‘ಫಿಸಿಕ್ಸ್ ಟೀಚರ್’: ಇದು ಆರ್ಟ್ ಸಿನಿಮಾ ಅಲ್ಲ!

Physics Teacher
Published on

ಬೆಂಗಳೂರು: ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡವರು ಶಶಿಕುಮಾರ್ ಹಾಗೂ ನಂದಿತಾ. ಈಗ ಅವರ ಮಗ ‘ಫಿಸಿಕ್ಸ್ ಟೀಚರ್’ ಎಂಬ ಚಿತ್ರ ನಿರ್ದೇಶಿಸಿದ್ದಾರೆ. ಅಷ್ಟೇ ಅಲ್ಲ, ಚಿತ್ರಕ್ಕೆ ಹೀರೋ ಸಹ ಅವರೇ. ಈಗಾಗಲೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿರುವ ಈ ಚಿತ್ರ, ಮೇ 27ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಟ್ರೇಲರ್​ಗೆ ಸಿಕ್ಕ ಪ್ರಶಂಸೆ ಕಂಡು ಸುಮುಖಗೆ ಖುಷಿಯಾಗಿದೆಯಂತೆ. ‘ಬೇರೆಯ ತರಹದ ಸಿನಿಮಾ ಎಂದರೆ, ಅದು ಕಲಾತ್ಮಕ ಸಿನಿಮಾ ಅಲ್ಲ. ಸಾಕಷ್ಟು ಕಮರ್ಷಿಯಲ್ ಅಂಶಗಳು ಈ ಚಿತ್ರದಲ್ಲಿವೆ. ಎಲ್ಲರ ನಟರ ಅಭಿನಯ ಚೆನ್ನಾಗಿದೆ. ನೀವೇ ನೋಡಿ ಹಾರೈಸಿ’ ಎನ್ನುತ್ತಾರೆ ಅವರು.

ಸುಮುಖಗೆ ನಾಯಕಿಯಾಗಿ ಪ್ರೇರಣಾ ಕಂಬಂ ಕಾಣಿಸಿಕೊಂಡಿದ್ದಾರೆ. ‘ಬಿಡುಗಡೆಗೂ ಮುನ್ನ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಕಂಡು ಖುಷಿಯಾಗಿದೆ. ಈಗ ಟ್ರೇಲರ್ ಬಂದಿದೆ. ಸದ್ಯ ಹಾಡೊಂದು ಬಿಡುಗಡೆಯಾಗಲಿದೆ. ಚಿತ್ರ ಬಿಡುಗಡೆಯಾದಾಗ ಬೆಂಬಲ ನೀಡಿ’ ಎಂದು ಮನವಿ ಮಾಡುತ್ತಾರೆ ಪ್ರೇರಣಾ. ರಾಜೇಶ್ ನಟರಂಗ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಅವರು ಸುಮುಖನನ್ನು ಹುಟ್ಟಿದ ದಿನದಿಂದ ನೋಡುತ್ತಿದ್ದಾರಂತೆ. ‘ಅವನ ಜತೆಗೆ ಕೆಲಸ ಮಾಡಿದ್ದು ಖುಷಿ ಇದೆ. ಆತ ಒಳ್ಳೆಯ ನಿರ್ದೇಶಕ. ಅದಕ್ಕಿಂತ ಒಳ್ಳೆಯ ನಟ’ ಎಂದು ಹೊಗಳುತ್ತಾರೆ. ಈ ಚಿತ್ರವನ್ನು ಪಾಸಿಂಗ್ ಶಾಟ್ ಫಿಲಂಸ್​ನಡಿ ಶಶಿಕುಮಾರ್ ಮತ್ತು ನಂದಿತಾ ನಿರ್ವಿುಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net