ಆರ್​ಜಿವಿ ಸಂದರ್ಶನದಲ್ಲಿ ಲೈಂಗಿಕತೆ ಬಗ್ಗೆ ಬಿಚ್ಚು ಮಾತು: ನಟಿ ಆಶು ರೆಡ್ಡಿ ಕುಟುಂಬದಲ್ಲಿ ಅಲ್ಲೋಲ ಕಲ್ಲೋಲ!

Ashu Reddy
Published on

ಹೈದರಾಬಾದ್​: ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಅವರು ವಿವಾದಗಳ ಕೇಂದ್ರ ಬಿಂದು ಎಂಬುದು ಗೊತ್ತಿರುವ ವಿಚಾರ. ಸದಾ ವಿವಾದಗಳನ್ನೇ ಹುಟ್ಟುಹಾಕವ ಮೂಲಕ ಸುದ್ದಿಯಾಗುವುದೇ ಇವರ ಖಯಾಲಿಯಾಗಿದೆ. ಕೆಲ ದಿನಗಳ ಹಿಂದಷ್ಟೇ ಬಿಗ್​ಬಾಸ್​ ಬ್ಯೂಟಿ ಅರಿಯಾನಾ ಗ್ಲೋರಿ ಜತೆಗೆ ಆರ್​ಜಿವಿ ಒನ್​ ಟು ಒನ್​ ಸಂದರ್ಶನದಲ್ಲಿ ಬೋಲ್ಡ್​ ಆಗಿ ಮಾತನಾಡಿದ್ದ ವಿಡಿಯೋ ವೈರಲ್​ ಆಗಿತ್ತು. ಇದಾದ ಕೆಲವೇ ದಿನಗಳಲ್ಲಿ ಮತ್ತೊಬ್ಬ ಬಿಗ್​ಬಾಸ್​ ಬ್ಯೂಟಿ ಆಶು ರೆಡ್ಡಿ ಜತೆ "ಬೋಲ್ಡ್​ ಇಂಟರ್ವ್ಯೂವ್​ ವಿತ್​ ಆಶು ರೆಡ್ಡಿ" ಎಂಬ ಸಂದರ್ಶನ ಮಾಡಿದರು.

ಸಂದರ್ಶನದಲ್ಲಿ ಆರ್​ಜಿವಿ ಹೆಣ್ಣಿನ ಮೈಮಾಟ ಮತ್ತು ಲೈಂಗಿಕ ಕ್ರಿಯೆ ಇದರ ಬಗ್ಗೆಯೇ ಆಶು ರೆಡ್ಡಿ ಅವರೊಂದಿಗೆ ಚರ್ಚೆ ನಡೆಸಿದ್ದರು. ಆರ್​ಜಿವಿ ಸಂದರ್ಶನದಲ್ಲಿ ಆಶು ರೆಡ್ಡಿಯ ಅಂಗಾಗಳ ಬಗ್ಗೆ ನೇರವಾಗಿಯೇ ಮಾತನಾಡಿದ್ದರು. ಆಶು ರೆಡ್ಡಿ ಎಲ್ಲಿಯೂ ಮುಜಗರ ಪಟ್ಟುಕೊಳ್ಳದೆ ಆರ್​ಜಿವಿ ಜತೆ ಬೋಲ್ಡ್​ ಆಗಿ ಸಂದರ್ಶನದಲ್ಲಿ ಮಾತನಾಡಿದ್ದರು. ಅಲ್ಲದೆ, ಇಡೀ ಸಂದರ್ಶನದಲ್ಲಿ ಆಶು ರೆಡ್ಡಿಯ ದೇಹದ ಅಂಗಾಗಳನ್ನು ಆರ್​ಜಿವಿ ತಮ್ಮ ಮೊಬೈಲ್​ ಕ್ಯಾಮರಾದಲ್ಲಿ ಸೆರೆಹಿಡಿಯುತ್ತಿರುವ ದೃಶ್ಯವೂ ಇತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ, ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು.

ಆರ್​ಜಿವಿ ಸಂದರ್ಶನ ನೋಡಿದ ಆಶು ರೆಡ್ಡಿ ಅವರ ತಾಯಿಯೂ ಕೂಡ ಆರಂಭದಲ್ಲಿ ಮಗಳ ಬೆಂಬಲಕ್ಕೆ ನಿಂತಿದ್ದರು. ಆದರೆ, ವಾಸ್ತವ ಬೇರೆಯೇ ಇದೆ ಎಂಬುದು ಇದೀಗ ಬಯಲಾಗಿದೆ. ಸಂದರ್ಶನದ ಬಗ್ಗೆ ಆಶು ರೆಡ್ಡಿ ಕುಟುಂಬ ತುಂಬಾ ಅಸಮಾಧಾನಗೊಂಡಿದೆ. ಅದರಲ್ಲೂ ಸಂದರ್ಶನದಲ್ಲಿ ಆಶು ರೆಡ್ಡಿಯ ದೇಹದ ಅಂಗಾಗಾಗಳನ್ನು ಸೆರೆಹಿಡಿದು ವಿಡಿಯೋದಲ್ಲಿ ತೋರಿಸಿರುವ ಬಗ್ಗೆ ಕುಟುಂಬಕ್ಕೆ ತುಂಬಾ ಬೇಸರ ತರಿಸಿದೆಯಂತೆ. ಹೀಗಾಗಿ ಆರ್​ಜಿವಿ ಮಾತ್ರವಲ್ಲದೆ, ಸಂದರ್ಶನದಲ್ಲಿ ಕಾಣಿಸಿಕೊಂಡ ಆಶು ರೆಡ್ಡಿ ಮೇಲೆಯೂ ಕುಟುಂಬ ಗರಂ ಆಗಿದೆ.

