

ಮುಂಬೈ: ನಟ ವರುಣ್ ಧವನ್ ಪ್ರಸ್ತುತ ತಮ್ಮ ಮುಂಬರುವ ಸಿನಿಮಾಗಾಗಿ ತಯಾರಿ ನಡೆಸುತ್ತಿದ್ದಾರೆ. ಆದರೆ ದುರದೃಷ್ಟವಶಾತ್, ಚಿತ್ರೀಕರಣದ ಸಮಯದಲ್ಲಿ ಅವರು ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಈ ಕುರಿತಾಗಿ ಸ್ವತಃ ಅವರೆ ಇನ್ಸ್ಟಾಗ್ರಾಮ್ನಲ್ಲಿ ಬಹಿರಂಗಪಡಿಸಿದ್ದಾರೆ.
ಅವರು ತಮ್ಮ ಕಾಲಿನ ಗಾಯದ ಫೋಟೋವನ್ನು ಹಂಚಿಕೊಂಡಿದ್ದಾರೆ. ವರುಣ್ ತಮ್ಮ ಊದಿಕೊಂಡ ಕಾಲಿನ ಕೆಂಪು ಗುರುತುಗಳೊಂದಿಗೆ ಕುರ್ಚಿಯ ಮೇಲೆ ವಿಶ್ರಾಂತಿ ಪಡೆದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಚಿತ್ರದ ವೇಳೆ ಕಬ್ಬಿಣದ ರಾಡ್ ಕಾಲಿಗೆ ಬಡಿದಿರುವುದಾಗಿ ಬರೆದು ಶೀರ್ಷಿಕೆಗೆ ಅಳುವ ಎಮೋಜಿಯನ್ನು ಹಾಕಿದ್ದಾರೆ.ವರುಣ್ ಧವನ್ ಗಾಯಗೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆ ಸೆಟ್‌ಗಳಲ್ಲಿ ಇಂತಹ ಗಾಯಗಳಿಗೆ ಒಳಗಾಗಿದ್ದರು ಎನ್ನಲಾಗಿದೆ.
ಸಿನಿ 1 ಸ್ಟುಡಿಯೋಸ್ ಮತ್ತು ಎ ಫಾರ್ ಆಪಲ್ ಸ್ಟುಡಿಯೋಸ್ ಕೈಜೋಡಿಸಿ ವರುಣ್ ಧವನ್ ನಾಯಕತ್ವದ ತಾರಾಗಣದೊಂದಿಗೆ ಆಕ್ಷನ್ ಎಂಟರ್‌ಟೈನರ್‌ಗಳಲ್ಲಿ ಒಂದನ್ನು ತರಲು ತಂಡ ಕೈಜೋಡಿಸಿದೆ. ಈ ಸಿನಿಮಾ ಚಿತ್ರೀಕರಣ ಕೂಡಾ ನಡೆಸುತ್ತಿದೆ.
ವರುಣ್ ಧವನ್ ಇತ್ತೀಚೆಗೆ ಸೆಲೆಬ್ರಿಟಿ ಟಾಕ್ ಶೋ ಕಾಫಿ ವಿಥ್ ಕರಣ್‌ನ ಇತ್ತೀಚಿನ ಸೀಸನ್‌ನಲ್ಲಿ ಅವರ ಸ್ಟೂಡೆಂಟ್ ಆಫ್ ದಿ ಇಯರ್ ಸಹನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆಯಲ್ಲಿ ಕಾಣಿಸಿಕೊಂಡಿದ್ದರು.