More

    ಕ್ರೖೆಂ ವಿಭಾಗದ ಡಿಸಿಪಿಯಾದ ಮೇಘನಾ; ಶಿವಾಜಿ ಸುರತ್ಕಲ್ 2 ತಂಡಕ್ಕೆ ಹೊಸ ಸೇರ್ಪಡೆ

    ರಮೇಶ್ ಅರವಿಂದ್ ಅಭಿನಯದ ‘ಶಿವಾಜಿ ಸುರತ್ಕಲ್’ ಚಿತ್ರೀಕರಣ ಇಷ್ಟರಲ್ಲಿ ಶುರುವಾಗಬೇಕಿತ್ತು. ಅಕ್ಟೋಬರ್​ನಲ್ಲಿ ಶುರು ಎಂದು ನಿರ್ದೇಶಕ ಆಕಾಶ್ ಶ್ರೀವತ್ಸ ಸಹ ಹೇಳಿದ್ದರು. ಈ ಮಧ್ಯೆ, ರಮೇಶ್ ನಿರ್ದೇಶನದ ‘100’ ಚಿತ್ರವು ನವೆಂಬರ್​ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಅದರಲ್ಲಿ ರಮೇಶ್ ತೊಡಗಿಸಿಕೊಂಡಿರುವುದರಿಂದ, ‘ಶಿವಾಜಿ ಸರುತ್ಕಲ್ 2’ರ ಚಿತ್ರೀಕರಣ ಡಿಸೆಂಬರ್​ಗೆ ಹೋಗಿದೆ. ಇದೀಗ ಚಿತ್ರತಂಡಕ್ಕೆ ಮೇಘನಾ ಗಾಂವ್ಕರ್ ಎಂಟ್ರಿಕೊಟ್ಟಿದ್ದಾರೆ.

    ಆಕಾಶ್ ಶ್ರೀವತ್ಸ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಥ್ರಿಲ್ಲರ್ ಶೈಲಿಯಲ್ಲಿ ಈ ಸಿನಿಮಾದಲ್ಲಿ ಈಗಾಗಲೇ ರಾಧಿಕಾ ನಾರಾಯಣ್, ರಘು ರಾಮನಕೊಪ್ಪ, ವಿದ್ಯಾ ಮೂರ್ತಿ ಸೇರಿ ಹಲವರು ಮುಂದುವರಿದರೆ, ಇನ್ನೂ ಕೆಲವು ಹೊಸ ಪಾತ್ರಗಳು ಸೇರಿಕೊಂಡಿವೆ. ಆ ಪೈಕಿ ಮೇಘನಾ ಅವರಿಗಿಲ್ಲಿ ವಿಶೇಷ ಪಾತ್ರವೇ ಸಿಕ್ಕಿದೆ. ಬೆಂಗಳೂರು ಸೆಂಟ್ರಲ್ ಅಪರಾಧ ವಿಭಾಗದ ಡಿಸಿಪಿ ದೀಪಾ ಕಾಮತ್ ಹೆಸರಿನ ಪಾತ್ರವನ್ನು ಅವರು ಮಾಡಲಿದ್ದಾರೆ. ಇಂಥ ಪಾತ್ರ ಸಿಕ್ಕಿದ್ದಕ್ಕೂ ಅಷ್ಟೇ ಖುಷಿಯಲ್ಲಿ ‘ವಿಜಯವಾಣಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ.

    ‘ನಾನು ಮೂಲತಃ ಪೊಲೀಸ್ ಕುಟುಂಬದಿಂದ ಬಂದವಳು. ಮನೆಯಲ್ಲಿ ಅಪ್ಪ ನಿವೃತ್ತ ಪೊಲೀಸ್ ಅಧಿಕಾರಿ. ನಟಿಸುವ ಆಸೆಯಿತ್ತಾದರೂ, ನನಗೆ ಇಲ್ಲಿಯವರೆಗೂ ಪೊಲೀಸ್ ಪಾತ್ರ ಸಿಕ್ಕಿರಲಿಲ್ಲ. ಇದೀಗ ನಿಮ್ಮನ್ನೇ ಗಮನದಲ್ಲಿಟ್ಟುಕೊಂಡು ಈ ಪಾತ್ರ ಬರೆದಿದ್ದೇನೆ ಎಂದು ನಿರ್ದೇಶಕರು ಹೇಳಿದಾಗ ಖುಷಿಯಾಯಿತು. ಪಾತ್ರಕ್ಕೆ ತಕ್ಕಂತೆ ಬಾಕ್ಸಿಂಗ್ ತರಬೇತಿ ಪಡೆಯುತ್ತಿದ್ದೇನೆ. ಮಹಿಳಾ ಪೊಲೀಸ್ ಅಧಿಕಾರಿಗಳನ್ನೂ ಸಂರ್ಪಸಿದ್ದೇನೆ. ಅವರಿಂದಲೂ ಮಾಹಿತಿ ಪಡೆಯಲಿದ್ದೇನೆ’ ಎಂಬುದು ಮೇಘನಾ ಮಾತು. ಈ ಚಿತ್ರವನ್ನು ರೇಖಾ.ಕೆ.ಎನ್ ಮತ್ತು ಅನುಪ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಹೊರತುಪಡಿಸಿದರೆ, ಡಿಸೆಂಬರ್​ನಲ್ಲಿ ‘ಕರ್ವ 3’ ಚಿತ್ರದ ಶೂಟಿಂಗ್ ಶುರುವಾಗಲಿದೆ. ’ಶುಭಮಂಗಳ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

    ಶಾರುಖ್ ಪುತ್ರ ಆರ್ಯನ್​ ಖಾನ್​ಗೆ ಜಾಮೀನು ಸಿಗಲು ಕಾರಣವೇನು ಗೊತ್ತೇ?; ಇಲ್ಲಿದೆ ಮಾಹಿತಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts