ಅರೆ ಬೆತ್ತಲಾಗಿ ಸರಸ ಸಲ್ಲಾಪ ದೃಶ್ಯದಲ್ಲಿ ನಟನೆ: ಶೂಟಿಂಗ್​ ಸ್ಥಳದಲ್ಲೇ ಗಳಗಳನೇ ಕಣ್ಣೀರಿಟ್ಟ ನಟಿ..!

Kubbra
Published on

ಮುಂಬೈ: ಸಿನಿಮಾ ಅಂದ್ರೆ ವಾಸ್ತವ ಪ್ರಪಂಚವನ್ನು ಮರುಸೃಷ್ಟಿಸಿ ಬೆಳ್ಳಿ ತೆರೆಯ ಮೇಲೆ ತೋರಿಸುವ ಜಾದೂ ಲೋಕ. ಕೆಲವೊಂದು ಕಾಲ್ಪನಿಕವಾದರೂ ವಾಸ್ತವವಾಗಿ ತುಂಬಾ ಹತ್ತಿರ ಎನ್ನುವಂತೆ ಎಲ್ಲವನ್ನು ನೈಜವಾಗಿ ಕಟ್ಟಿಕೊಡಲಾಗುತ್ತದೆ. ಇನ್ನು ರೊಮ್ಯಾಂಟಿಕ್​ ದೃಶ್ಯಗಳಲ್ಲಂತೂ ಕಲಾವಿದರ ನೈಜ ಅಭಿನಯ ನಿಜ ಜೀವನದ ಮತ್ತೊಂದು ಅಂಶವನ್ನು ಹೊರಗಾಕುತ್ತದೆ.

ಇಂಟಿಮೇಟ್​ ಅಥವಾ ರೊಮ್ಯಾಂಟಿಕ್​ ದೃಶ್ಯಗಳನ್ನು ಪ್ರತ್ಯೇಕವಾಗಿ ಕೆಲವರ ಸಮ್ಮುಖದಲ್ಲೇ ಚಿತ್ರೀಕರಿಸುತ್ತಾರೆಂದು ಕೇಳಿದ್ದೇವೆ. ಇತ್ತೀಚೆಗಂತೂ ಇಂಟಿಮೇಟ್​ ಸೀನ್​ಗಳು ಪ್ರತಿ ಸಿನಿಮಾದ ಭಾಗವಾಗಿರುತ್ತವೆ. ಅದರಲ್ಲೂ ವೆಸ್​ಸೀರಿಸ್​ಗಳಲ್ಲಿ ಇದರ ಭರಾಟೆ ಜೋರಾಗಿರುತ್ತದೆ. ಕುಕೂ ವೆಬ್​ಸೀರಿಸ್​ ಜಾಲತಾಣದಲ್ಲಿ ಖ್ಯಾತಿ ಪಡೆದಿರುವ ನಟಿ ಕುಬ್ರಾ ಸೇಟ್, ಸೂಪರ್​ ಹಿಟ್​ ಸ್ಯಾಕ್ರೆಡ್​ ಗೇಮ್ಸ್​ ಸೀರಿಸ್​ ಸೀಸನ್ 1 ರಲ್ಲಿ ನಟ ನವಾಜುದ್ದೀನ್ ಸಿದ್ದಿಕ್ ಜತೆ ಸರಸ ಸಲ್ಲಾಪ ದೃಶ್ಯದಲ್ಲ;ಇ ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾದ ಚಿತ್ರೀಕರಣದ ಬಗ್ಗೆ ಮಾಧ್ಯಮ ಸಂದರ್ಶನದಲ್ಲಿ ಇತ್ತೀಚೆಗೆ ಮಾತನಾಡಿರುವ ಕುಬ್ರಾ, ಈ ಚಿತ್ರದಲ್ಲಿ ನವಾಜ್​ ಅವರ ಜತೆ ಅನೇಕ ಇಂಟಿಮೇಟ್​ ಸೀನ್​ಗಳಿದ್ದು, ನನ್ನ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿಕೊಂಡಿದ್ದಾರೆ. ನಿರ್ದೇಶಕ ಅನುರಾಗ್​ ಕಶ್ಯಪ್​ ಅವರು ನವಾಜ್​ ಮತ್ತು ನನ್ನ ನಡುವಿನ ಸುಮಾರು 7 ಇಂಟಿಮೇಟ್​ ದೃಶ್ಯಗಳನ್ನು ಚಿತ್ರೀಕರಿಸಿದರು. ಚಿತ್ರೀಕರಣ ಮುಗಿಯುವಷ್ಟರಲ್ಲಿ ನಾನು ತುಂಬಾ ಕಣ್ಣೀರಿಟ್ಟಿದ್ದೆ ಎಂದಿದ್ದಾರೆ.

ಒಂದೇ ಚಿತ್ರದಲ್ಲಿ ಸುಮಾರು 7 ಬಾರಿ ಇಂಟಿಮೇಟ್​ ದೃಶ್ಯಗಳಲ್ಲಿ ನಟಿಸಿದ್ದು ಆಘಾತವಾಯಿತು. ಈಗ ಮುಗಿಯುತ್ತದೆ, ಆಗ ಮುಗಿಯುತ್ತದೆ ಅಂದುಕೊಂಡೆ ಆದರೆ, 7 ಸೀನ್​ಗಳನ್ನು ಚಿತ್ರೀಕರಿಸಲಾಯಿತು. ಇದು ನನ್ನ ಮನಸ್ಸಿಗೆ ತುಂಬಾ ಭಾರವಾಯಿತು. ಅಕ್ಷರಶಃ ನಾನು ಕುಗ್ಗಿ ಹೋದೆ. ನಾನು ಶೂಟಿಂಗ್​ ಸ್ಥಳದಲ್ಲೇ ಅಳುತ್ತಾ ಇದ್ದೆ. ನನ್ನ ದೃಶ್ಯ ಇನ್ನೂ ಬಾಕಿ ಉಳಿದಿರುವುದರಿಂದ ನೀವು ಹೊರಗೆ ಹೋಗಬೇಕು ಎಂದು ನಾನು ಭಾವಿಸುತ್ತೇನೆಂದು ನವಾಜ್​ ಹೇಳಿದರು. ಅಲ್ಲಿಂದ ಹೊರಗಡೆ ಬಂದರೂ ನನ್ನ ಕಣ್ಣೀರು ಮಾತ್ರ ಕರಗಲಿಲ್ಲ ಎಂದು ಕುಬ್ರಾ ಹೇಳಿಕೊಂಡಿದ್ದಾರೆ.

2011ರಲ್ಲಿ ತೆರೆಕಂಡ ರೆಡಿ ಚಿತ್ರದೊಂದಿಗೆ ಪಾದಾರ್ಪಣೆ ಮಾಡಿದ ಕುಬ್ರಾ, ನಂತರದಲ್ಲಿ ಜವಾನಿ ಜಾನೆಮನ್, ಡಾಲಿ ಕಿಟ್ಟಿ ಔರ್ ವೋ ಚಮಕ್ತೆ ಸಿತಾರೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ದಿ ವರ್ಡಿಕ್ಟ್ - ಸ್ಟೇಟ್ ವರ್ಸಸ್ ನಾನಾವತಿ ಮತ್ತು ಇಲ್ಲಿಗಲ್ ವೆಬ್ ಸರಣಿಗಳೊಂದಿಗೆ ಜನಪ್ರಿಯತೆಯನ್ನು ಗಳಿಸಿದ್ದಾರೆ (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net