ಬೆಂಗಳೂರು: ಸಿನಿಮಾ ಎಂದರೆ ಕರುನಾಡಲ್ಲಿ ರಾಜ್ಕುಮಾರ್, ಇನ್ನು ಅದರ ನಂತರ ಕೇಳಿಸುವ ಹೆಸರೇ ಪುನೀತ್ ರಾಜ್ಕುಮಾರ್. ಅಪ್ಪು ಹೆಸರು ‘ಪವರ್ ಸ್ಟಾರ್’ ಅಭಿಮಾನಿಗಳ ಎದೆಯಲ್ಲಿ ಎಂದೆಂದಿಗೂ ಅಜರಾಮರ. ಅಪ್ಪು ಅವರು ನಿಧನರಾಗಿ ನಾಲ್ಕು ತಿಂಗಳು ಆದರೂ, ಎಲ್ಲಾ ಸಂದರ್ಭಗಳಲ್ಲೂ ಪುನೀತ್ ಅವರನ್ನು ಫ್ಯಾನ್ಸ್ ನೆನಪಿಸಿಕೊಳ್ಳುತ್ತಿದ್ದಾರೆ. ಜಾತ್ರೆ, ಉತ್ಸವ, ಹಬ್ಬ, ಸಾಮಾಜಿಕ ಸೇವೆಯ ಕಾರ್ಯಗಳಲ್ಲಿ ಅಪ್ಪು ಅವರ ಫೋಟೋಗಳು ರಾರಾಜಿಸುತ್ತಿವೆ. ಇನ್ನು, ಅಪ್ಪು ಅವರಿಗೆ ಬಹುತೇಕ ಎಲ್ಲಾ ಕಾರ್ಯಕ್ರಮಗಳಲ್ಲಿ ಉತ್ತಮ ಗೌರವ ಸಲ್ಲಿಸಲಾಗುತ್ತಿದೆ. ಇದೀಗ, ‘ಆರ್ಆರ್ಆರ್’ ಸಿನಿಮಾ ನೋಡುತ್ತಿದ್ದರೂ ಜನ ಅಪ್ಪು ಅವರನ್ನೇ ನೆನಪಿಸಿಕೊಂಡಿದ್ದಾರೆ.