More

    ಕೇವಲ 16ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಪಡೆದು ಹೊಸ ಇತಿಹಾಸ ಬರೆದ ಬಾಲಕ!

    ಹೈದರಾಬಾದ್​: ಕೇವಲ 16ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಭಾರತದ ಮೊದಲ ಬಾಲಕ ಎಂಬ ಹೆಗ್ಗಳಿಕೆಗೆ ಹೈದರಾಬಾದ್​ ಮೂಲದ ಅಗಸ್ತ್ಯ ಜೈಸ್ವಾಲ್​ ಪಾತ್ರರಾಗಿದ್ದಾರೆ.

    16ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸುವ ಮೂಲಕ ಹೊಸ ಇತಿಹಾಸ ಬರೆದಿರುವ ಜೈಸ್ವಾಲ್​, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹೈದರಾಬಾದ್​ನ ಒಸ್ಮಾನಿಯಾ ವಿಶ್ವವಿದ್ಯಾಲಯದ ಸಮಾಜ ಶಾಸ್ತ್ರ ವಿಭಾಗದಲ್ಲಿ ಇತ್ತೀಚೆಗೆ ನಡೆದ ಅಂತಿಮ ವರ್ಷದ ಪರೀಕ್ಷೆಯಲ್ಲಿ ಫಸ್ಟ್​ ಕ್ಲಾಸ್​ನಲ್ಲಿ ಪಾಸ್​ ಆಗುವ ಮೂಲಕ ಜೈಸ್ವಾಲ್​ ದಾಖಲೆ ಬರೆದಿದ್ದಾರೆ.

    ಇದೇ ಅಗಸ್ತ್ಯ ಜೈಸ್ವಾಲ್ ಅವರ ಮೊದಲ ದಾಖಲೆಯಲ್ಲ. ಈ ಹಿಂದೆಯೂ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. 2020ರಲ್ಲಿ 14ನೇ ವಯಸ್ಸಿನಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದರು. ಇದು ಭಾರತದಲ್ಲಿ ಕಿರಿಯ ವಯಸ್ಸಿನಲ್ಲಿ ಪದವಿಯನ್ನು ಪೂರ್ಣಗೊಳಿಸಿದ ಮೊದಲ ಬಾಲಕ ಎಂಬ ಖ್ಯಾತಿಯನ್ನು ಗಳಿಸಿದರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಬಿಎ ಪದವಿ ಪೂರ್ಣಗೊಳಿಸಿದ್ದಾರೆ. ಇದಕ್ಕೂ ಮೊದಲು 9ನೇ ವಯಸ್ಸಿನಲ್ಲಿ ಎಸ್‌ಎಸ್‌ಸಿ ಬೋರ್ಡ್ ಪರೀಕ್ಷೆಗಳಲ್ಲಿ ತೇರ್ಗಡೆಯಾದ ತೆಲಂಗಾಣದ ಮೊದಲ ಬಾಲಕ ಎಂದು ಕೀರ್ತಿಯನ್ನು ಪಡೆದಿದ್ದಾನೆ.

    16ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ದೇಶದ ಅತ್ಯಂತ ಕಿರಿಯನೆಂಬ ಹೆಗ್ಗಳಿಕೆ ಬಗ್ಗೆ ಹರ್ಷ ವ್ಯಕ್ತಪಡಿಸಿದ ಅಗಸ್ತ್ಯ ಜೈಸ್ವಾಲ್, ನನ್ನ ಪೋಷಕರೇ ನನ್ನ ಶಿಕ್ಷಕರು. ನನ್ನ ತಂದೆ ಅಶ್ವಿನಿ ಕುಮಾರ್ ಜೈಸ್ವಾಲ್ ಮತ್ತು ತಾಯಿ ಭಾಗ್ಯಲಕ್ಷ್ಮಿ ಜೈಸ್ವಾಲ್ ಅವರು ಅನೇಕ ಸವಾಲುಗಳನ್ನು ಎದುರಿಸಿದ್ದಾರೆ. ಯಾವುದೂ ಅಸಾಧ್ಯವಲ್ಲ ಎಂದು ಸಾಬೀತುಪಡಿಸುವ ಸವಾಲುಗಳನ್ನು ನಾನು ಸಹ ಎದುರಿಸುತ್ತಿದ್ದೇನೆ ಎಂದರು.

    ಅಂದಹಾಗೆ ಅಗಸ್ತ್ಯ ಜೈಸ್ವಾಲ್​ ಅವರ ಸಹೋದರಿ ನೈನಾ ಜೈಸ್ವಾಲ್ ಸಹ ತುಂಬಾ ಪ್ರಖ್ಯಾತಿ ಹೊಂದಿದ್ದಾರೆ. ಅವರೊಬ್ಬಳು ಟೇಬಲ್​ ಟೆನ್ನಿಸ್​ ಆಟಗಾರ್ತಿ. ಟೇಬಲ್ ಟೆನ್ನಿಸ್​ ಆಟಗಾರ್ತಿಯಾಗಿ ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿರುವ ನೈನಾ, ತಮ್ಮ ಅಗಾಧ ಬುದ್ಧಿಶಕ್ತಿಯಿಂದಲೂ ಖ್ಯಾತಿ ಪಡೆದಿದ್ದಾರೆ. ಏಕೆಂದರೆ, 8ನೇ ವಯಸ್ಸಿಗೆ ಹತ್ತನೇ ತರಗತಿ ಮುಗಿಸಿ, 13ನೇ ವಯಸ್ಸಿನಲ್ಲಿ ಪದವಿ, 15ನೇ ವಯಸ್ಸಿಗೆ ಸ್ನಾತಕೋತ್ತರ ಪದವಿ ಮುಗಿಸಿದ ಈಕೆ ಏಷ್ಯಾದಲ್ಲೇ ಅತ್ಯಂತ ಕಿರಿಯ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಗೌರವಕ್ಕೆ ಪಾತ್ರಳಾಗಿದ್ದಾರೆ. ಮೋಟಿವೇಶನಲ್ ಸ್ಪೀಕರ್ ಆಗಿ ಮಿಂಚುತ್ತಿರುವ ನೈನಾ ಜೈಶ್ವಾಲ್ ಇತ್ತೀಚೆಗಷ್ಟೇ ತನ್ನ ತಾಯಿ ಭಾಗ್ಯಲಕ್ಷ್ಮಿಯೊಂದಿಗೆ ಎಲ್​ಎಲ್​ಬಿ ಸೇರಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. (ಏಜೆನ್ಸೀಸ್​)

    ಜೆಡಿಎಸ್ ಮುಖಂಡನ ಮನೆಯಲ್ಲಿ ಹುಲಿ ಚರ್ಮ ಪತ್ತೆ: ಆರೋಪಿ ಸೇರಿ 4 ಹುಲಿ ಚರ್ಮದ ತುಂಡುಗಳು ವಶಕ್ಕೆ

    ಬೆಳ್ಳಂಬೆಳಗ್ಗೆ ಶಿವಮೊಗ್ಗದಲ್ಲಿ ಲಾರಿ-ಕಾರು ನಡುವೆ ಭೀಕರ ಅಪಘಾತ: ಮೂವರು ಸಾವು, ಓರ್ವನ ಸ್ಥಿತಿ ಗಂಭೀರ

    ಇನ್ನು 3 ದಿನ ಮಳೆ ಮುಂದುವರಿಯುವ ಸಾಧ್ಯತೆ: ರಾಜಧಾನಿ ಫುಲ್ ಥಂಡಾ, ಆರೋಗ್ಯದ ಮೇಲಿರಲಿ ಗಮನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts