ನೆರೆಮನೆ ಮಗುವಿನ ಜೀವ ಉಳಿಸಲು ಪ್ರಾಣತ್ಯಾಗ ಮಾಡಿದ ಯುವತಿ..!

Kerala girl
Published on

ಕಣ್ಣೂರು: ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ನೆರೆಮನೆಯ ಮಗುವಿನ ಪ್ರಾಣ ಉಳಿಸಲು ಹೋಗಿ ಯುವತಿಯೊಬ್ಬಳು ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ಕೇರಳದ ಮಟ್ಟನೂರ್​ ನದಿಯಲ್ಲಿ ನಡೆದಿದೆ.

ಮೃತಳನ್ನು ಅಮೃತಾ (25) ಎಂದು ಗುರುತಿಸಲಾಗಿದೆ. ಗುರುವಾರ ಬೆಳಗ್ಗೆ ಈ ಘಟನೆ ನಡೆದಿದೆ.

ನದಿಗೆ ಬಿದ್ದ ನೆರೆಮನೆಯ ಮಗುವನ್ನು ಕಾಪಾಡಲು ಅಮೃತಾ ನದಿಗೆ ಜಿಗಿದಿದ್ದಳು. ಆದರೆ, ಸುಳಿಗೆ ಸಿಲುಕಿ ಅಮೃತಾ ಪ್ರಾಣ ಬಿಟ್ಟಿದ್ದಾಳೆ. ಅದೃಷ್ಟವಶಾತ್​ ಘಟನೆಯಲ್ಲಿ ಮಗು ಬದುಕುಳಿದಿದೆ.

ಅಮೃತ ಮುಂಡೇರಿ ಪ್ರೌಢಶಾಲೆಯ ಲ್ಯಾಬ್ ಸಹಾಯಕ ಸಿ ಬಾಲಕೃಷ್ಣನ್ ಮತ್ತು ರಮಣಿಯವರ ಪುತ್ರಿ. ಅನಘಾ ಅವಳ ಸಹೋದರಿ. ಇದೀಗ ಮಗಳನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net