರ್​ ಎಂದ ವಿಮರ್ಶಕ

    ಗುಟ್ಕಾ ವ್ಯಾಪಾರಿಯ ಮನೆಯ ಬೆಡ್​ ಅಡಿಯಲ್ಲಿ ರಾಶಿ ರಾಶಿ ಹಣ ಪತ್ತೆ: ಒಟ್ಟು ಮೊತ್ತ ಕೇಳಿದ್ರೆ ಬೆರಗಾಗ್ತೀರಾ!

    ರೈಲು ಹಾದು ಹೋಗುತ್ತಿದ್ರೂ ಹಳಿಯ ಮೇಲೆ ಮಲಗಿ ಮೊಬೈಲ್​ನಲ್ಲಿ ಬಿಜಿಯಾಗಿದ್ದ ಮಹಿಳೆ: ವಿಡಿಯೋ ವೈರಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts