ನವದೆಹಲಿ: ಮೇಲೆ ರೈಲು ಚಲಿಸುತ್ತಿದ್ದರು ಏನು ಆಗೇ ಇಲ್ಲ ಎನ್ನುವಂತೆ ಮಹಿಳೆಯೊಬ್ಬಳು ಕೆಳಗಿನ ಹಳಿಯ ಮೇಲೆ ಮಲಗಿ ಆರಾಮವಾಗಿ ಮೊಬೈಲ್ನಲ್ಲಿ ಮಾತನಾಡುತ್ತಿರುವ ಶಾಕಿಂಗ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾನ್ಸು ಕಾಬ್ರಾ ಅವರು ಏಪ್ರಿಲ್ 12ರಂದು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, ಫೋನ್ನಲ್ಲಿ ಗಾಸಿಪ್ ಮಾಡುವುದೇ ಹೆಚ್ಚು ಮುಖ್ಯ ಎಂದು ಅಡಿಬರಹ ನೀಡಿದ್ದಾರೆ. ಸದ್ಯ ಈ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.
ವಿಡಿಯೋದಲ್ಲಿ ಏನಿದೆ?: ಗೂಡ್ಸ್ ರೈಲೊಂದು ರೈಲು ನಿಲ್ದಾಣವನ್ನು ದಾಟುತ್ತಿದಂತೆ ಅದರ ಕೆಳಗೆ ಮಲಗಿದ್ದ ತಲೆಗೆ ದುಪ್ಪಟ್ಟ ಸುತ್ತಿಕೊಂಡಿದ್ದ ಮಹಿಳೆಯೊಬ್ಬಳು ಎದ್ದು ನಿಲ್ಲುತ್ತಾಳೆ. ಈ ವೇಳೆ ಆಕೆ ಮೊಬೈಲ್ನಲ್ಲಿ ಯಾರೊಂದಿಗೆ ಮಾತನಾಡುತ್ತಿರುತ್ತಾಳೆ. ರೈಲು ತನ್ನ ಮೇಲೆಯೇ ಹಾದು ಹೋಗಿದೆ ಎಂಬ ಒಂದು ಚೂರು ಭಯವೂ ಆಕೆಯ ವರ್ತನೆಯಲ್ಲಿ ಕಾಣಿಸುವುದಿಲ್ಲ.
ಈ ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ, ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ಮಹಿಳೆಯ ಬೇಜವಾಬ್ದಾರಿ ವಿರುದ್ಧ ಕಿಡಿಕಾರಿದ್ದಾರೆ. ಆಕೆಯ ಕಪಾಳಕ್ಕೆ ಒಂದು ಬಾರಿಸಬೇಕಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)
फ़ोन पर gossip, ज़्यादा ज़रूरी है 🤦🏻♂️ pic.twitter.com/H4ejmzyVak
— Dipanshu Kabra (@ipskabra) April 12, 2022
ನಿಮ್ಮ ತುಟಿಯ ಗಾತ್ರವೆಷ್ಟು? ನೆಟ್ಟಿಗನ ವಿಚಿತ್ರ ಪ್ರಶ್ನೆಗೆ ಶ್ರುತಿ ಹಾಸನ್ ಖಡಕ್ ಉತ್ತರ ಹೀಗಿತ್ತು…
ಕೆಜಿಎಫ್-2 ಮಾಡಿದ ನಿಮ್ಗೆ ನಾಚಿಕೆಯಾಗ್ಬೇಕು, ಟಾಪ್ ಕ್ಲಾಸ್ ಲದ್ದಿ ಚಿತ್ರ, 3 ಗಂಟೆಯ ಟಾರ್ಚರ್ ಎಂದ ವಿಮರ್ಶಕ
ಅಸಭ್ಯ ವರ್ತನೆ ಆರೋಪ: ಉಪನ್ಯಾಸಕನಿಗೆ ಸ್ಟಾಫ್ರೂಮ್ನಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಉಪನ್ಯಾಸಕಿಯರು