ಯಶ್​ ಮತ್ತು ಪ್ರಭಾಸ್​ ಇಬ್ಬರೂ ಒಂದೇ ರೀತಿ ಎಂದಿದ್ದೇಕೆ ನಿರ್ದೇಶಕ ಪ್ರಶಾಂತ್​ ನೀಲ್​?

2edsd
Published on

‘ಕೆಜಿಎಫ್​’ ಸರಣಿಯಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಯಶ್‌ಗೆ ಆ್ಯಕ್ಷನ್-ಕಟ್ ಹೇಳಿದ್ದರು. ಎರಡೂ ಸಿನಿಮಾಗಳು ಬಾಕ್ಸಾಫೀಸಿನಲ್ಲಿ ಬರೋಬ್ಬರಿ 1400 ಕೋಟಿ ರೂ. ಗಳಿಕೆ ಮಾಡಿಕೊಂಡವು. ಇದೀಗ ಪ್ರಶಾಂತ್ ನೀಲ್ ನಿರ್ದೇಶಿಸಿ, ತೆಲುಗು ನಟ ಪ್ರಭಾಸ್ ಅಭಿನಯದ ಪ್ಯಾನ್ ಇಂಡಿಯಾ ‘ಸಲಾರ್’ ಇದೇ ಶುಕ್ರವಾರ (ಡಿ. 22) ರಿಲೀಸ್‌ಗೆ ರೆಡಿಯಾಗಿದೆ.

ಅದರ ಬೆನ್ನಲ್ಲೇ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಯಶ್ ಮತ್ತು ಪ್ರಭಾಸ್ ಬಗ್ಗೆ ಮಾತನಾಡಿದ್ದಾರೆ. ಇಬ್ಬರೂ ನಟರ ನಡುವಿನ ಹೋಲಿಕೆಗಳ ಬಗ್ಗೆ ಪ್ರಶಾಂತ್, ‘ಯಶ್, ಪ್ರಭಾಸ್ ನಡುವೆ ಗಮನಾರ್ಹ ಹೋಲಿಕೆಗಳಿವೆ. ಅಭಿಮಾನಿಗಳ ಬಗ್ಗೆ ಹೆಚ್ಚು ಜವಾಬ್ದಾರಿ ಹೊಂದಿದ್ದಾರೆ. ಹೀಗಾಗಿಯೇ ಇಬ್ಬರಲ್ಲೂ ತಮ್ಮ ಕೆಲಸದ ಬಗ್ಗೆ ಶ್ರಮ, ಶ್ರದ್ಧೆ ಹೆಚ್ಚು. ನಿರ್ದೇಶಕ ಯಾರೇ ಆಗಿರಲಿ, ಎಷ್ಟೇ ದೊಡ್ಡ ಸಿನಿಮಾ ಆಗಿರಲಿ, ಅವರಿಗೆ ತಮ್ಮ ಪ್ರೇಕ್ಷಕರು ತುಂಬ ಮುಖ್ಯ. ಅವರಿಗಾಗಿಯೇ ಸಿನಿಮಾ ಮಾಡಬೇಕು ಎಂಬ ಮನೋಭಾವ ಹೊಂದಿದ್ದಾರೆ. ಸಿನಿಮಾ ಪೂರ್ಣಗೊಳ್ಳುವವರೆಗೂ ಅವರ ಬದ್ದತೆ ಮತ್ತು ವೃತ್ತಿಪರತೆ ಎದ್ದು ಕಾಣುತ್ತದೆ. ಅವರ ಮುಖಗಳಿರುವ ಪೋಸ್ಟರ್‌ಗಳನ್ನು ನೋಡಿಯೇ ಜನ ಸಿನಿಮಾ ನೋಡಲು ಥಿಯೇಟರ್‌ಗೆ ಬರುವುದು. ಹೀಗಾಗಿ ಪ್ರೇಕ್ಷಕರು ಪ್ರತಿಕ್ರಿಯೆಯ ಬಗ್ಗೆಯೂ ಅವರು ಕಾಳಜಿವಹಿಸುತ್ತಾರೆ. ಹೀಗಾಗಿ ಅವರ ನಡುವೆ ಹೆಚ್ಚು ವ್ಯತ್ಯಾಸಗಳಿಲ್ಲ’ ಎಂದು ಹೇಳಿಕೊಂಡಿದ್ದಾರೆ.

'ಕೆಜಿಎಫ್​' ಸರಣಿಯ ಸೂಪರ್​ ಸಕ್ಸಸ್​ ಬಳಿಕ ಪ್ರಶಾಂತ್​ ನೀಲ್​ ಆ್ಯಕ್ಷನ್​-ಕಟ್​ ಹೇಳಿರುವ 'ಸಲಾರ್​' ರಿಲೀಸ್​ ಆಗುತ್ತಿದ್ದು, ಸದ್ಯ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net