ಮೂರು ವರ್ಷಗಳ ನಂತರ ಭಾರತಕ್ಕೆ ವಾಪಸ್ಸಾದ ಪ್ರಿಯಾಂಕಾ ಚೋಪ್ರಾ!

Priyanka Chopra
Published on

ಮುಂಬೈ: ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚಿನ ವರ್ಷಗಳಲ್ಲಿ ಅಮೆರಿಕಾ, ಇಂಗ್ಲೆಂಡ್​ ಆತ ಬೇರೆಬೇರೆ ದೇಶಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಈಗ ಮೂರು ವರ್ಷಗಳ ನಂತರ ಅವರು ಭಾರತಕ್ಕೆ ವಾಪಸ್ಸಾಗಿದ್ದಾರೆ.

ಹೌದು, ಕಳೆದ ಕೆಲವು ವರ್ಷಗಳ ಹಿಂದೆ ಹಾಲಿವುಡ್​ಗೆ ಹಾರಿದ್ದ ಪ್ರಿಯಾಂಕಾ ಚೋಪ್ರಾ, ಅಲ್ಲೇ ನಿಕ್​ ಜೋನಸ್​ ಅವರನ್ನು ಮದುವೆಯಾಗಿ ಅಲ್ಲೇ ನೆಲೆಸಿದ್ದರು. ಆಗಾಗ ಭಾರತಕ್ಕೆ ಬಂದು ಹೋಗಿ ಮಾಡುತ್ತಿದ್ದ ಪ್ರಿಯಾಂಕಾ, ಇತ್ತೀಚೆಗೆ ಬರುವುದಕ್ಕೆ ಸಾಧ್ಯವಾಗಿರಲಿಲ್ಲ. ಕಾರಣ ಕರೊನಾ. ಕಳೆದ ಎರಡು ವರ್ಷಗಳಿಂದ ಇಡೀ ಜಗತ್ತು ಕರೊನಾದಿಂದ ತತ್ತರಿಸಿತು. ಈ ಸಂದರ್ಭದಲ್ಲಿ ಪ್ರಿಯಾಂಕಾ ಮತ್ತು ಇಂಗ್ಲೆಂಡ್​ ನಡುವೆ ಓಡಾಡಿಕೊಂಡಿದ್ದರು. ಕರೊನಾ ಹಾವಳಿ ಕೊಂಚ ಕಡಿಮೆಯಾದ ಮೇಲೆ ಹಾಲಿವುಡ್​ ಚಿತ್ರಗಳ ನಟನೆಯಲ್ಲಿ ತೊಡಗಿಸಿಕೊಂಡಿದ್ದರು.

ಇನ್ನು, ಈ ವರ್ಷದ ಆರಂಭದಲ್ಲಿ ಪ್ರಿಯಾಂಕಾ, ಬಾಡಿಗೆ ತಾಯತ್ತನದ ಮೂಲಕ ತಾಯಿಯಾದರು. ತಮ್ಮ ಮಗುವಿಗೆ ಮಾಲತಿ ಮೇರಿ ಚೋಪ್ರಾ ಜೋನಸ್​ ಎಂದು ಹೆಸರಿಟ್ಟರು. ಮಗು ಮತ್ತು ಪತಿ ನಿಕ್​ ಜತೆಗೆ ನೆಮ್ಮದಿಯ ಜೀವನ ನಡೆಸುತ್ತಿರುವ ಪ್ರಿಯಾಂಕಾ, ಈಗ ಕೊನೆಗೂ ಭಾರತಕ್ಕೆ ಬರುತ್ತಿದ್ದಾರೆ. ನಿನ್ನೆ ಸೋಷಿಯಲ್​ ಮೀಡಿಯಾದಲ್ಲಿ ಅವರು ಬೋರ್ಡಿಂಗ್​ ಪಾಸ್​ವೊಂದರ ಫೋಟೋ ಹಂಚಿಕೊಂಡಿದ್ದಾರೆ. ಮಗುವಾದ ಮೇಲೆ ಇದೇ ಮೊದಲ ಬಾರಿ ಭಾರತಕ್ಕೆ ಅವರು ಬರುತ್ತಿದ್ದು, ಮಗುವಿನ ಜತೆಗೇ ಬರುತ್ತಿದ್ದಾರೆ ಎನ್ನುವುದು ವಿಶೇಷ.

ಸದ್ಯ ಪ್ರಿಯಾಂಕಾ ಬಹಳ ಬಿಜಿ ನಟಿ ಎಂದರೆ ತಪ್ಪಿಲ್ಲ. 'ದಿ ಎಂಡಿಂಗ್​ ಥಿಂಗ್ಸ್​', 'ಇಟ್ಸ್​ ಆಲ್​ ಕಮ್ಮಿಂಗ್​ ಬ್ಯಾಕ್​ ಟು ಮೀ' ಎಂಬ ಹಾಲಿವುಡ್​ ಚಿತ್ರಗಳ ಜತೆಗೆ 'ಸಿಟಾಡೆಲ್​' ಎಂಬ ವೆಬ್​ಸೀರೀಸ್​ನಲ್ಲಿ ಅವರು ನಟಿಸುತ್ತಿದ್ದಾರೆ. ಇದೆಲ್ಲದರ ಜತೆಗೆ ಫರ್ಹಾನ್​ ಅಖ್ತರ್​ ನಿರ್ದೇಶನದ 'ಜೀ ಲೇ ಜರಾ' ಎಂಬ ಬಾಲಿವುಡ್​ ಚಿತ್ರದಲ್ಲೂ ಪ್ರಿಯಾಂಕಾ ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net