ಸಮಂತಾ-ನಾಗಚೈತನ್ಯ ಮನಸ್ತಾಪಕ್ಕೆ ಇದೇ ಕಾರಣನಾ? ಟಾಲಿವುಡ್​ ಅಂಗಳದಲ್ಲಿ ಹೀಗೊಂದು ಬಿಸಿ ಬಿಸಿ ಚರ್ಚೆ..!

Samantha
Published on

ಹೈದರಾಬಾದ್​: ನಾಗಚೈತನ್ಯ ಹಾಗೂ ಸಮಂತಾ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, ಡಿವೋರ್ಸ್​ ಹಂತಕ್ಕೆ ತಲುಪಿದೆ ಎಂಬ ವಿಚಾರ ಬೆಳಕಿಗೆ ಬಂದಾಗಿನಿಂದ ಸಮಂತಾ ಟಾಕ್​ ಆಫ್​ ದಿ ಟೌನ್​ ಆಗಿದ್ದಾರೆ. ಅಕ್ಕಿನೇನಿ ಕುಟುಂಬದಿಂದ ಸಮಂತಾ ಅಂತರ ಕಾಯ್ದುಕೊಂಡಿದ್ದು, ಇಬ್ಬರ ನಡುವೆ ಏನೂ ಸರಿಯಿಲ್ಲ ಎಂಬುದು ಬಹುತೇಕ ಖಚಿವಾದಂತಿದೆ. ಆದರೆ, ಇದುವರೆಗೂ ಯಾರೋಬ್ಬರು ಈ ಬಗ್ಗೆ ಬಹಿರಂಗವಾಗಿ ಎಲ್ಲೂ ಹೇಳಿಕೊಂಡಿಲ್ಲ.

ಆದರೆ, ಸಮಂತಾ ನಡೆ ಮಾತ್ರ ಅದಕ್ಕೆ ಪುಷ್ಠಿ ನೀಡುವಂತಿದೆ. ಇತ್ತೀಚೆಗೆ ನಾಗಾರ್ಜುನ ಬರ್ತಡೇ ಪಾರ್ಟಿಯಲ್ಲಿ ಭಾಗವಹಿಸದೇ ಕೇವಲ ಶುಭಕೋರಿದ್ದರು. ಅಲ್ಲದೆ, ಸಂದರ್ಭ ಬಂದಾಗ ಎಲ್ಲವನ್ನು ಹೇಳುತ್ತೇನೆಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಸಂದರ್ಶನವೊಂದರಲ್ಲಿ ಸಮಂತಾ ಹೇಳಿದ್ದರು. ಮದುವೆಯ ಬಳಿಕ ಯಾವುದೇ ಪ್ರವಾಸ ಕೈಗೊಂಡರು ಸಮಂತಾ ಮತ್ತು ನಾಗಚೈತನ್ಯ ಒಟ್ಟಿಗೆ ಹೋಗುತ್ತಿದ್ದರು. ಆದರೆ, ಎಲ್ಲಿಗೆ ಹೋದರು ಸಮಂತಾ ಒಂಟಿಯಾಗೇ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇಬ್ಬರ ನಡುವೆ ಯಾವುದು ಸರಿಯಿಲ್ಲ ಎಂಬ ಚರ್ಚೆಗೆ ಪುಷ್ಠಿ ನೀಡಿದೆ.