ಬಿಗ್​ಬಾಸ್ ಶೋ ನಂತರ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳಲು ಆಶು ರೆಡ್ಡಿ ಯೋಚಿಸಿದರು. ಆದರೆ, ನಂತರ ಸ್ಟಾರ್ ಮಾ ಅವರ ಜಬರ್ದಸ್ತ್ ಸೀಸನ್​ನಲ್ಲಿ ಆಶು ರೆಡ್ಡಿ ಭಾಗವಹಿಸಿದರು. ಈ ಕಾರ್ಯಕ್ರಮದಲ್ಲಿ ಆಕೆಯ ಹಾಸ್ಯ ಪ್ರಜ್ಞೆ ಪ್ರಶಂಸೆಗೆ ಒಳಗಾಗುವ ಸಮಯದಲ್ಲಿ ಆರ್​ಜಿವಿ ಜತೆಗಿನ ಬೋಲ್ಡ್​ ಸಂದರ್ಶನವು ಆಕೆಯ ಕುಟುಂಬಕ್ಕೆ ಸ್ವಲ್ಪ ತೊಂದರೆಯಾಗಿದೆ ಎಂದು ಕೆಲವು ಮೂಲಗಳು ತಿಳಿಸಿವೆ

ಬೆಳ್ಳಿತೆರೆಯಲ್ಲಿ ಗ್ಲಾಮರಸ್​ ಆಗಿ ಕಾಣಿಸಿಕೊಳ್ಳುವುದೇನೋ ಸರಿ ಆದರೆ, ಉದ್ದೇಶಪೂರ್ವಕವಾಗಿ ಇಂತಹ ಬೋಲ್ಡ್​ ಸಂದರ್ಶನಗಳಲ್ಲಿ ಮೈಮಾಟ ಪ್ರದರ್ಶನ ಮಾಡುವುದು ಮತ್ತು ತೋರಿಸುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನು ಆಶು ರೆಡ್ಡಿ ಕುಟುಂಬ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.

ಆಶು ರೆಡ್ಡಿ ಯಾರು ಎಂದು ನೋಡುವುದಾದರೆ, ಆಕೆ ತೆಲುಗು ಚಿತ್ರರಂಗದ ನಟಿ. ಅಲ್ಲದೆ, ಡಬ್​ಸ್ಮ್ಯಾಶರ್​ ಕೂಡ ಹೌದು. ಚಲ್​ ಮೋಹನ್​ ರಂಗ ಚಿತ್ರದ ಮೂಲಕ ಟಾಲಿವುಡ್​ ಚಿತ್ರರಂಗದಲ್ಲಿ ತಮ್ಮ ಸಿನಿ ಜರ್ನಿ ಆರಂಭಿಸಿದ್ದಾರೆ. ಬಿಗ್​ಬಾಸ್​ ಸಿಸನ್​ 3ರಲ್ಲಿ ತುಂಬಾ ಗುರುತಿಸಿಕೊಂಡವರು. ಹ್ಯಾಪಿ ಡೇಸ್ ಎಂಬ ಕಾರ್ಯಕ್ರಮದ ಮೂಲಕ ಟಿವಿ ನಿರೂಪಕರಾಗಿಯು ಕಾಣಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ರಾಜ್ಯಸಭಾ ಸಂಸದ ಜೋಗಿನಪಲ್ಲಿ ಸಂತೋಷ್ ರೆಡ್ಡಿ ಆರಂಭಿಸಿದ ಗ್ರೀನ್ ಇಂಡಿಯಾ ಚಾಲೆಂಜ್​ನಲ್ಲಿ ಭಾಗವಹಿಸಿ, ಜುಬಿಲಿ ಹಿಲ್ಸ್‌ನ ಜಿಎಚ್‌ಎಂಸಿ ಪಾರ್ಕ್‌ನಲ್ಲಿ ಸಸಿಗಳನ್ನು ನೆಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಆಶು ರೆಡ್ಡಿ ಇನ್​ಸ್ಟಾಗ್ರಾಂಲ್ಲಿ 1 ಮಿಲಿಯನ್​ ಫಾಲೋವರ್ಸ್​ ಹೊಂದಿದ್ದಾರೆ. ನೋಡಲು ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ಹೋಲಿಕೆಯು ಆಕೆಗೆ ಸ್ವಲ್ಪ ಖ್ಯಾತಿಯನ್ನು ತಂದುಕೊಟ್ಟಿದೆ.

ಕೆಲವು ತಿಂಗಳ ಹಿಂದೆ ಬಿಗ್​ಬಾಸ್​ ಬ್ಯೂಟಿ ಅರಿಯಾನಾ ಜತೆ ಆರ್​ಜಿವಿ ಬೋಲ್ಡ್​ ಸಂದರ್ಶನ ಮಾಡಿದ್ದರು. ದೇಹದ ಅಂಗಾಂಗ, ಸೆಕ್ಸ್​, ರೊಮ್ಯಾನ್ಸ್​, ಸಂಬಂಧ (ಅಫೇರ್​) ಮುಂತಾದ ವಿಚಾರಗಳ ಬಗ್ಗೆ ಮುಕ್ತಾವಾಗಿ ಆರ್​ಜಿವಿ ಮಾತನಾಡಿದ್ದರು. ಅದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ಅಲ್ಲದೆ, ಟ್ರೋಲಿಗರಿಗೆ ಆರ್​​ಜಿವಿ ಮತ್ತು ಅರಿಯಾನಾ ಹಾಟ್​ ಸಂದರ್ಶನವು ಆಹಾರವಾಗಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net