More

    ಇನ್ನು 3 ದಿನ ಮಳೆ ಮುಂದುವರಿಯುವ ಸಾಧ್ಯತೆ: ರಾಜಧಾನಿ ಫುಲ್ ಥಂಡಾ, ಆರೋಗ್ಯದ ಮೇಲಿರಲಿ ಗಮನ

    ಬೆಂಗಳೂರು: ಮಾಂಡೌಸ್ ಚಂಡಮಾರುತ ಹಿನ್ನೆಲೆಯಲ್ಲಿ ರಾಜ್ಯ ಮತ್ತು ರಾಜಾಧಾನಿಯಲ್ಲಿ ಇನ್ನು ಮೂರು ದಿನ ಮಳೆ ಮುಂದುವರಿಯಲಿದ್ದು, ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು, ಕರಾವಳಿ ಹಾಗೂ ಬೆಂಗಳೂರಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

    ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ರಾಮನಗರ, ತುಮಕೂರು, ಚಾಮರಾಜನಗರ ಹಾಗೂ ಕೋಲಾರಕ್ಕೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿಗೆ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಕರಾವಳಿ ಭಾಗಕ್ಕೆ ಇಂದು ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರಕ್ಕೆ ಯಲ್ಲೋ ಅಲರ್ಟ್ ನೀಡಲಾಗಿದೆ.‌‌‌ ಗಾಳಿಯ ಪ್ರಮಾಣ 65 ರಿಂದ 75 ಕೀಮೀ‌ ವೇಗದಲ್ಲಿ ಇರಲಿದ್ದು, ಡಿಸೆಂಬರ್ 12 ರವರೆಗೂ ಮಳೆಯಾಗಲಿದೆ.

    ರಾಜ್ಯ ರಾಜಧಾನಿ ಫುಲ್ ಥಂಡಾ ಥಂಡಾ
    ಸಿಲಿಕಾನ್​ ಸಿಟಿಯು ಮುಂಜಾನೆ ಮಂಜಲ್ಲಿ ಆವರಿಸಿದ್ದು, ನಿರಂತರವಾಗಿ ಸಾಧಾರಣ ಮಳೆಯಾಗುತ್ತಿದೆ. ಎಡೆಬಿಡದೆ ಸುರಿಯುತ್ತಿದೆ ಜಿಟಿಜಿಟಿ‌ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಇಂದು ಮುಂಜಾನೆ ನಗರದ ಕೆಲವು ಭಾಗಗಳಲ್ಲಿ ಮಾತ್ರ ಮಳೆಯಾಗಿದೆ. ಯಲಹಂಕ, ಹೆಚ್ಎಎಲ್, ಹೆಬ್ಬಾಳ ಬಳಿ ಮಂಜು ಮುಸುಕಿದ ವಾತಾವರಣವಿತ್ತು. ಲಾಲ್​ಬಾಗ್​, ರಾಜಾಜಿನಗರ, ಮೆಜೆಸ್ಟಿಕ್, ವಿಜಯನಗರ, ಕಬ್ಬನ್‌ಪಾರ್ಕ್, ಬಸವೇಶ್ವರ ನಗರ ಹಾಗೂ ವಿಧಾನಸೌದ ಸುತ್ತಾಮುತ್ತಾ ಜಿಟಿಜಿಟಿ ಮಳೆಯೊಂದಿಗೆ ಮಂಜು ಕವಿದಿದೆ.

    ಬೆಂಗಳೂರು ನಗರದಲ್ಲಿ ಕನಿಷ್ಟ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇದ್ದು, ಗರಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇದೆ. ಹೀಗಾಗಿ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಮಕ್ಕಳ, ವೃದ್ಧರ ಆರೋಗ್ಯದ ಮೇಲೆ ಪರಿಣಾಮ ಬೀರಲಿದ್ದು, ಮುನ್ನೆಚ್ಚರಿಕೆ ವಹಿಸಲು ವೈದ್ಯರು ಸಲಹೆ‌‌‌ ನೀಡಿದ್ದಾರೆ. ಅಸ್ತಮಾ, ಕೆಮ್ಮು, ಡಯಾಬಿಟಿಸ್, ಹೃದ್ರೋಗ ಸಮಸ್ಯೆ ಇರುವವರು ಎಚ್ಚರದಿಂದ ಇರಲು ಸೂಚನೆ ನೀಡಲಾಗಿದೆ. (ದಿಗ್ವಿಜಯ ನ್ಯೂಸ್​)

    ಒಂದೇ ಆಟೋದಲ್ಲಿ ಪ್ರಯಾಣಿಸಿದ ಒಟ್ಟು ಪ್ರಯಾಣಿಕರ ಸಂಖ್ಯೆ ಕೇಳಿದ್ರೆ ನಿಮ್ಮ ಹುಬ್ಬೇರುವುದಂತೂ ಖಚಿತ!

    ಮದ್ವೆ ಫೋಟೋಶೂಟ್​ ವೇಳೆ ತನ್ನನ್ನು ಮರೆತ ವಧುವಿನ ಮೇಲೆ ಆಕ್ರೋಶಗೊಂಡ ಆನೆ ಏನು ಮಾಡಿದೆ ನೋಡಿ!

    ಹಠಾತ್ ಸಾವು ವಿಚಾರವಾಗಿ ಕೇಂದ್ರಕ್ಕೆ ನೋಟಿಸ್; ಸ್ವಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಂಡ ಮಹಿಳಾ ಆಯೋಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts