More

    ಒಂದೇ ಕುಟುಂಬದ ಐವರ ಸಾವನ್ನು ಬಂಡವಾಳ ಮಾಡಿಕೊಂಡ ಸ್ವಯಂಘೋಷಿತ ದೇವಮಹಿಳೆಯಿಂದ ನೀಚ ಕೃತ್ಯ!

    ತಿರುವನಂತಪುರಂ: ಸ್ವಯಂಘೋಷಿತ ದೇವಮಹಿಳೆಯೊಬ್ಬಳು ವಾಮಾಚಾರದ ಹೆಸರಿನಲ್ಲಿ ಕುಟುಂಬವೊಂದರಿಂದ 55 ಸವರನ್​ ಚಿನ್ನ ಮತ್ತು 1.5 ಲಕ್ಷ ರೂ. ಹಣ ಸುಲಿಗೆ ಮಾಡಿರುವ ಘಟನೆ ಕೇರಳ ರಾಜಧಾನಿ ತಿರುವನಂತಪುರದ ವೇಲ್ಲಾಯಾಣಿಯಲ್ಲಿ ನಡೆದಿದೆ.

    ವೆಲ್ಲಾಯಾಣಿ ಮೂಲದ ವಿಶ್ವಂಭರನ್​ ಅವರ ಕುಟುಂಬವನ್ನು ಕಲಿಯಕ್ಕವಿಲಾ ಬಸ್ ನಿಲ್ದಾಣದ ಬಳಿ ವಾಸಿಸುವ ವಿದ್ಯಾ ಅಲಿಯಾಸ್​ ಥೆಟ್ಟಿಯೋಡೆ ದೇವಿ ಎಂಬ ಮಹಿಳೆ ವಂಚಿಸಿದ್ದಾರೆ. 2021ರಲ್ಲೇ ಈ ಘಟನೆ ನಡೆದಿತ್ತು. ಆದರೆ ಆರೋಪಿಗಳ ಬೆದರಿಕೆಯಿಂದಾಗಿ ಕುಟುಂಬಸ್ಥರು ಇದನ್ನು ಆರಂಭದಲ್ಲಿ ಬಹಿರಂಗಪಡಿಸಿರಲಿಲ್ಲ. ನಾಲ್ಕು ತಿಂಗಳ ಹಿಂದೆಯೇ ಮನೆಯವರು ನೇಮೂರು ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಕುಟುಂಬದವರು ಸುದ್ದಿ ವಾಹಿನಿಯೊಂದಕ್ಕೆ ಘಟನೆಯನ್ನು ಬಹಿರಂಗಪಡಿಸಿದ ನಂತರ ವಿದ್ಯಾ ಮತ್ತು ಅವರ ಗ್ಯಾಂಗ್ ತಲೆಮರೆಸಿಕೊಂಡಿದೆ.

    ವಿಶ್ವಂಭರನ್ ಅವರ ಮಗ ಸೇರಿದಂತೆ ಕುಟುಂಬದ ಐವರು ಸದಸ್ಯರು 2020ರಲ್ಲಿ ಮೃತಪಟ್ಟರು. ಇದಾದ ಬಳಿಕ ನೆಯ್ಯಾಟಿಂಕರಾದ ಸ್ನೇಹಿತರೊಬ್ಬರು ವಿಶ್ವಂಭರನ್ ಮತ್ತು ಅವರ ಮಗಳು ವಿನಿತು ಅವರನ್ನು 2021ರ ಜನವರಿಯಲ್ಲಿ ವಿದ್ಯಾ ಬಳಿ ಕರೆದೊಯ್ದರು. ಅಲ್ಲಿಂದಾಚೆಗೆ ಅವರ ಕುಟುಂಬಕ್ಕೆ ಇನ್ನಷ್ಟು ಸಂಕಷ್ಟ ಎದುರಾಯಿತು. ವಿದ್ಯಾಳನ್ನು ಒಳಗೊಂಡ ಅವರ ನಾಲ್ವರ ತಂಡವು 2021ರ ಜನವರಿಯಲ್ಲಿ ಪೂಜೆಗಾಗಿ ವೆಲ್ಲಾಯಾಣಿಯಲ್ಲಿರುವ ವಿಶ್ವಂಭರನ್ ಅವರ ಮನೆಗೆ ತಲುಪಿದರು. ಕುಟುಂಬದಲ್ಲಿ ಶೀಘ್ರದಲ್ಲೇ ಮತ್ತೊಂದು ಅಸಹಜ ಸಾವು ಸಂಭವಿಸಲಿದೆ ಎಂದು ವಿದ್ಯಾ, ಕುಟುಂಬವನ್ನು ಹೆದರಿಸಿದ್ದಾರೆ. ಮೊದಲೇ ಮಗನ ಅಕಾಲಿಕ ಮರಣದಿಂದ ಕಂಗಾಲಾಗಿದ್ದ ವಿಶ್ವಂಭರನ್​ ಹಾಗೂ ಕುಟುಂಬದವರು ವಿದ್ಯಾಳ ಮಾತನ್ನು ನಂಬಿದ್ದಾರೆ. ಇದರ ಬೆನ್ನಲ್ಲೇ ಮನೆಯಲ್ಲಿದ್ದ ಕೊಠಡಿಯನ್ನು ಪೂಜಾ ಸ್ಥಳವನ್ನಾಗಿ ಪರಿವರ್ತಿಸಲಾಗಿದೆ.

