ಸದ್ಯ, ಇಡೀ ದೇಶದಲ್ಲಿ ನಟ ಅಲ್ಲು ಅರ್ಜುನ್ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ 'ಪುಷ್ಪಾ: ದಿ ರೈಸ್' ಸಿನಿಮಾದೆ ಸದ್ದು ಮತ್ತು ಸುದ್ದಿ. ಹಿಂದಿಯ '83', ಹಾಲಿವುಡ್ನ 'ಸ್ಪೈಡರ್ ಮ್ಯಾನ್: ನೋ ವೇ ಹೋಮ್' ಚಿತ್ರಗಳ ಪೈಪೋಟಿಯ ಹೊರತಾಗಿಯೂ ಬಾಕ್ಸ್ ಆಫೀಸ್‌ನಲ್ಲಿ 'ಪುಷ್ಪಾ: ದಿ ರೈಸ್' ಸೂಪರ್ ಹಿಟ್ ಎನಿಸಿಕೊಂಡು, ಜೊತೆಗೆ ಕೋಟಿ ಕೋಟಿ ಬಾಚಿಕೊಳ್ಳುತ್ತಿದೆ. ಹಲವು ವರದಿಗಳ ಪ್ರಕಾರ, ಸಿನಿಮಾ 350ಕ್ಕೂ ಹೆಚ್ಚು ಕೋಟಿ ರೂಪಾಯಿ ಗಳಿಸಿದ್ದು, 400 ಕೋಟಿಯ ಗಳಿಕೆಯತ್ತ ಹೆಜ್ಜೆ ಹಾಕುತ್ತಿದೆ. ಹಿಂದಿಯ '83' ಚಿತ್ರ ಗಳಿಸಿದ್ದು 175 ಕೋಟಿಯಾದರೇ, ಮತ್ತೊಂದೆಡೆ ಹಾಲಿವುಡ್ನ 'ಸ್ಪೈಡರ್ ಮ್ಯಾನ್: ನೋ ವೇ ಹೋಮ್' ಸಿನಿಮಾ ಕೇವಲ 150 ಕೋಟಿ ಗಳಿಸಿದೆ.