ಪ್ರಿಯಾಮಣಿ ಬಿಕಿನಿ ಸಾಂಗ್​: ತುಂಬಾ ವರ್ಷಗಳ ಬಳಿಕ ವಿವಾದವೊಂದಕ್ಕೆ ತೆರೆಎಳೆದ ನಿರ್ಮಾಪಕ!

Priyamani
Published on

ಹೈದರಾಬಾದ್​: ಬಹುಭಾಷಾ ನಟಿ ಪ್ರಿಯಾಮಣಿ ಅವರು ರಾಷ್ಟ್ರಪ್ರಶಸ್ತಿ ಜಯಿಸಿದ ದಕ್ಷಿಣ ಭಾರತದ ಖ್ಯಾತ ಕಲಾವಿದೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ತಮ್ಮದೇ ಛಾಪು ಮೂಡಿಸಿರುವ ಪ್ರಿಯಾಮಣಿ ಅಸಂಖ್ಯಾತ ಅಭಿಮಾನಿಗಳ ಬಳಗವನ್ನೇ ಹೊಂದಿದ್ದಾರೆ.

ನಟನೆಗೂ ಸೈ, ಡ್ಯಾನ್ಸ್​ಗೂ ಸೈ, ಅಷ್ಟೇ ಯಾಕೆ ಬೋಲ್ಡ್​ ಪಾತ್ರಗಳಿಗೂ ಜೀವ ತುಂಬುವ ಸಕಲಕಲಾವಲ್ಲಭೆ ಎಂದರೆ ತಪ್ಪಾಗಲಾರದು. ಇದೀಗ ಪ್ರಿಯಾಮಣಿ ಕುರಿತು ನಿರ್ಮಾಪಕ ಡಿ.ಎಸ್​. ರಾವ್​ ಅವರು ಮಾತನಾಡಿದ್ದು, ಚಿತ್ರವೊಂದರ ವಿವಾದಕ್ಕೆ ಬಹುದಿನಗಳ ಬಳಿಕ ತೆರೆಎಳೆದಿದ್ದಾರೆ.

ಪ್ರಿಯಾಮಣಿ ತೆಲುಗು ಚಿತ್ರ ದ್ರೋಣದಲ್ಲಿ ಬಿಕಿನಿ ತೊಡುವ ಮೂಲಕ ತುಂಬಾ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದರು. ದ್ರೋಣ ಚಿತ್ರದಲ್ಲಿ ನಿತಿನ್​, ಸೀತಾ, ಮುಕೇಶ್​ ರಿಶಿ, ಬಾಬು ಆಂಟೋನಿ ಮತ್ತು ರಾಖಿ ಸಾವಂತ್​ ಸಹ ನಟಿಸಿದ್ದಾರೆ. ಈ ಚಿತ್ರವನ್ನು ಕರುಣ್​ ಕುಮಾರ್ ಅವರು ನಿರ್ದೇಶಿಸಿದ್ದು, ಆಭರಣ ಕದಿಯುವ ಸುತ್ತಾ ಚಿತ್ರಕತೆ ಸಾಗುತ್ತದೆ.

ಈ ಚಿತ್ರ 2009ರಲ್ಲಿ ಬಿಡುಗಡೆಯಾದರೂ ಬಾಕ್ಸ್​ ಆಫೀಸ್​ನಲ್ಲಿ ಹೇಳಿಕೊಳ್ಳುವಷ್ಟು ಕಮಾಲ್​ ಮಾಡಲಿಲ್ಲ. ಆದರೆ, ಪ್ರಿಯಾಮಣಿ ಅವರ ಬಿಕಿನಿ ಡ್ರೆಸ್​ ಆ ಸಂದರ್ಭದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಈಗಲೂ ಪ್ರಿಯಾಮಣಿ ಅವರ ಬಿಕಿನಿ ಸಾಂಗ್​ ಪಡ್ಡೆ ಹುಡುಗರ ಫೇವರಿಟ್​ ಆಗಿದೆ.

ಇತ್ತೀಚೆಗೆ ಚಿತ್ರದ ನಿರ್ಮಾಪಕ ಡಿ.ಎಸ್​. ರಾವ್​ ಸಂದರ್ಶನವೊಂದರಲ್ಲಿ ಭಾಗವಹಿಸಿ ದ್ರೋಣ ಚಿತ್ರದ ವೇಳೆ ಕೇಳಿಬಂದಿದ್ದ ವಿವಾದ ಬಗ್ಗೆ ಮೆಲುಕು ಹಾಕಿದರು. ಚಿತ್ರದಲ್ಲಿ ಬಿಕಿನಿ ತೊಡಲು ಪ್ರಿಯಾಮಣಿ ಭಾರಿ ಹಣವನ್ನು ತೆಗೆದುಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಪ್ರಿಯಾಮಣಿ ಮೊದಲು ನಿಗದಿಯಾಗಿದ್ದ ಹಣಕ್ಕಿಂತ ಹೆಚ್ಚಿನ ಹಣಕ್ಕಾಗಿ ಡಿಮ್ಯಾಂಡ್​ ಮಾಡಲೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಚಿತ್ರದಲ್ಲಿ ಬಿಕಿನಿ ಡ್ರೆಸ್​ ಹಾಕಬೇಕೆಂದು ಕೇಳಿದಾಗಲೇ ಅವರು ಒಪ್ಪಿಕೊಂಡರು. ಬಿಕಿನಿ ಹಾಕಿಕೊಂಡು ಸಾಂಗ್​ನಲ್ಲಿ ಕಾಣಿಸಿಕೊಳ್ಳುವ ಭರವಸೆಯನ್ನು ನೀಡಿದರು. ಅದರಂತೆಯೇ ಶೂಟಿಂಗ್​ನಲ್ಲಿ ಭಾಗವಹಿಸಿದರು ಎಂದು ರಾವ್​ ಹೇಳಿಕೊಂಡಿದ್ದಾರೆ.

ಇನ್ನು ಪ್ರಸ್ತುತ ಸಿನಿಮಾ ವಿಚಾರಕ್ಕೆ ಬರುವುದಾರೆ, ರಾಣಾ ದಗ್ಗುಬಾಟಿ ಹಾಗೂ ಸಾಯಿ ಪಲ್ಲವಿ ಅಭಿನಯದ ವಿರಾಟ ಪರ್ವಂ ಚಿತ್ರದಲ್ಲಿ ಪ್ರಮುಖ ಪಾತ್ರಕ್ಕೆ ಪ್ರಿಯಾಮಣಿ ಬಣ್ಣ ಹಚ್ಚಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net