More

    ನಾನು ಪ್ರತಿನಿತ್ಯ ಕಣ್ಣೀರಿಡುತ್ತಿದ್ದೆ, ಇದೇ ನನ್ನ ಕೊನೆಯ ತೆಲುಗು ಸಿನಿಮಾ! ಮೃನಾಲ್​ ಠಾಕೂರ್​ ಶಾಕಿಂಗ್​ ಹೇಳಿಕೆ

    ಹೈದರಾಬಾದ್​: ಮೃನಾಲ್ ಠಾಕೂರ್. ಈ ಹೆಸರು ಈಗ ಟಾಲಿವುಡ್ ಇಂಡಸ್ಟ್ರಿಯಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ. ತೆಲುಗಿನಲ್ಲಿ ತಾನು ನಟಿಸಿದ ಕೇವಲ ಎರಡೇ ಚಿತ್ರಕ್ಕೆ ಮೃನಾಲ್​ ಸ್ಟಾರ್ ನಟಿ ಇಮೇಜ್ ಪಡೆದುಕೊಂಡಿದ್ದಾರೆ. ಮೂಲತಃ ಬಾಲಿವುಡ್ ಬೆಡಗಿಯಾಗಿರುವ ಮೃನಾಲ್​, ಟಾಲಿವುಡ್​ನಲ್ಲಿ ಅಪಾರ ಕ್ರೇಜ್ ಗಳಿಸಿದ್ದಾರೆ. ತನ್ನ ಮನಮೋಹಕ ಸೌಂದರ್ಯ ಮತ್ತು ಅತ್ಯುತ್ತಮ ನಟನೆಯಿಂದ ತೆಲುಗು ಪ್ರೇಕ್ಷಕರ ಮನ ಕದ್ದಿರುವ ಮೃನಾಲ್​, ಇದೀಗ “ಫ್ಯಾಮಿಲಿ ಸ್ಟಾರ್​” ಮತ್ತೊಂದು ತೆಲುಗು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ.

    ಫ್ಯಾಮಿಲಿ ಸ್ಟಾರ್​ ಸಿನಿಮಾ ಇಂದು ಬಿಡುಗಡೆಯಾಗಿದ್ದು, ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಇದರ ನಡುವೆ ಮೃನಾಲ್​ ಕುರಿತಾದ ಇಂಟೆರೆಸ್ಟಿಂಗ್​ ಸಂಗತಿಯೊಂದು ಬಯಲಾಗಿದೆ. ಮೃನಾಲ್​ ಅವರು ತೆಲುಗು ಇಂಡಸ್ಟ್ರಿಯನ್ನು ತೊರೆಯಲು ನಿರ್ಧಾರ ಮಾಡಿದ್ದರಂತೆ. ಅದಕ್ಕೆ ಕಾರಣ ಭಾಷೆ.

    ಸೀತಾರಾಮಂ ಸಿನಿಮಾ ಮೃನಾಲ್​ ಅವರ ಮೊದಲ ತೆಲುಗು ಸಿನಿಮಾ. ತೆಲುಗು ಭಾಷೆ ಗೊತ್ತಿಲ್ಲದೆ ಮೊದಲ ಸಿನಿಮಾದಲ್ಲೇ ಸಾಕಷ್ಟು ಸಮಸ್ಯೆ ಎದುರಿಸಿದ್ದರಂತೆ. ಈ ಸಿನಿಮಾದ ಶೂಟಿಂಗ್​ ವೇಳೆ ನಾನು ಪ್ರತಿದಿನ ಅಳುತ್ತಿದ್ದೆ. ನಾನು ಡೈಲಾಗ್​ಗಳನ್ನು ಇಂಗ್ಲಿಷ್​ನಲ್ಲಿ ಬರೆದುಕೊಂಡು ಪ್ರತಿದಿನ ಅಭ್ಯಾಸ ಮಾಡುತ್ತಿದ್ದೆ. ಇದು ತುಂಬಾ ಕಷ್ಟವಾಗುತ್ತಿತ್ತು. ಇದನ್ನು ಸಹಿಸಲಾರದೇ ತೆಲುಗು ಇಂಡಸ್ಟ್ರಿ ತೊರೆಯಲು ನಿರ್ಧರಿಸಿದ್ದೆ.

