12 ವರ್ಷದಿಂದ ಕಾಯುತ್ತಿದ್ದ ವೃದ್ಧೆಯ ಕಂಡು ಭಾವುಕರಾದ ಪುನೀತ್ ರಾಜ್​ಕುಮಾರ್

punith rajkumar
Published on

ಉತ್ತರಕನ್ನಡ: 12 ವರ್ಷದಿಂದ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್​ ಅವರನ್ನು ಭೇಟಿ ಮಾಡಲು ತುಂಬಾ ಆಸೆಗಣ್ಣಿನಿಂದ ಕಾಯುತ್ತಿದ್ದ ವೃದ್ಧೆಯೊಬ್ಬರ ಆಸೆ ಕೊನೆಗೂ ಈಡೇರಿದೆ.

ಜೋಯಿಡಾದ ಬಾಳೆಗೌಡ ನಾಯ್ಕ ಮತ್ತು ಇವರ ಪತ್ನಿ ಕರಿಯವ್ವ ಇಬ್ಬರೂ ಡಾ.ರಾಜ್ ಕುಮಾರ್​ರ ಅಭಿಮಾನಿಗಳು. ಬಾಳೆಗೌಡ ನಾಯ್ಕ ಅವರು ಡಾ.ರಾಜ್ ಕುಮಾರ್ ಜತೆ ಗೋಕಾಕ್ ಚಳವಳಿಯಲ್ಲಿ ಪಾಲ್ಗೊಂಡಿದ್ದರು.

ಜೋಯಿಡಾದಲ್ಲಿ ಕಾಳಿ ನದಿ ಕುರಿತು ಸಾಕ್ಷ್ಯಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಅದರ ಸಲುವಾಗಿ ಆಗಮಿಸಿದ್ದ ಪುನೀತ್ ರಾಜಕುಮಾರ್, 75 ವರ್ಷದ ವೃದ್ಧೆ ಕರಿಯವ್ವ ಅವರನ್ನು ಭೇಟಿಯಾಗಿ ಕೆಲಹೊತ್ತು ಮಾತುಕತೆ ನಡೆಸಿದರು. ಈ ವೇಳೆ ಕರಿಯವ್ವರ ಪ್ರೀತಿ ಮತ್ತು ಅಭಿಮಾನ ಕಂಡು ಪುನಿತ್​ ಭಾವುಕರಾದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net