ಇನ್ನು ಸಮಂತಾ ಮತ್ತು ನಾಗಚೈತನ್ಯ ನಡುವಿನ ವೈಮನಸ್ಸಿಗೆ ಕಾರಣ ಏನಿರಬಹುದು ಎಂಬ ವಿಚಾರಗಳ ಕಡೆ ಗಮನಹರಿಸಿದಾಗ ಒಂದಿಷ್ಟು ಅಂಶ ಬೆಳಕಿಗೆ ಬರುತ್ತಿದೆ. ಕೆಲವು ಮೂಲಗಳ ಪ್ರಕಾರ ಸಮಂತಾ ಇತ್ತೀಚೆಗೆ ತುಂಬಾ ಬೋಲ್ಡ್​ ಆಗಿ ಕಾಣಿಸಿಕೊಳ್ಳುತ್ತಿರುವುದು ಅಕ್ಕಿನೇನಿ ಕುಟುಂಬಕ್ಕೆ ಇರುಸು-ಮುರುಸು ತಂದಿದೆ ಎನ್ನಲಾಗಿದೆ. ಫೋಟೋಶೂಟ್​ ಆಗಿರಬಹುದು ಅಥವಾ ಸಿನಿಮಾ ಆಗಿರಬಹುದು ಸಮಂತಾ ಅರಬೆತ್ತಲೆಯಾಗಿ ಕಾಣಿಸಿಕೊಳ್ಳುತ್ತಿರುವುದೇ ಕುಟುಂಬದ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಅಲ್ಲದೆ, ಮದುವೆಯ ಬಳಿಕ ಸಮಂತಾ ಅತ್ತೆ ಅಮಲಾ ಅಕ್ಕಿನೇನಿಯಂತೆ ಇರಬೇಕೆಂಬುದು ನಾಗ ಚೈತನ್ಯ ಮತ್ತು ನಾಗಾರ್ಜುನ ಬಯಕೆ ಎಂದು ಹೇಳಲಾಗಿದೆ. ಆದರೆ, ಸಮಂತಾ ಇದಕ್ಕೆ ವಿರುದ್ಧವಾಗಿರುವುದೇ ಕುಟುಂಬದಲ್ಲಿ ಮನಸ್ತಾಪಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಇತ್ತಿಚೆಗೆ ತೆರೆಕಂಡ ಹಾಗೂ ಸಮಂತಾ ಕೊನೆಯದಾಗಿ ಕಾಣಿಸಿಕೊಂಡ "ದಿ ಫ್ಯಾಮಿಲಿ ಮ್ಯಾನ್​ 2" ವೆಬ್​ ಸರಣಿಯು ಕೂಡ ಅಕ್ಕಿನೇನಿ ಕುಟುಂಬದ ಮನಸ್ತಾಪಕ್ಕೆ ಒಂದು ಕಾರಣವಾಗಿದೆ. ಈ ಚಿತ್ರದಲ್ಲಿ ಸಮಂತಾ ತುಂಬಾ ಬೋಲ್ಡ್​ ಪಾತ್ರದಲ್ಲಿ ನಟಿಸಿದ್ದಾರೆ. ಸರಸ ಸಲ್ಲಾಪ ದೃಶ್ಯದಲ್ಲಿ ಅರಬೆತ್ತಲೆಯಾಗಿ ಮೈಮಾಟ ಪ್ರದರ್ಶಿಸಿರುವುದು ಕೂಡ ಅಕ್ಕಿನೇನಿ ಕುಟುಂಬಕ್ಕೆ ಬೇಸರ ತರಿಸಿದೆ ಎಂದು ಟಾಲಿವುಡ್​ ಅಂಗಳದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.

ಈಗಾಗಲೇ ಸಮಂತಾ ಮತ್ತು ನಾಗಚೈತನ್ಯ ಕೌಟುಂಬಿಕ ನ್ಯಾಯಾಲಯ ಮೆಟ್ಟಿಲೇರಿದ್ದು, ಆಪ್ತ ಸಮಾಲೋಚನೆ ನಡೆದಿದೆ. ಆದರೂ ಇಬ್ಬರ ಮನಸ್ಸು ಬದಲಾಗಿಲ್ಲ ಮತ್ತು ತಮ್ಮ ತಮ್ಮ ದಾರಿಯನ್ನು ನೋಡಿಕೊಳ್ಳಲು ಬಯಸಿರುವುದಾಗಿ ತಿಳಿದುಬಂದಿದೆ. ಡಿವೋರ್ಸ್​ ಪಡೆಯಲೇಬೇಕೆಂದು ಇಬ್ಬರು ಈಗಾಗಲೇ ದೃಢ ನಿರ್ಧಾರ ಮಾಡಿದ್ದು, ಇನ್ನು ಎರಡ್ಮೂರು ತಿಂಗಳಲ್ಲಿ ಎಲ್ಲ ಪ್ರಕ್ರಿಯೆ ಮುಗಿದ ಬಳಿಕ ತಾರಾದಂಪತಿ ಬೇರೆ-ಬೇರೆಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಆಪ್ತ ಮೂಲಗಳಿಗೆ ಮಾಹಿತಿ ಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net