    ಟಾಲಿವುಡ್​ ತೊರೆಯುವ ವಿಚಾರವನ್ನು ನಟ ದುಲ್ಕರ್​ ಸಲ್ಮಾನ್​ ಅವರಿಗೂ ಹೇಳಿದ್ದೆ. ಸೀತಾರಾಮಂ ಸಿನಿಮಾ ನನ್ನ ಮೊದಲ ಮತ್ತು ಕೊನೆಯ ತೆಲುಗು ಸಿನಿಮಾ ಆಗಲಿದೆ ಎಂದಿದ್ದೆ. ಆದರೆ, ನನ್ನ ಮಾತು ಕೇಳಿ ದುಲ್ಕರ್​ ಸಲ್ಮಾನ್​ ನಕ್ಕು, ಈ ಸಿನಿಮಾ ಬಳಿಕ ತೆಲುಗಿನಲ್ಲಿ ನಿಮಗೆ ಸಾಕಷ್ಟು ಆಫರ್​ಗಳು ಬರಲಿವೆ ಎಂದಿದ್ದರು. ಅವರು ಹೇಳಿದಂತೆ ಸಾಕಷ್ಟು ಅವಕಾಶಗಳು ಬರುತ್ತಿವೆ ಮತ್ತು ತೆಲುಗು ಇದೀಗ ಸುಲಭವಾಗಿದೆ ಎಂದು ಮೃನಾಲ್​ ಅವರು ಸ್ವತಃ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

    ಸೀತಾರಾಮಂ ಸಿನಿಮಾದಲ್ಲಿ ಮೃನಾಲ್​ ಅವರು ಸೀತಾಮಹಾಲಕ್ಷ್ಮೀ ಪಾತ್ರದಲ್ಲಿ ನಟಿಸಿದರು. ಈಗಲೂ ಮೃನಾಲ್​ ಅವರನ್ನು ಜನರು ಸೀತಾಮಹಾಲಕ್ಷ್ಮೀ ಪಾತ್ರದಲ್ಲಿ ನೋಡಲು ಇಷ್ಟಪಡುತ್ತಾರೆ. ಸೀತಾರಾಮ ಸಿನಿಮಾದಲ್ಲಿ ನಟಿಸುವುದು ತುಂಬಾ ಕಷ್ಟವಾಯಿತು. ಆದರೆ, ದುಲ್ಕರ್​ ಸಲ್ಮಾನ್​ ಅದನ್ನು ಸುಲಭವಾಗಿಸಿದರು. ನನಗೆ ತುಂಬಾ ಸ್ಫೂರ್ತಿ ನೀಡಿದರು. ದುಲ್ಕರ್​ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಅವರೇ ನನ್ನ ರೋಲ್​ ಮಾಡೆಲ್​, ನನ್ನ ಮೆಂಟರ್​, ನನ್ನ ಸ್ನೇಹಿತ ಹಾಗೂ ನನ್ನ ನೆಚ್ಚಿನ ನಟ ಎಂದು ಮೃನಾಲ್​ ಅವರು ಕೊಂಡಾಡಿದ್ದಾರೆ.

    ಅಂದಹಾಗೆ ಫ್ಯಾಮಿಲಿ ಸ್ಟಾರ್ ಸಿನಿಮಾ ಇಂದು (ಏಪ್ರಿಲ್​ 5) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ಮೃನಾಲ್ ಠಾಕೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಫ್ಯಾಮಿಲಿ ಎಂಟರ್‌ಟೈನರ್ ಆಗಿದ್ದು, ಆ್ಯಕ್ಷನ್ ಕೂಡ ಇದೆ. ಗೀತ ಗೋವಿಂದ ನಂತರ ವಿಜಯ್ ದೇವರಕೊಂಡ ಮತ್ತು ಪರಶುರಾಮ್ ಜೊತೆಗೂಡಿದ ಎರಡನೇ ಚಿತ್ರ ಫ್ಯಾಮಿಲಿ ಸ್ಟಾರ್. ಇದು ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದೆ. (ಏಜೆನ್ಸೀಸ್​)

    ನನಗೆ ಆ ವಿವಾಹಿತ ನಟನೆಂದರೆ ತುಂಬಾ ಇಷ್ಟ ಅಂದ್ರು ಬಾಲಿವುಡ್​ ಬ್ಯೂಟಿ ಮೃನಾಲ್​ ಠಾಕೂರ್​!

    ನಟಿಸಿದ್ದು ಕೆಲವೇ ಸಿನಿಮಾಗಳು ಆದ್ರೆ ಮೃನಾಲ್​ ಠಾಕೂರ್​ ಒಟ್ಟು ಆಸ್ತಿ ಕೇಳಿದ್ರೆ ದಂಗಾಗ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts