More

    ‘ಡಾರ್ಲಿಂಗ್’ ಕೃಷ್ಣ ಈಗ ‘Mr ಬ್ಯಾಚುಲರ್’; ಜನವರಿ 6ಕ್ಕೆ ಚಿತ್ರ ತೆರೆಗೆ …

    ಬೆಂಗಳೂರು: ‘ಡಾರ್ಲಿಂಗ್’ ಕೃಷ್ಣ ಕೆಲವು ವರ್ಷಗಳ ಹಿಂದೆಯೇ ಈ ಚಿತ್ರ ಒಪ್ಪಿದ್ದರು. ಕಾರಣಾಂತರಗಳಿಂದ ಚಿತ್ರ ತಡವಾಗಿ ಆಗಿ, ಈಗ ಬಿಡುಗಡೆಗೆ ಬಂದು ನಿಂತಿದೆ. ಜನವರಿ 6ಕ್ಕೆ ಚಿತ್ರವು ಬಿಡುಗಡೆಯಾಗುತ್ತಿದ್ದು, ಮೊದಲ ಹಂತವಾಗಿ ಇತ್ತೀಚೆಗೆ ‘ಮದುವೆ ಯಾವಾಗ’ ಎಂಬ ಹಾಡೊಂದು ಬಿಡುಗಡೆಯಾಗಿದೆ.

    'ಡಾರ್ಲಿಂಗ್' ಕೃಷ್ಣ ಈಗ 'Mr ಬ್ಯಾಚುಲರ್'; ಜನವರಿ 6ಕ್ಕೆ ಚಿತ್ರ ತೆರೆಗೆ …ಇದನ್ನೂ ಓದಿ: ಒಬ್ಬ ನಟ; ಮೂರು ಪಾತ್ರಗಳು; 54 ಪ್ರಶಸ್ತಿಗಳು … ಅದೇ ‘ಯದ್ಭಾವಂ ತದ್ಭವತಿ’

    ವಿಜಯ್ ಪ್ರಕಾಶ್ ಹಾಡಿರುವ ಈ ಹಾಡಿಗೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದು, ಮಾರುತಿ ಸಾಹಿತ್ಯ ಬರೆದಿದ್ದಾರೆ. ಯೂಟ್ಯೂಬ್​ನ ಜಂಕಾರ್​ ಮ್ಯೂಸಿಕ್​ ಚಾನಲ್​ನಲ್ಲಿ ಈ ಹಾಡು ಬಿಡುಗಡೆಯಾಗಿದೆ.

    ಈ ಚಿತ್ರದ ಕುರಿತು ಮಾತನಾಡುವ ಕೃಷ್ಣ, ‘ನಾನು ‘ಲವ್ ಮಾಕ್ಟೇಲ್’ ಚಿತ್ರ ಆರಂಭಿಸುವುದಕ್ಕೂ ಮುನ್ನ ಶುರುವಾದ ಚಿತ್ರವಿದು. ಈ ಚಿತ್ರದ ಸಂಭಾವನೆಯಿಂದಲೇ ನಾನು ‘ಲವ್ ಮಾಕ್ಟೇಲ್’ ಶುರು ಮಾಡಿದ್ದು. ಹಾಗಾಗಿ, ನನಗೆ ಈ ಚಿತ್ರದ ಮೇಲೆ ವಿಶೇಷ ಪ್ರೀತಿ. ನಾಯ್ಡು ಅವರ ನಿರ್ದೇಶನದಲ್ಲಿ ಈ ಚಿತ್ರ ಚೆನ್ನಾಗಿ ಬಂದಿದೆ. ಮನರಂಜನೆಯ ಜೊತೆಗೆ ಆಕ್ಷನ್, ಸೆಂಟಿಮೆಂಟ್ ಸನ್ನಿವೇಶಗಳು ಇದೆ‌. ನಿಮಿಕಾ ರತ್ನಾಕರ್ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಮಿಲನ ನಾಗರಾಜ್ ಇದ್ದಾರೆ’ ಎಂದು ಮಾಹಿತಿ ನೀಡುತ್ತಾರೆ ಕೃಷ್ಣ.

    ನಿರ್ದೇಶಕ ನಾಯ್ಡು, ಪುರಿ ಜಗನ್ನಾಥ್ ಅವರ ಬಳಿ ಕೆಲಸ ಮಾಡುತ್ತಿದ್ದರಂತೆ. ‘ಇದು ನನ್ನ ನಿರ್ದೇಶನದ ಮೊದಲ ಚಿತ್ರ. ಮದುವೆ ವಯಸ್ಸಿಗೆ ಬಂದ ಹುಡುಗನನ್ನು ಸಾಮಾನ್ಯವಾಗಿ ಎಲ್ಲರು ಮದುವೆ ಯಾವಾಗ? ಅಂತ ಕೇಳುತ್ತಾರೆ. ಇಂದು ಬಿಡುಗಡೆಯಾಗಿರುವ ಈ ಹಾಡು ಕೂಡ ಆ ವಾಕ್ಯದಿಂದಲೇ ಆರಂಭವಾಗುತ್ತದೆ‌’ ಎಂದರು.

    ಇದನ್ನೂ ಓದಿ: ಹಿರಿಯ ನಟ ನಂದಮೂರಿ ಬಾಲಕೃಷ್ಣಗೆ ಕನ್ನಡದ ಶ್ರೀಲೀಲಾ ನಾಯಕಿ! ಯಾವ ಚಿತ್ರ ಗೊತ್ತಾ?

    ‘Mr ಬ್ಯಾಚುಲರ್’ ಚಿತ್ರವನ್ನು ಶ್ರೀನಿವಾಸ್, ಹನುಮಂತ ರಾವ್ ಹಾಗೂ ಸ್ವರ್ಣಲತ ನಿರ್ಮಾಣ ಮಾಡಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಹಾಗೂ ಶ್ರೀ ಕ್ರೇಜಿಮೈಂಡ್ಸ್ ಛಾಯಾಗ್ರಹಣ – ಸಂಕಲನ ಈ ಚಿತ್ರಕ್ಕಿದೆ. ಕೃಷ್ಣ, ನಿಮಿಕಾ ಮತ್ತು ಮಿಲನಾ ಅಲ್ಲದೆ, ಶ್ರೀನಿವಾಸಮೂರ್ತಿ, ಸಾಧು ಕೋಕಿಲ, ಅಯ್ಯಪ್ಪ ಶರ್ಮ, ಚಿಕ್ಜಣ್ಣ, ಪವಿತ್ರ ಲೋಕೇಶ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

    ಮಾಡೆಲ್ ಅವಿವಾ ಬಿದ್ದಪ್ಪ ಜತೆ ಅಂಬಿ ಪುತ್ರನ ನಿಶ್ಚಿತಾರ್ಥ: ಶೀಘ್ರದಲ್ಲೇ ವೈವಾಜಿಕ ಜೀವನಕ್ಕೆ ಕಾಲಿಡಲಿದ್ದಾರೆ ಅಭಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts