

ಮುಂಬೈ: 2015ರಲ್ಲಿ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಮತ್ತು ಪವನ್ ಒಡೆಯರ್ ಕಾಂಬಿನೇಷನ್ನಲ್ಲಿ ‘ರಣವಿಕ್ರಮ’ ಸಿನಿಮಾ ತೆರೆಕಂಡಿತ್ತು. ಆ ಸಿನಿಮಾ ಮೂಲಕ ಕನ್ನಡಿಗರಿಗೂ ಪರಿಚಯವಾಗಿದ್ದರು ಹಾಟ್ ಬ್ಯೂಟಿ ಅದಾ ಶರ್ಮಾ. ನೀಳ ಮೈಮಾಟ ಮತ್ತು ಹಾಲಿನ ಬಣ್ಣದ ಚೆಲುವೆಯನ್ನೂ ಅಷ್ಟೇ ಪ್ರೀತಿಯಿಂದಲೇ ಸ್ವಾಗತಿಸಿದ್ದರು ಇಲ್ಲಿನ ಸಿನಿಮಾ ಪ್ರೇಮಿಗಳು. ಆ ಸಿನಿಮಾದ ಬಳಿಕ ಮತ್ತೆ ಕನ್ನಡಕ್ಕೆ ಅವರ ಆಗಮನ ಆಗಲಿಲ್ಲ. ತೆಲುಗು ತಮಿಳು ಮತ್ತು ಹಿಂದಿಯಲ್ಲಿ ತೊಡಗಿಸಿಕೊಂಡರಾದರೂ, ಬೆರಳಣಿಕೆ ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಅದನ್ನು ಬಿಟ್ಟರೆ ಅದಾ ಶರ್ಮಾ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ.
ಅದಾ ಶರ್ಮಾ ಆಗಾಗ ಹಾಟ್ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿರುತ್ತಾರೆ. ಇದೀಗ ಪ್ರಕೃತಿ ನನ್ನ ಫ್ಯಾಷನ್ ಸ್ಫೂರ್ತಿ ಎಂಬ ಅಡಿಬರಹದೊಂದಿಗೆ ಒಂದಿಷ್ಟು ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಅಂದಹಾಗೆ ಫೋಟೋದಲ್ಲಿ ಅದಾ ಶರ್ಮಾ ಎಲೆಯಿಂದ ಮಾಡಿದ ಲಾಂಗ್ ಗೌನ್ ಮಾದರಿಯ ಉಡುಪನ್ನು ಧರಿಸಿದ್ದಾರೆ. ವಿವಿಧ ಭಂಗಿಗಳಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಪ್ರಕೃತಿಯಲ್ಲಿ ಯಾವುದೂ ಪರಿಪೂರ್ಣವಲ್ಲ, ಆದರೆ ಎಲ್ಲವೂ ಇದೆ. ಸಾಕಷ್ಟು ನೀರು ಕುಡಿಯಿರಿ ಮತ್ತು ಯಾವಾಗಲೂ ನಿಮ್ಮ ಬೇರುಗಳನ್ನು ನೆನಪಿಡಿ ಎಂದು ಫೋಟೋ ಬಗ್ಗೆ ಅದಾ ಶರ್ಮಾ ಬರೆದುಕೊಂಡಿದ್ದಾರೆ. ಎಲ್ಲ ಫೋಟೋಗಳು ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ.
ಅದಾ ಶರ್ಮಾ ಫೋಟೋಗಳಿಗೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು, ತುಂಬಾ ಹಾಟ್ ಆಗಿ ಕಾಣುತ್ತಿದ್ದೀರಿ ಎಂದಿದ್ದಾರೆ. ಇನ್ನು ಕೆಲವರು ಆಕ್ಸಿಜನ್ ಬೇಕಾದರೂ ಅದಾ ಬಳಿ ಹೋಗಬಹುದು ಎಂದಿದ್ದಾರೆ. ಅದಾರ ಈ ಫೋಟೋಗಳನ್ನು ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ. (ಏಜೆನ್ಸೀಸ್)