ಕ್ರಾಸ್ ಟೈಮ್ ಕನೆಕ್ಷನ್ ಕಥೆ ಹೇಳುವ ‘ಗಣ’; ಕೃಷಿ, ವೇದಿಕಾ, ಪ್ರಜ್ವಲ್ ಅಭಿನಯದ ಹೊಸ ಚಿತ್ರ

gana
Published on

ಬೆಂಗಳೂರು: ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬಕ್ಕೆ ಅವರ ಅಭಿನಯದ ಹೊಸ ಚಿತ್ರ ‘ಗಣ’ ಟೀಸರ್ ರಿಲೀಸ್ ಮಾಡುವ ಮೂಲಕ ಚಿತ್ರತಂಡ ಉಡುಗೊರೆ ನೀಡಿದೆ. ಈ ಚಿತ್ರಕ್ಕೆ ಪ್ರಜ್ವಲ್ ಜತೆ ನಾಯಕಿಯಾಗಿ ವೇದಿಕಾ ಬಣ್ಣ ಹಚ್ಚಿದ್ದು, ವಿಶೇಷ ಪಾತ್ರದಲ್ಲಿ ಕೃಷಿ ತಾಪಂಡ ಕಾಣಿಸಿಕೊಂಡಿದ್ದಾರೆ.

‘ಗಣ’ 1993 ಮತ್ತು 2022, ಎರಡು ಕಾಲಮಾನಗಳು ಸಮಾನಂತರಲ್ಲಿ ಕನೆಕ್ಟ್ ಆಗುವ ವಿಭಿನ್ನ ಕಥಾಹಂದರದ ಸಿನಿಮಾ. ಸೈನ್ಸ್ ಫಿಕ್ಷನ್ ಜಾನರ್‌ಗೆ ಸೇರಿರುವ ಚಿತ್ರ. ತೆಲುಗು ನಿರ್ದೇಶಕ ಹರಿಪ್ರಸಾದ್ ಜಕ್ಕ ಈ ಸಿನಿಮಾ ನಿರ್ದೇಶಿಸುತ್ತಿದ್ದು, ಜತೆಗೆ ಟಾಲಿವುಡ್ ಮೂಲದ ಪಾರ್ಥು ನಿರ್ಮಿಸುತ್ತಿದ್ದಾರೆ. ಪ್ರಜ್ವಲ್ ದೇವರಾಜ್, ‘ವಿಭಿನ್ನ ಕಥಾಹಂದರ ಹೊಂದಿರುವ, ಹೊಸ ಜಾನರ್‌ನ ಸಿನಿಮಾ’ ಎಂದು ಹೇಳಿಕೊಂಡರು. ನಾಯಕಿ ವೇದಿಕಾ, ‘ಅಭಿನಯಕ್ಕೆ ಪ್ರಾಮುಖ್ಯತೆ ಇರುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇದರಲ್ಲಿ ನನ್ನ ಮತ್ತು ನಾಯಕನ ನಡುವಿನ ಸಂಬಂಧ ಕುತೂಹಲಕಾರಿಯಾಗಿದೆ’ ಎಂದರು.

ಈ ಚಿತ್ರದಲ್ಲ ನಾಲ್ಕು ೈಟ್ ಹಾಗೂ 3 ಹಾಡುಗಳಿರಲಿವೆ. ಈಗಾಗಲೇ ಬೆಂಗಳೂರು, ಮೈಸೂರು ಸುತ್ತಮುತ್ತ 80 ದಿನಗಳ ಕಾಲ ಚಿತ್ರೀಕರಣ ಮುಗಿದಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಜೈ ಆನಂದ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ ಹಾಗೂ ಅನೂಪ್ ಸೀಲಿನ್ ಸಂಗೀತ ಈ ಚಿತ್ರಕ್ಕಿದೆ. ಇನ್ನೆರಡು ತಿಂಗಳಲ್ಲಿ ಸಿನಿಮಾ ರಿಲೀಸ್ ಮಾಡುವ ಯೋಚನೆ ಚಿತ್ರತಂಡದ್ದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net