More

  ನನಗೆ ಆ ವಿವಾಹಿತ ನಟನೆಂದರೆ ತುಂಬಾ ಇಷ್ಟ ಅಂದ್ರು ಬಾಲಿವುಡ್​ ಬ್ಯೂಟಿ ಮೃನಾಲ್​ ಠಾಕೂರ್​!

  ಹೈದರಾಬಾದ್​: ಮೃನಾಲ್ ಠಾಕೂರ್. ಈ ಹೆಸರು ಈಗ ಟಾಲಿವುಡ್ ಇಂಡಸ್ಟ್ರಿಯಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ. ತೆಲುಗಿನಲ್ಲಿ ತಾನು ನಟಿಸಿದ ಕೇವಲ ಎರಡೇ ಚಿತ್ರಕ್ಕೆ ಮೃನಾಲ್​ ಸ್ಟಾರ್ ನಟಿ ಇಮೇಜ್ ಪಡೆದುಕೊಂಡಿದ್ದಾರೆ. ಮೂಲತಃ ಬಾಲಿವುಡ್ ಬೆಡಗಿಯಾಗಿರುವ ಮೃನಾಲ್​, ಟಾಲಿವುಡ್​ನಲ್ಲಿ ಅಪಾರ ಕ್ರೇಜ್ ಗಳಿಸಿದ್ದಾರೆ. ತನ್ನ ಮನಮೋಹಕ ಸೌಂದರ್ಯ ಮತ್ತು ಅತ್ಯುತ್ತಮ ನಟನೆಯಿಂದ ತೆಲುಗು ಪ್ರೇಕ್ಷಕರ ಮನ ಕದ್ದಿರುವ ಮೃನಾಲ್​, ಇದೀಗ “ಫ್ಯಾಮಿಲಿ ಸ್ಟಾರ್​” ಮತ್ತೊಂದು ತೆಲುಗು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ.

  ಫ್ಯಾಮಿಲಿ ಸ್ಟಾರ್​ ಸಿನಿಮಾ ಏಪ್ರಿಲ್​ 5ಕ್ಕೆ ಬಿಡುಗಡೆಯಾಗಲಿದೆ. ಈ ಚಿತ್ರದ ನಾಯಕ ವಿಜಯ್​ ದೇವರಕೊಂಡ. ಬಿಡುಗಡೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇರುವ ಕಾರಣ ಚಿತ್ರತಂಡ ಪ್ರಚಾರದಲ್ಲಿ ಬಿಜಿಯಾಗಿದೆ. ಇತ್ತೀಚೆಗೆ ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೃನಾಲ್​ ಠಾಕೂರ್​ಗೆ ನಿಮ್ಮ ನೆಚ್ಚಿನ ನಟ ಯಾರು ಎಂದು ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರಿಸಿದ ಮೃನಾಲ್​, ದುಲ್ಕರ್​ ಸಲ್ಮಾನ್​ ನನ್ನ ನೆಚ್ಚಿನ ನಟ ಎಂದರು.

  ದುಲ್ಕರ್​ ಸಲ್ಮಾನ್​ ಮತ್ತು ಮೃನಾಲ್​ ಠಾಕೂರ್​ ಅವರು ಸೂಪರ್​ ಹಿಟ್​ ಸೀತಾರಾಮ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಈ ಚಿತ್ರದಲ್ಲಿ ಇಬ್ಬರ ಕೆಮಿಸ್ಟ್ರಿ ಸಿಕ್ಕಾಪಟ್ಟೆ ಹಿಟ್​ ಆಯಿತು. ಮೃನಾಲ್​ ಅವರು ಸೀತಾಮಹಾಲಕ್ಷ್ಮೀ ಪಾತ್ರದಲ್ಲಿ ನಟಿಸಿದರು. ಈಗಲೂ ಮೃನಾಲ್​ ಅವರನ್ನು ಜನರು ಸೀತಾಮಹಾಲಕ್ಷ್ಮೀ ಪಾತ್ರದಲ್ಲಿ ನೋಡಲು ಇಷ್ಟಪಡುತ್ತಾರೆ.

  ಸೀತಾರಾಮ ಸಿನಿಮಾದಲ್ಲಿ ನಟಿಸುವುದು ತುಂಬಾ ಕಷ್ಟವಾಯಿತು. ಆದರೆ, ದುಲ್ಕರ್​ ಸಲ್ಮಾನ್​ ಅದನ್ನು ಸುಲಭವಾಗಿಸಿದರು. ನನಗೆ ತುಂಬಾ ಸ್ಫೂರ್ತಿ ನೀಡಿದರು. ದುಲ್ಕರ್​ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಅವರೇ ನನ್ನ ರೋಲ್​ ಮಾಡೆಲ್​, ನನ್ನ ಮೆಂಟರ್​, ನನ್ನ ಸ್ನೇಹಿತ ಹಾಗೂ ನನ್ನ ನೆಚ್ಚಿನ ನಟ ಎಂದು ಮೃನಾಲ್​ ಅವರು ಕೊಂಡಾಡಿದರು.

  ಅಂದಹಾಗೆ ಫ್ಯಾಮಿಲಿ ಸ್ಟಾರ್ ಸಿನಿಮಾ ಇದೇ ತಿಂಗಳು 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ಮೃನಾಲ್ ಠಾಕೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಫ್ಯಾಮಿಲಿ ಎಂಟರ್‌ಟೈನರ್ ಆಗಿದ್ದು, ಆ್ಯಕ್ಷನ್ ಕೂಡ ಇದೆ. ಗೀತ ಗೋವಿಂದ ನಂತರ ವಿಜಯ್ ದೇವರಕೊಂಡ ಮತ್ತು ಪರಶುರಾಮ್ ಜೊತೆಗೂಡಿದ ಎರಡನೇ ಚಿತ್ರ ಫ್ಯಾಮಿಲಿ ಸ್ಟಾರ್. ಇದು ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. (ಏಜೆನ್ಸೀಸ್​)

  ಆಕೆಯ ತುಟಿ ಮತ್ತು… ಬಾಲಿವುಡ್ ಬ್ಯೂಟಿ ಮೃನಾಲ್​ ಬಗ್ಗೆ ವಿಜಯ್​ ದೇವರಕೊಂಡ ಓಪನ್​ ಟಾಕ್

  ದೇಹದ ಆ ಭಾಗಗಳನ್ನು ಜೂಮ್​ ಮಾಡಿ… ನೋವುಂಟು ಮಾಡುತ್ತಿದೆ ಎಂದ ನಟಿ ಮೃನಾಲ್​ ಠಾಕೂರ್​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts