ಬೆಂಗಳೂರು: ಡಿ.2 ರಿಂದ ಟಾಲಿವುಡ್ನಲ್ಲಿ 'ಅಖಂಡ' ಸಿನಿಮಾದೇ ಸದ್ದು. ಆದರೆ, ಡಿ.6 ಸಂಜೆ 8 ಗಂಟೆಯಿಂದ ಸ್ಟೈಲೀಶ್ ಸ್ಟಾರ್ ನಟ ಅಲ್ಲು ಅರ್ಜುನ್ ಅವರ 'ಪುಷ್ಪ' ಚಿತ್ರ ಸಿಕ್ಕಾಪಟ್ಟೆ ಸದ್ದು ಮಾಡಲು ಮುಂದಾಗಿದೆ. ಏಕೆಂದರೆ, ಡಿ.17 ರಂದು ತೆರೆ ಕಾಣಲಿರುವ 'ಪುಷ್ಪ - ಭಗ1' ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಚಿತ್ರದ ಟ್ರೈಲರ್ ಕಂಡ ವೀಕ್ಷಕರು ಅಲ್ಲು ಅರ್ಜುನ್ ಮಾಸ್ ಲುಕ್ಗೆ ಫಿದಾ ಆಗಿದ್ದಾರೆ. ಜೊತೆಗೆ, ಈ ಸಿನಿಮಾದ ಟ್ರೈಲರ್ ನಮ್ಮ ಕನ್ನಡಿಗರ ಮನಸ್ಸು ಗೆದ್ದಿದೆ. ಇದಕ್ಕೆ, ಕಾರಣ ಡಾಲಿ ಧನಂಜಯ್.
ಇನ್ನು, ಇಡೀ ಚಿತ್ರದ ಟ್ರೈಲರ್ನ ಹೈಲೈಟ್ ಎಂದರೆ ಅದು ಒಂದು ಡೈಲಾಗ್ ಎಂದೇ ಹೇಳುಬೇಕು. ''ಪುಷ್ಪ, ಅಂದ್ರೆ ಹೂವು ಅಂದ್ಕೊಂಡಿದ್ದೀರಾ... ಬೆಂಕಿ'' ಎಂಬ ಈ ಪಂಚ್ ಡೈಲಾಗ್ ಈಗ ಎಲ್ಲರ ಬಾಯಲ್ಲೂ ಕೇಳಿಬರುತ್ತಿದೆ. 5 ಭಾಷೆಗಳಲ್ಲಿ ಬಿಡುಗಡೆಯಾಗಲಿರುವ 'ಪುಷ್ಪ' ಟ್ರೈಲರ್ ಸದ್ಯ ರಿಲೀಸ್ ಆದ 20 ಗಂಟೆಯೊಳಗೆ ಐದೂ ಭಾಷೆಗಳಲ್ಲಿ ಒಟ್ಟು 25 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. ತೆಲುಗು ಟ್ರೈಲರ್ಗೆ 13 ಮಿಲಿಯನ್ ವೀಕ್ಷಣೆಗಳು ಲಭಿಸಿದ್ದರೆ, ಮತ್ತೊಂದೆಡೆ ಕನ್ನಡ ಟ್ರೈಲರ್ 2 ಮಿಲಿಯನ್ ಗೂ ಹೆಚ್ಚು ವೀಕ್ಷಣೆಗಳನ್ನು ದಾಟಿದೆ. ಸಿನಿಮಾ ಬಿಡುಗಡೆಗೆ ಮುನ್ನವೇ ಟ್ರೈಲರ್ನದ್ದೆ ಇಷ್ಟು ಹವಾ ಎಂದರೆ, ಚಿತ್ರ ಬಿಡುಗಡೆಯಾದರೆ ಚಿಂದಿ ಉಡಾಯಿಸುವುದರಲ್ಲಿ ಸಂಶಯವಿಲ್ಲ.