    ಇದಾದ ಬಳಿಕ ರಾತ್ರಿ ಪೂಜೆಗಳು ಸಹ ನಡೆದವು. ದೇವಿಯನ್ನು ಒಲಿಸಿಕೊಳ್ಳಲು ಚಿನ್ನ ಮತ್ತು ಹಣವನ್ನು ಪೂಜಾ ಜಾಗದಲ್ಲಿರುವ ಕಪಾಟಿನಲ್ಲಿಟ್ಟು ಪೂಜಿಸಬೇಕು ಎಂದು ಹೇಳಿದ ಬಳಿಕ ವಿಶ್ವಂಭರನ್​​ ಚಿನ್ನ ಮತ್ತು ಹಣವನ್ನು ವಿದ್ಯಾಗೆ ನೀಡಿದರು. ನಂತರ ಚಿನ್ನ ಮತ್ತು ಹಣವನ್ನು ಬೀರು ಒಳಗೆ ಇಟ್ಟು ಬೀಗ ಹಾಕಲಾಗಿತ್ತು. 15 ದಿನಗಳವರೆಗೆ ಬೀರು ತೆರೆಯದಂತೆ ಕುಟುಂಬದವರಿಗೆ ವಿದ್ಯಾ ಸೂಚಿಸಿದ್ದಳು. ಕೋಣೆಯಲ್ಲಿ ದೇವಿ ಮತ್ತು ಎರಡು ತಲೆಯ ಸರ್ಪ ಅಗೋಚರವಾಗಿ ಕಾಣಿಸಿಕೊಂಡಿದೆ ಎಂದು ವಿದ್ಯಾ ಹೇಳಿದ್ದರಿಂದ ಕುಟುಂಬದ ಸದಸ್ಯರು ಕೊಠಡಿ ಪ್ರವೇಶಿಸಲು ಧೈರ್ಯ ಮಾಡಲಿಲ್ಲ. ಇದರ ನಡುವೆ ವಿದ್ಯಾ ಗ್ಯಾಂಗ್ ಬಂದು ಎರಡು ದಿನ ಪೂಜೆ ಸಲ್ಲಿಸಿದರು. ಆದರೆ, ಹದಿನೈದು ದಿನಗಳ ನಂತರ ಗ್ಯಾಂಗ್ ಪೂಜೆ ಸಲ್ಲಿಸಲು ಬರುವುದನ್ನು ನಿಲ್ಲಿಸಿತು. ಏಕೆ ಎಂದು ವಿಚಾರಿಸಿದಾಗ ಶಾಪ ಮುಗಿದಿಲ್ಲ ಮೂರು ತಿಂಗಳು ಬೇಕು ಎಂದು ವಿದ್ಯಾ ಹೇಳಿದ್ದಾಳೆ. ಬಳಿಕ ಶಾಪ ವಿಮೋಚನೆಗೆ ಕಾಲಾವಕಾಶವನ್ನು ಒಂದು ವರ್ಷಕ್ಕೆ ವಿಸ್ತರಿಸಿದ್ದಾಳೆ. ನಾಲ್ಕು ತಿಂಗಳ ಹಿಂದೆ ಮನೆಯವರಿಗೆ ಅನುಮಾನ ಬಂದು ಬೀರು ತೆರೆದಾಗ ಚಿನ್ನಾಭರಣ ಹಾಗೂ ಹಣ ಕಳ್ಳತನವಾಗಿರುವುದು ಕಂಡು ಬಂದಿತ್ತು. ವಿಶ್ವಂಭರನ್​​, ವಿದ್ಯಾ ಅವರ ಮನೆಯಲ್ಲಿ ವಿಚಾರಿಸಿದಾಗ, ಪ್ರಕರಣ ದಾಖಲಿಸಿದರೆ ಇಡೀ ಕುಟುಂಬವನ್ನು ಕೊಲ್ಲುವುದಾಗಿ ಗ್ಯಾಂಗ್ ಬೆದರಿಕೆ ಹಾಕಿತ್ತು.

    ಕುಟುಂಬಸ್ಥರು ಮೊದಲು ಮೆಮೊಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಂದು ಎಸ್‌ಐ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಮರುದಿನವೇ ಎಸ್‌ಐ ವಿಶ್ವಂಭರನ್​​ರನ್ನು ಠಾಣೆಗೆ ಕರೆಸಿ, ಇದೊಂದು ಸುಳ್ಳು ದೂರು ಎಂದು ಹೇಳಿ ವಾರ್ನ್​ ಮಾಡಿ ಕಳುಹಿಸಿದ್ದರು. ವಿದ್ಯಾ ಅವರ ಗ್ಯಾಂಗ್​ನಿಂದ ಎಸ್‌ಐ ಲಂಚ ಪಡೆದಿದ್ದಾರೆ ಎಂದು ವಿಶ್ವಂಭರನ್ ಆರೋಪಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ, ನಗರ ಪೊಲೀಸ್ ಆಯುಕ್ತ ಹಾಗೂ ಡಿಜಿಪಿಗೆ ಕುಟುಂಬಸ್ಥರು ದೂರು ಸಲ್ಲಿಸಿದ್ದಾರೆ. ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

    ಲವ್ ಜಿಹಾದ್ ತಡೆಗೆ ವಿಶೇಷ ಪೊಲೀಸ್ ದಳ ರಚನೆ: ಹಿಂದೂ ಜನಜಾಗೃತಿ ಸಮಿತಿಗೆ ಗೃಹ ಸಚಿವರ ಭರವಸೆ

    ಕೇವಲ 16ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಪಡೆದು ಹೊಸ ಇತಿಹಾಸ ಬರೆದ ಬಾಲಕ!

    ರಾಜ್ಯ ಕಾಂಗ್ರೆಸ್​ ನಾಯಕರಿಗೆ ಹೈಕಮಾಂಡ್ ದಿಢೀರ್ ಬುಲಾವ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts