'ಜಸ್ಟ್ ಪಾಸ್’ ಆಗಲು ಹೊರಟ ಶ್ರೀಗೆ ನಾಯಕಿ ಸಿಕ್ಕಳು …

Sri Mahadev - Pranathi
Published on

ಬೆಂಗಳೂರು: 'ಇರುವುದೆಲ್ಲವ ಬಿಟ್ಟು', 'ಗಹಾನನ ಅಂಡ್​ ಗ್ಯಾಂಗ್​' ಚಿತ್ರಗಳಲ್ಲಿ ನಟಿಸಿರುವ ಶ್ರೀ, ಈಗ ಇನ್ನೊಂದು ಹೊಸ ಚಿತ್ರದಲ್ಲಿ ನಟಿಸುವುದಕ್ಕೆ ಗ್ರೀನ್​ ಸಿಗ್ನಲ್​ ನೀಡಿದ್ದಾರೆ. ಈ ಬಾರಿ 'ಜಸ್ಟ್​ ಪಾಸ್​' ಎಂಬ ಚಿತ್ರವನ್ನು ಅವರು ಒಪ್ಪಿಕೊಂಡಿದ್ದು, ಈ ಚಿತ್ರ ಡಿ.14ರಂದು ಪ್ರಾರಂಭವಾಗಲಿದೆ.

ಇನ್ನು, ಶ್ರೀಗೆ ನಾಯಕಿ ಯಾರಾಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಈಗ ಆ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಚಿತ್ರಕ್ಕೆ ಹೀರೋಯಿನ್ ಹುಡುಕಾಟಲ್ಲಿದ್ದ ಚಿತ್ರತಂಡಕ್ಕೆ ಹೊಸ ಪ್ರತಿಭೆ ಪ್ರಣತಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. 'ಡಾನ್ಸ್ ಕರ್ನಾಟಕ ಡಾನ್ಸ್', 'ಫ್ಯಾಮಿಲಿ ವಾರ್ ಸೀಸನ್ 2' ರನ್ನರ್ ಅಪ್ ಆಗಿರುವ ಪ್ರಣತಿ, 'ಬ್ರಹ್ಮಗಂಟು' ಸೀರಿಯಲ್ ನಲ್ಲೂ ನಟಿಸಿದ್ದಾರೆ. ಈಗ 'ಜಸ್ಟ್ ಪಾಸ್' ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಈ ಹಿಂದೆ ‘ತರ್ಲೆ ವಿಲೇಜ್’, ‘ಪರಸಂಗ’, ‘ದೊಡ್ಡಹಟ್ಟಿ ಬೋರೇಗೌಡ’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಕೆ.ಎಂ.ರಘು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ರಾಯ್ಸ್ ಎಂಟಟೈನ್ಮೆಂಟ್ ಬ್ಯಾನರ್ ನಡಿ ಶಶಿಧರ್.ಕೆ.ವಿ ಮತ್ತು ಶ್ರೀಧರ್ ಕೆ.ವಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

'ಜಸ್ಟ್​ ಪಾಸ್​' ಚಿತ್ರದಲ್ಲಿ ಶ್ರೀ ಮತ್ತು ಪ್ರಣತಿ ಜತೆಗೆ ರಂಗಾಯಣ ರಘು, ಸಾಧು ಕೋಕಿಲ, ಸುಚೇಂದ್ರ ಪ್ರಸಾದ್, ನವೀನ್ ಡಿ ಪಡೀಲ್, ಪ್ರಕಾಶ್ ತುಮ್ಮಿನಾಡ್, ದೀಪಕ್ ರೈ ಮುಂತಾದವರು ನಟಿಸುತ್ತಿದ್ದು, ಹರ್ಷವರ್ಧನ್ ರಾಜ್ ಸಂಗೀತ ಮತ್ತು ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಾಹಣ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net