ಶಭಾಷ್​ ಪ್ರಮೋದ್​ ಶೆಟ್ಟಿ ; ರಕ್ಷಿತ್​​ ಶೆಟ್ಟಿಯಿಂದ "ಶಭಾಷ್​ ಬಡ್ಡಿಮಗ್ನೆ' ಚಿತ್ರದ ಪೋಸ್ಟರ್​ ಬಿಡುಗಡೆ

DSC04785
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ಪ್ರಮೋದ್​ ಶೆಟ್ಟಿ ಭಿನ್ನ ಪಾತ್ರಗಳ ಜತೆಗೆ ಅಷ್ಟೇ ವಿಭಿನ್ನ ಸಿನಿಮಾ ಟೈಟಲ್​ಗಳಿಂದಲೂ ಗಮನ ಸೆಳೆಯುತ್ತಿದ್ದಾರೆ. ಅದಕ್ಕೆ ಉದಾಹರಣೆ ಎಂಬಂತೆ "ಲಾಫಿಂಗ್​ ಬುದ್ಧ', "ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ' ಹಾಗೂ "ಶಭಾಷ್​ ಬಡ್ಡಿಮಗ್ನೆ' ಚಿತ್ರಗಳಲ್ಲಿ ಪ್ರಮೋದ್​ ನಾಯಕನಾಗಿ ನಟಿಸುತ್ತಿದ್ದಾರೆ.

ಇತ್ತೀಚೆಗಷ್ಟೆ ರಕ್ಷಿತ್​ ಶೆಟ್ಟಿ "ಶಭಾಷ್​ ಬಡ್ಡಿಮಗ್ನೆ' ಚಿತ್ರದ ಮೊದಲ ನೋಟ ಹಾಗೂ ಮೋಷನ್​ ಪೋಸ್ಟರ್​ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು. ಬಿ.ಎಸ್​. ರಾಜಶೇಖರ್​ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಈಗಾಗಲೇ ಚಿಕ್ಕಮಗಳೂರಿನಲ್ಲಿ ಸಂಪೂರ್ಣ ಮಾತಿನ ಭಾಗ ಹಾಗೂ ಹಾಡೊಂದರ ಚಿತ್ರೀಕರಣ ಮಾಡಲಾಗಿದೆ.

ಚಿತ್ರದಲ್ಲಿ ಪ್ರಮೋದ್​ ಶೆಟ್ಟಿಗೆ ಆದ್ಯ ಪ್ರಿಯಾ ನಾಯಕಿಯಾಗಿದ್ದು, ಸಾಮ್ರಾಟ್​ ಶೆಟ್ಟಿ, ಕಾವ್ಯ ರಮೇಶ್​ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಜತೆಗೆ ಶಂಕರ್​ ಅಶ್ವತ್ಥ್​, ಪ್ರಕಾಶ್​ ತುಮ್ಮಿನಾಡು, ಮೂಗು ಸುರೇಶ್​, ರವಿತೇಜ, ದರ್ಶನ್​ ಶೆಟ್ಟಿ, ಶೋಭ ಪ್ರಮುಖ ತಾರಾಗಣದಲ್ಲಿದ್ದಾರೆ. ಅಣಜಿ ನಾಗರಾಜ್​ ಛಾಯಾಗ್ರಹಣ, ಎಸ್​.ಪಿ.ಭೂಪತಿ ಸಂಗೀತ ನಿರ್ದೇಶನ, ಶ್ರೀನಿವಾಸ್​ ಕಲಾಲ್​ ಸಂಕಲನ ಚಿತ್ರಕ್ಕಿರಲಿದೆ. ವರ್ಷದಂತ್ಯಕ್ಕೆ "ಶಭಾಷ್​ ಬಡ್ಡಿಮಗ್ನೆ' ರಿಲೀಸ್​ ಆಗುವ ನಿರೀೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net