ರಷ್ಯಾದಲ್ಲಿ ಹೊಸ ದಾಖಲೆ ಮಾಡಿದ 'ಪುಷ್ಪ'; ಅಲ್ಲಿ ಕಲೆಕ್ಷನ್​ ಎಷ್ಟು ಗೊತ್ತಾ?

Pushpa
Published on

ಮುಂಬೈ: ಅಲ್ಲು ಅರ್ಜುನ್​​ ಅಭಿನಯದ 'ಪುಷ್ಪ' ಚಿತ್ರವು ಭಾರತದಲ್ಲಿ ಕೆಲವು ದಾಖಲೆಗಳನ್ನು ಮಾಡಿರುವುದು ಗೊತ್ತೇ ಇದೆ. ಈಗ ದೂರದ ರಷ್ಯಾದಲ್ಲೂ ಆ ಚಿತ್ರ ಹೊಸ ದಾಖಲೆಯೊಂದನ್ನು ಬರೆದಿದೆ.

ಏನು ದಾಖಲೆಯಪ್ಪಾ ಅದು? ಎಂಬ ಪ್ರಶ್ನೆ ಬರುವುದು ಸಹಜ. ಇದುವರೆಗೂ ಹಲವು ಭಾರತೀಯ ಚಿತ್ರಗಳು ರಷ್ಯಾದ ಬೇರೆಬೇರೆ ನಗರಗಳಲ್ಲಿ ಬಿಡುಗಡೆಯಾಗಿದೆ, ಈ ಪೈಕಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ 'ಪುಷ್ಪ' ಬಿಡುಗಡೆಯಾಗಿದೆ.

'ಪುಷ್ಪ' ಚಿತ್ರವು ಡಿಸೆಂಬರ್​ 8ರಂದು ರಷ್ಯಾದಲ್ಲಿ 774 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಅಲ್ಲಿ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿರುವ ಚಿತ್ರವು, ಇದುವರೆಗೂ ಒಟ್ಟಾರೆ 13 ಕೋಟಿ ರೂ.ಗಳನ್ನು ಗಳಿಸಿದೆ. ಇದಕ್ಕೂ ಮುನ್ನ, ಅಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆ 'ಬಾಹುಬಲಿ 2' ಚಿತ್ರಕ್ಕಿತ್ತು. ತೆಲುಗು ಚಿತ್ರವೊಂದು ಮಾಡಿದ ಆ ದಾಖಲೆಯನ್ನು ಈಗ ಇನ್ನೊಂದು ತೆಲುಗು ಚಿತ್ರವೇ ಮುರಿದಿರುವುದು ವಿಶೇಷ.

ಇದು ರಷ್ಯಾದ ಕಥೆಯಾದರೆ, ಇನ್ನೊಂದು ಕಡೆ ಜಪಾನ್​ನಲ್ಲಿ ರಾಜಮೌಳಿ ನಿರ್ದೇಶನದ 'RRR' ಚಿತ್ರವು ರಜನಿಕಾಂತ್ ಅಭಿನಯದ 'ಮುತ್ತು' ಚಿತ್ರವು ಹಲವು ವರ್ಷಗಳ ಹಿಂದೆ ಬರೆದಿದ್ದ ದಾಖಲೆಯನ್ನು ಅಳಿಸಿ ಹಾಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net