More

    ಒಂದೇ ಆಟೋದಲ್ಲಿ ಪ್ರಯಾಣಿಸಿದ ಒಟ್ಟು ಪ್ರಯಾಣಿಕರ ಸಂಖ್ಯೆ ಕೇಳಿದ್ರೆ ನಿಮ್ಮ ಹುಬ್ಬೇರುವುದಂತೂ ಖಚಿತ!

    ನವದೆಹಲಿ: ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಹಳ್ಳಿಯಲ್ಲೂ ಆಟೋ ರಿಕ್ಷಾ ಪ್ರಮುಖ ಸಾರಿಗೆ ಸಂಪರ್ಕ ಸಾಧನವಾಗಿದೆ. ಮೊದಲೆಲ್ಲ ಬಸ್​ಗಾಗಿ ಕಾದು ಕುಳಿತುಕೊಳ್ಳುತ್ತಿದ್ದರು. ಬಸ್​ ಹತ್ತಿದ್ದರೂ ಕೂಡ ಅದು ಪ್ರಮುಖ ರಸ್ತೆಯಲ್ಲಿ ಮಾತ್ರ ಸಂಚರಿಸುತ್ತಿತ್ತು. ಆದರೆ, ಈಗ ಪ್ರತಿಯೊಂದು ಹಳ್ಳಿಗಳನ್ನು ಆಟೋ ರಿಕ್ಷಾ ಸಂಪರ್ಕ ಮಾಡಲಿದೆ. ಅಲ್ಲದೆ, ಟಿಕೆಟ್​ ದರ ಕೂಡ ಅಗ್ಗವಾಗಿರುವುದರಿಂದ ಆಟೋ ಎಲ್ಲರ ಪ್ರಮುಖ ಸಂಚಾರಿ ವ್ಯವಸ್ಥೆಯಾಗಿದೆ. ಆದರೆ, ಕೆಲವೊಂದು ಕಡೆ ಅಗತ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ತುಂಬಿಕೊಂಡು ಹೋಗುತ್ತಿರುವುದು ಸಾಮಾನ್ಯವಾಗಿದ್ದು, ಅಪಘಾತಗಳು ಸಂಭವಿಸಿದ ಉದಾಹರಣೆಗಳೂ ಇವೆ.

    ಇದೀಗ ಸಾಮಾಜಿಕ ಜಾಲತಾಣದಲ್ಲಿ ಆಟೋಗೆ ಸಂಬಂಧಿಸಿದ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್​ ಆಗಿದೆ. ಕಾರಣ ಏನೆಂದರೆ, ಆಟೋದಲ್ಲಿ ಪ್ರಯಾಣಿಸುತ್ತಿರುವವರ ಒಟ್ಟು ಸಂಖ್ಯೆ ಕೇಳಿದ್ರೆ ನಿಮಗೆ ತಲೆ ತಿರುಗುವುದು ಗ್ಯಾರೆಂಟಿ.

    ಸಾಮಾನ್ಯವಾಗಿ ಆಟೋದಲ್ಲಿ 5 ಮಂದಿ ಪ್ರಯಾಣಿಸಬಹುದು. ಹೆಚ್ಚೆಂದರೆ 10 ರಿಂದ 12 ಪ್ರಯಾಣಿಕರು ತೆರಳಬಹುದು. ಆದರೆ, ವೈರಲ್​ ಆಗಿರುವ ವಿಡಿಯೋದಲ್ಲಿ ಬರೋಬ್ಬರಿ 50 ಮಂದಿ ಒಂದೇ ಆಟೋದಲ್ಲಿ ಪ್ರಯಾಣಿಸುತ್ತಿದ್ದಾರೆ ಅಂದರೆ ನೀವು ನಂಬುತ್ತೀರಾ? ವಿಡಿಯೋ ನೋಡಿದ ಮೇಲೆ ನೀವು ನಂಬಲೇಬೇಕು.

    ಈ ವಿಡಿಯೋ ಮಧ್ಯಪ್ರದೇಶದ ಬುಡಕಟ್ಟು ಜನ ಹೆಚ್ಚಿರುವ ಅಲಿರಾಜಪುರಕ್ಕೆ ಸಂಬಂಧಿಸಿದ್ದು, ಒಂದೇ ಆಟೋದಲ್ಲಿ ಸುಮಾರು 50 ಮಂದಿಯನ್ನು ಕುರಿ ತುಂಬಿದ ಹಾಗೆ ತುಂಬಿಕೊಂಡು ಆಟೋ ಚಾಲಕ ಹೋಗುತ್ತಿರುವುದನ್ನು ಕಾಣಬಹುದು. ಆಟೋದ ಸುತ್ತಲೂ ಪ್ರಯಾಣಿಕರು ನೇತಾಡುತ್ತಿರುವುದನ್ನು ಸಹ ನೋಡಬಹುದು. ಈ ವಿಡಿಯೋವನ್ನು ಡಿ.7ರಂದು ಕಾಕ್ವಿ ಹೆಸರಿನ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಲಾಗಿದೆ.

    ವೈರಲ್​ ವಿಡಿಯೋ ಸ್ಥಳೀಯ ಪೊಲೀಸರ ಗಮನಕ್ಕೆ ಬಂದಿದ್ದು, ರಿಜಿಸ್ಟ್ರೇಸನ್​ ನಂಬರ್​ ಆಧಾರದ ಮೇಲೆ ಆಟೋವನ್ನು ಹುಡುಕಿ ದಂಡ ವಿಧಿಸಲು ಪೊಲೀಸರು ಆಟೋವನ್ನು ಹುಡುಕುತ್ತಿದ್ದಾರೆ. (ಏಜೆನ್ಸೀಸ್​)

    ಮದ್ವೆ ಫೋಟೋಶೂಟ್​ ವೇಳೆ ತನ್ನನ್ನು ಮರೆತ ವಧುವಿನ ಮೇಲೆ ಆಕ್ರೋಶಗೊಂಡ ಆನೆ ಏನು ಮಾಡಿದೆ ನೋಡಿ!

    ಗಣೇಶ್ ದಾದಾಗೆ ಮನಸೋತ ಅಭಿಮಾನಿಗಳು; ವಿಜಯಾನಂದ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ರವಿಚಂದ್ರನ್

    ಜಿಮ್ ಹೋಗುವ ಮಧ್ಯ ವಯಸ್ಕರಲ್ಲಿ ಹೆಚ್ಚಿದ ಹೃದಯಾಘಾತ; ಬಚಾವಾಗಲು ಇಲ್ಲಿದೆ ಉಪಾಯ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts