More

    ಒಬ್ಬ ನಟ; ಮೂರು ಪಾತ್ರಗಳು; 54 ಪ್ರಶಸ್ತಿಗಳು … ಅದೇ ‘ಯದ್ಭಾವಂ ತದ್ಭವತಿ’

    ಬೆಂಗಳೂರು: ಕನ್ನಡ ಮತ್ತು ತುಳು ಚಿತ್ರರಂಗದಲ್ಲಿ ನಟರಾಗಿ ಗುರುತಿಸಿಕೊಂಡಿರುವ ಅಮಿತ್​ ರಾವ್​, ಇದೀಗ ಸದ್ದಿಲ್ಲದೆ ‘ಯದ್ಭಾವಂ ತದ್ಭವತಿ’ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ವಿಶೇಷವೆಂದರೆ, ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ವಿವಿಧ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಈಗಾಗಲೇ 54 ಪ್ರಶಸ್ತಿಗಳು ಬಂದಿದೆ.

    ಇದನ್ನೂ ಓದಿ: ಎರಡೂವರೆ ವರ್ಷಗಳ ನಂತರವೂ ಸುಶಾಂತ್​ ಮನೆ ಖಾಲಿ ಇದೆಯಂತೆ … ಯಾಕೆ?

    ಈ ಚಿತ್ರದ ಬಗ್ಗೆ ಮಾತನಾಡುವ ಅಮಿತ್​ ರಾವ್, ”ಯದ್ಭಾವಂ ತದ್ಭವತಿ’ ಅಂದರೆ ನಾವು ಜಗತ್ತನ್ನು ಯಾವ ರೀತಿ ನೋಡುತ್ತೇವೋ, ಜಗತ್ತು ಸಹ ನಮ್ಮನ್ನು ಅದೇ ರೀತಿ ನೋಡುತ್ತದೆ ಎಂಬರ್ಥ. ಈ ಹಿಂದೆ ಹಾಲಿವುಡ್ ಚಿತ್ರವೊಂದನ್ನು ನೋಡಿದ್ದೆ. ಆಗ ಈ ರೀತಿಯ ಕಾನ್ಸೆಪ್ಟ್ ಇರುವ ಚಿತ್ರ ಮಾಡಬೇಕೆಂದುಕೊಂಡೆ. ಚಿತ್ರದಲ್ಲಿ‌ ನಾನೊಬ್ಬನೆ ನಟ. ಆದರೆ, ಮೂರು ಪಾತ್ರಗಳಿವೆ. ಮೂರು ಬೇರೆ ಬೇರೆ ರೀತಿಯ ಪಾತ್ರಗಳವು. ನಿರ್ದೇಶನವನ್ನೂ ನಾನೇ ಮಾಡಿದ್ದೇನೆ. ಇನ್ನೂ ಖುಷಿಯ ವಿಚಾರವೆಂದರೆ ನಮ್ಮ ಚಿತ್ರ ವಿವಿಧ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ 54ಕ್ಕೂ ಅಧಿಕ ಪ್ರಶಸ್ತಿಗಳನ್ನು ಪಡೆದುಕೊಂಡಿದೆ’ ಎನ್ನುತ್ತಾರೆ ಅವರು.

    ಈ ಚಿತ್ರವು ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ನಿರ್ಮಾಣವಾಗಿದ್ದು, ಅದಕ್ಕೆ ಅಮಿತ್​ ಅವರೇ ಕಥೆ-ಚಿತ್ರಕಥೆ ಬರೆದಿದ್ದಾರೆ. ‘ಚನ್ನಪಟ್ಟಣದ ಬಳಿ 20ಕ್ಕೂ ಅಧಿಕ ದಿನಗಳ ಚಿತ್ರೀಕರಣ ಮಾಡಿದ್ದೇವೆ. ಈ ಹಿಂದೆ ‘ಹವಾಲ’ ಎಂಬ ಚಿತ್ರ ನಿರ್ದೇಶನ ಮಾಡಿದ್ದ ನನಗೆ, ಇದು ಎರಡನೇ ಚಿತ್ರ. 18 ವರ್ಷಗಳಿಂದ ಕಿರುತೆರೆ ಹಾಗೂ ಹಿರಿತೆರೆ ನಟನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ’ ಎಂದು ಮಾಹಿತಿ ನೀಡುತ್ತಾರೆ ಅವರು.

    ಇದನ್ನೂ ಓದಿ: ‘ಟಕ್ಕರ್​’ ಕೊಟ್ಟ ಮನೋಜ್ ಕುಮಾರ್ ಈಗ ‘ಧರಣಿ’!

    ಬ್ರಹ್ಮ ಸಿನಿಮಾಹಾಲಿಕ್ ಡಿಜಿಟಲ್ ಸ್ಟುಡಿಯೋಸ್ ಹಾಗೂ ಬಿ.ಸಿ.ಡಿ ಸ್ಟುಡಿಯೋಸ್ ಸಂಸ್ಥೆಯಡಿ ಈ ಚಿತ್ರವನ್ನು ಮಂಜು ದೈವಜ್ನ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಸುದೀಪ್​ ಫ್ರೆಡ್ರಿಕ್​ ಛಾಯಾಗ್ರಹಣ ಮಾಡಿದ್ದು, ರಾಕಿ ಸೋನು ಸಂಗೀತ ಸಂಯೋಜಿಸಿದ್ದಾರೆ.

    ಹಿರಿಯ ನಟ ನಂದಮೂರಿ ಬಾಲಕೃಷ್ಣಗೆ ಕನ್ನಡದ ಶ್ರೀಲೀಲಾ ನಾಯಕಿ! ಯಾವ ಚಿತ್ರ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts