ನಟ ಡಾರ್ಲಿಂಗ್ ಪ್ರಭಾಸ್ ಅವರು ನಟಿಸಿರುವ ಪ್ಯಾನ್ ಇಂಡಿಯಾ ಸಿನಿಮಾ 'ರಾಧೆಶ್ಯಾಮ್' ಗಲ್ಲಾ ಪೆಟ್ಟಿಗೆಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆದರೆ, ಸಿನಿಮಾಗೆ ಸಿಕ್ಕ ವಿಮರ್ಶೆಗಳಿಂದ ನಟ ಪ್ರಭಾಸ್ ಬೇಸರವಾಗಿದ್ದು ಅವರು ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಆದರೆ, ಡಾರ್ಲಿಂಗ್ ಪ್ರಭಾಸ್ ಅವರು ಎಲ್ಲಿಯೂ ಹೆಚ್ಚು ಕಾಣಿಸಿಕೊಳ್ಳದೆ ಇರುಲು ಕಾರಣ ಬೇರೇನೇ ಇದೆ. ಹೌದು, ಪ್ರಭಾಸ್ ಅವರು ಅರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಸದ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇನ್ನು, ಇದೇ ಕಾರಣಕ್ಕೆ ಪ್ರಭಾಸ್ ವಿದೇಶಕ್ಕೆ ಅಂದರೆ ಸ್ಪೇನ್‌ಗೆ ಹಾರಿದ್ದಾರೆ ಎಂಬ ಮಾಹಿತಿ ಇದೆ. ಅಂದಹಾಗೆ, ಪ್ರಭಾಸ್ ಕೆಲ ದಿನಗಳ ಹಿಂದೆ 'ಸಲಾರ್' ಚಿತ್ರದ ಶೂಟಿಂಗ್ ವೇಳೆ ಗಾಯಗೊಂಡಿದ್ದರು. ಆಗ, ಬಾರ್ಸಿಲೋನಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.