More

    ಮಾಡೆಲ್ ಅವಿವಾ ಬಿದ್ದಪ್ಪ ಜತೆ ಅಂಬಿ ಪುತ್ರನ ನಿಶ್ಚಿತಾರ್ಥ: ಶೀಘ್ರದಲ್ಲೇ ವೈವಾಜಿಕ ಜೀವನಕ್ಕೆ ಕಾಲಿಡಲಿದ್ದಾರೆ ಅಭಿ

    ಬೆಂಗಳೂರು: ಇತ್ತೀಚೆಗಷ್ಟೇ ನಟ ಅಭಿಷೇಕ್​ ಅಂಬರೀಷ್ (Abhishek ambareesh)​ ಅವರ ಮದುವೆ ಸುದ್ದಿ ಸ್ಯಾಂಡಲ್​ವುಡ್​ (Sandalwood) ಅಂಗಳದಲ್ಲಿ ಕೇಳಿಬಂದಿತ್ತು. ಆದರೆ, ಈ ಸುದ್ದಿಯನ್ನು ಅಭಿಷೇಕ್​ ತಳ್ಳಿಹಾಕಿದ್ದರು. ಆದರೆ, ಮದುವೆ ವಿಚಾರವನ್ನು ಅಂಬರೀಷ್​ ಕುಟುಂಬದ ಆಪ್ತ ಮೂಲಗಳು ಖಚಿತಪಡಿಸಿದ್ದವು. ಇದೀಗ ಅದು ಅಧಿಕೃತವಾಗಿದ್ದು, ಇಂದು (ಡಿ.11) ಅಭಿಷೇಕ್​ ಅಂಬರೀಷ್​ ತಮ್ಮ ಗೆಳತಿ ಹಾಗೂ ಮಾಡೆಲ್​ ಅವಿವಾ ಬಿದ್ದಪ್ಪ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

    ಇಂದು ಬೆಳಗ್ಗೆ 9.30ಕ್ಕೆ ಆರ್ ಟಿ ನಗರದ ಫೋರ್ ಸೀಸನ್ಸ್ ಹೋಟೆಲ್​ನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ಎರಡೂ ಕುಟುಂಬದ ಸಮ್ಮುಖದಲ್ಲಿ ನಡೆದಿದೆ. ಸಚಿವ ಅಶ್ವಥ್ ನಾರಾಯಣ್ ಸೇರಿದಂತೆ ನಿಶ್ಚಿತಾರ್ಥಕ್ಕೆ ರಾಜಕೀಯ ಹಾಗೂ ಸಿನಿಮಾ ಗಣ್ಯರು ಆಗಮಿಸಿ ನವಜೋಡಿಗೆ ಶುಭ ಹಾರೈಸಿದರು.

    ಅಭಿ ಕೈಹಿಡಿಯಲಿರುವ ಅವಿವಾ ಬಿದ್ದಪ್ಪ, ಫ್ಯಾಷನ್​ ಲೋಕದ ಖ್ಯಾತ ನಾಮ ಪ್ರಸಾದ್​ ಬಿದ್ದಪ್ಪ ಅವರು ಮಗಳು. ಅವಿವಾ ಮತ್ತು ಅಭಿ ನಾಲ್ಕು ವರ್ಷಗಳಿಂದ ಲವ್​ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಇಬ್ಬರು ಪ್ರೀತಿಗೆ ಎರಡೂ ಕುಟುಂಬದಲ್ಲಿ ಗ್ರೀನ್​ ಸಿಗ್ನಲ್​ ಸಿಕ್ಕ ಬಳಿಕ ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ಇಬ್ಬರ ಮದುವೆ ನಡೆಯಲಿದೆ.

    ನಿಶ್ಚಿತಾರ್ಥ ಆಗುವವರೆಗೂ ಹುಡುಗಿ ಯಾರು ಎಂಬುದು ಯಾರಿಗೂ ತಿಳಿಯದಂತೆ ರಹಸ್ಯ ಕಾಪಾಡುವ ಪ್ರಯತ್ನ ಮಾಡಿದ್ದರು. ಆದರೆ, ರಹಸ್ಯ ಹೆಚ್ಚು ದಿನ ಉಳಿಯಲಿಲ್ಲ. ಬಹಳ ಹಿಂದೆಯೇ ಅವಿವಾ ಬಿದ್ದಪ್ಪ ಹೆಸರು ಮಾಧ್ಯಮಗಳಲ್ಲಿ ಹರಿದಾಡಿತು. ಸದ್ಯ ಅಭಿಷೇಕ್​ ಕಾಳಿ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ಸದ್ಯದಲ್ಲಿ ಹಸೆಮಣೆ ಏರಲಿದ್ದಾರೆ.

    ಶೀಘ್ರದಲ್ಲೇ ಅಭಿಷೇಕ್​ ಮದ್ವೆ ಫಿಕ್ಸ್​ ಎನ್ನುತ್ತಿವೆ ಆಪ್ತ ಮೂಲಗಳು: ಇವರೇ ನೋಡಿ ಅಭಿ ಮನಸ್ಸು ಗೆದ್ದ ಚೆಲುವೆ!?

    ಒಂದೇ ಕುಟುಂಬದ ಐವರ ಸಾವನ್ನು ಬಂಡವಾಳ ಮಾಡಿಕೊಂಡ ಸ್ವಯಂಘೋಷಿತ ದೇವಮಹಿಳೆಯಿಂದ ನೀಚ ಕೃತ್ಯ!

    ಒಂದೇ ಕುಟುಂಬದ ಐವರ ಸಾವನ್ನು ಬಂಡವಾಳ ಮಾಡಿಕೊಂಡ ಸ್ವಯಂಘೋಷಿತ ದೇವಮಹಿಳೆಯಿಂದ ನೀಚ ಕೃತ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts