ನಾಲ್ಕು ವರ್ಷದಿಂದ ಈ ವಿವಾಹಿತ ನಟನನ್ನು ಪ್ರೀತಿ ಮಾಡ್ತಿದ್ದಾರಂತೆ ಸೌತ್​ ಬ್ಯೂಟಿ ಪ್ರಿಯಾ ಭವಾನಿ ಶಂಕರ್!

Priya Bhavani Shankar
Published on

ಚೆನ್ನೈ: ಪ್ರಿಯಾ ಭವಾನಿ ಶಂಕರ್​ ಕಾಲಿವುಡ್​ ಪ್ರಖ್ಯಾತ ನಟಿಯರಲ್ಲಿ ಒಬ್ಬರು. ಇವರು ಟಿವಿ ನಿರೂಪಕಿಯಾಗಿ ವೃತ್ತಿ ಜೀವನ ಆರಂಭಿಸಿದರು. ತಮ್ಮ ನಿರೂಪಣೆ ಶೈಲಿಯಿಂದಲೇ ಎಲ್ಲರ ಗಮನ ಸೆಳೆದರು. ಧಾರವಾಹಿಗಳಲ್ಲಿ ನಟಿಸುವ ಅವಕಾಶವನ್ನು ಪಡೆದುಕೊಂಡರು. ತಮ್ಮ ನಟನಾ ಪ್ರತಿಭೆಯನ್ನು ಪ್ರದರ್ಶಿಸಿದ ಪ್ರಿಯಾ ಭವಾನಿ ಬೆಳ್ಳಿತೆರೆಗೂ ಕಾಲಿಟ್ಟಿದ್ದಾರೆ. ಈಗಾಗಲೇ ಕೆಲವು ಸಿನಿಮಾಗಳಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸಿದ್ದು, ಕಾಲಿವುಡ್​ ಹಾಗೂ ಟಾಲಿವುಡ್​ನಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಇತ್ತೀಚೆಗಷ್ಟೇ ಪ್ರಿಯಾ ಭವಾನಿ ನಟನೆಯ ತೆಲುಗು ಸಿನಿಮಾ ಭೀಮಾ, ಬಿಡುಗಡೆಯಾಯಿತು. ಈ ಸಿನಿಮಾವನ್ನು ಕನ್ನಡದ ಖ್ಯಾತ ನಿರ್ದೇಶಕ, ಕೊರಿಯೋಗ್ರಾಫರ್​ ಹಾಗೂ ಭಜರಂಗಿ ಸಿನಿಮಾ ಖ್ಯಾತಿಯ ಹರ್ಷ ನಿರ್ದೇಶನ ಮಾಡಿದ್ದಾರೆ. ಚಿತ್ರವು ಒಳ್ಳೆಯ ರೆಸ್ಪಾನ್ಸ್​ ಸಹ ಪಡೆದುಕೊಂಡಿತು. ಟಾಲಿವುಡ್​ ಸ್ಟಾರ್​ ಗೋಪಿಚಂದ್​ ಈ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದರು.

ಸದ್ಯ ಪ್ರಿಯಾ ಭವಾನಿ ಅವರು ಕಮಲ್​ ಹಾಸನ್​ ನಟನೆಯ ಇಂಡಿಯನ್​ 2 ಮತ್ತು ಡೆಮೊಂಟೆ ಕಾಲನಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಮಾತ್ರವಲ್ಲದೆ, ಉದ್ಯಮಕ್ಕೂ ಕಾಲಿಟ್ಟಿರುವ ಪ್ರಿಯಾ, ಇತ್ತೀಚೆಗಷ್ಟೇ ಚೆನ್ನೈನಲ್ಲಿ ಲಿಯಾಮ್​ ಡಿನ್ನರ್​ ಹೆಸರಿನ ಹೋಟೆಲ್​ ಓಪನ್​ ಮಾಡಿದ್ದಾರೆ.

ತಾಜಾ ಸಂಗತಿ ಏನೆಂದರೆ, ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ತಮ್ಮ ಕ್ರಶ್​ ಯಾರೆಂಬುದನ್ನು ಪ್ರಿಯಾ ಬಹಿರಂಗಪಡಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ನಾನು ಬಾಲಿವುಡ್​ ನಟ ವಿಕ್ಕಿ ಕುಶಾಲ್​ ಅವರ ಪ್ರೀತಿಸುತ್ತಿದ್ದೇನೆ. ಅವರೇ ನನ್ನ ಕ್ರಶ್​ ಎಂದಿದ್ದಾರೆ.

ಅಂದಹಾಗೆ ವಿಕ್ಕಿ ಕುಶಾಲ್​ ಅವರು ಬಾಲಿವುಡ್​ ಬ್ಯೂಟಿ ಕತ್ರಿನಾ ಕೈಫ್​ ಅವರ ಪತಿ ಎಂಬುದು ಎಲ್ಲರಿಗು ತಿಳಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net