ಡ್ರಗ್ಸ್​ ದುಷ್ಪರಿಣಾಮಗಳ ಕುರಿತಾದ 'ಕ್ವಿಟ್​' …

Quit
Published on

ಬೆಂಗಳೂರು: ಡ್ರಗ್ಸ್​ ನಿರ್ಮೂಲನೆ ಮತ್ತು ಅದರ ನಶೆಯಿಂದಾಗುವ ದುಷ್ಪರಿಣಾಮಗಳ ಕುರಿತಾಗಿ ಇದುವರೆಗೂ ಹಲವು ಸಿನಿಮಾಗಳು ಮತ್ತು ವೀಡಿಯೋ ಆಲ್ಬಂಗಳು ಬಂದಿವೆ. ಈಗ ಶಿವಮೊಗ್ಗ ಮೂಲದ ಅಮೇರಿಕ ನಿವಾಸಿ ಆದರ್ಶ್ ಅಯ್ಯಂಗಾರ್ ಸಹ ಈ ಕುರಿತು ಒಂದು ಹಾಡು ಮಾಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

ಈ ಹಿಂದೆ ತಮ್ಮ ಶ್ರೀಕೃಷ್ಣ ಪ್ರೊಡಕ್ಷನ್ಸ್ ಮೂಲಕ ಹಲವು ಸಮಾಜಮುಖಿ ವಿಡಿಯೋ ಹಾಡುಗಳನ್ನು ಮಾಡಿದ್ದ ಆದರ್ಶ್​, ಈಗ 'ಕ್ವಿಟ್' ಎಂಬ ವಿಡಿಯೋ ಹಾಡಿನ ಮೂಲಕ ಸಮಾಜಕ್ಕೆ ಮತ್ತು ಕುಟುಂಬಗಳಿಗೆ ಹೊರೆಯಾಗಿರುವ ಡ್ರಗ್ಸ್​ನ ನಿರ್ಮೂಲನೆ ಮತ್ತು ಅದರ ನಶೆಯಿಂದಾಗುವ ಪರಿಣಾಮಗಳ ಕುರಿತು ಒಂದು ಹಾಡನ್ನು ಹೊರತಂದಿದ್ದಾರೆ.

ಈ ಹಾಡಿಗೆ ಹೇಮಂತ್ ಜೋಯಿಸ್ ಸಂಗೀತ ಸಂಯೋಜಿಸಿದ್ದು, ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ರಕ್ಷಿತ್ ತೀರ್ಥಹಳ್ಳಿ ನಿರ್ದೇಶನ ಮಾಡಿರುವ ಈ ಹಾಡು ಒಂದು ಕುಟುಂಬ ಮತ್ತು ಆ ಕುಟುಂಬದ ಹುಡುಗ ಡ್ರಗ್ ವ್ಯಸನಿಯಾಗಿ ಅದರಿಂದ ಹೊರಬರುವ ಚಿತ್ರಣವನ್ನು ಒಳಗೊಂಡಿದೆ.

ಈ ಹಾಡಿನಲ್ಲಿ ಆದರ್ಶ್ ಅಯ್ಯಂಗಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಜತೆಗೆ ತೆಲುಗಿನ 'ಡಿ' ಡ್ಯಾನ್ಸ್ ಸೀಸನ್ 13ರ ಸ್ಪರ್ಧಿ ಹಾಗೂ 'ದಮಯಂತಿ' ಚಿತ್ರದಲ್ಲಿ ಅಭಿನಯಿಸಿದ್ದ ನಿತ್ಯದಾಸ್ ಗೌಡ, ಆದರ್ಶ್ ಅವರಿಗೆ ಜೋಡಿಯಾಗಿದ್ದಾರೆ. ಈ ಹಾಡು ಯೂಟ್ಯೂಬ್​ನ ಶ್ರೀಕೃಷ್ಣ ಪ್ರೊಡಕ್ಷನ್ಸ್ ಚಾನಲ್​ನಲ್ಲಿ ಲಭ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net