ಮೀಟೂ ಅಭಿಯಾನವೇ ಫೇಕ್​ ... ಹೊಸ ಬಾಂಬ್​ ಸಿಡಿಸಿದ ಪಾಯಲ್​

Payal Ghosh - Final
Published on

ಮುಂಬೈ: ನಟ-ನಿರ್ದೇಶಕ ಅನುರಾಗ್​ ಕಶ್ಯಪ್​ ವಿರುದ್ಧ ಲೈಂಗಿಕ ಕಿರುಕುಳ ಹೊರಿಸುವ ಮೂಲಕ ಮತ್ತೆ ಮೀಟೂ ಅಭಿಯಾನಕ್ಕೆ ಚಾಲನೆ ನೀಡಿದ್ದ ನಟಿ ಪಾಯಲ್​ ಘೋಶ್ ಇದೀಗ ಆ ಮೀಟೂ ಅಭಿಯಾನವೇ ಫೇಕ್​ ಎಂದು ಹೇಳಿದ್ದಾರೆ.

2013ರಲ್ಲಿ ಅನುರಾಗ್​ ಕಶ್ಯಪ್​ ತನನ್ನು ವರ್ಸೋವಾದ ತಮ್ಮ ಆಫೀಸಿಗೆ ಕರೆಸಿಕೊಂಡು ಬಹಳ ಕೆಟ್ಟದಾಗಿ ನಡೆಸಿಕೊಂಡಿದ್ದರು ಎಂದು ಪಾಯಲ್​ ಇತ್ತೀಚೆಗಷ್ಟೇ ವರ್ಸೋವಾ ಪೊಲೀಸ್​ ಸ್ಟೇಶನ್​ನಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ವರ್ಸೋವಾ ಪೊಲೀಸರು, ಅನುರಾಗ್​ ಕಶ್ಯಪ್​ ಅವರನ್ನು ಕರೆಸಿಕೊಂಡು ವಿಚಾರಣೆ ಸಹ ನಡೆಸಿದೆ.

ಇದೀಗ ಮೀಟೂ ಅಭಿಯಾನದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರುವ ಈ ಬಂಗಾಲಿ ನಟಿ, ಈ ಅಭಿಯಾನವೇ ಫೇಕ್​ ಎನಿಸುವಂತಿದೆ ಎಂದು ಹೇಳಿದ್ದಾರೆ. 'ಯಾರ್ಯಾರು ಲೈಂಗಿಕ ಶೋಷಣೆ ಮಾಡಿದ್ದಾರೋ ಮತ್ತು ಯಾರ್ಯಾರ ಮೇಲೆ ಆರೋಪ ಹೊರಿಸಲಾಗಿದೆಯೋ ಅವರೆಲ್ಲಾ ಕ್ಲೀನ್​ ಚಿಟ್​ ಪಡೆದಿದ್ದಾರೆ. ಹಾಗಾದರೆ, ಅವರ ಮೇಲೆ ಆರೋಪ ಹೊರಿಸಿದವರು ಸುಳ್ಳು ಹೇಳುತ್ತಿದ್ದಾರಾ? ಒಂದು ಪಕ್ಷ ಸುಳ್ಳು ಹೇಳುತ್ತಿದ್ದಾರೆ ಎಂದರೆ ಅವರ ಮೇಲೆ ಯಾಕೆ ಕ್ರಮ ಕೈಗೊಳ್ಳಲಾಗುತ್ತಿಲ್ಲ? ಇದರಲ್ಲಿ ನಿಜ ಏನು?' ಎಂದು ಅವರು ಪ್ರಶ್ನಿಸಿದ್ದಾರೆ.

ಇನ್ನು ಲೈಂಗಿಕ ಶೋಷಣೆ ಮಾಡಿದವರನ್ನು ಕೆಲವರು ಸಮರ್ಥಿಸಿಕೊಂಡು ಮಾತನಾಡುವುದರ ಕುರಿತು ಪ್ರತಿಕ್ರಿಯಿಸಿರುವ ಅವರು, 'ಕೆಲವು ಮಹಿಳೆಯರು ಶೋಷಣೆ ಮಾಡಿದವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರಿಗೆ ಇಂಥ ಪ್ರಕರಣ ಬಗ್ಗೆ ಎಳ್ಳೆಷ್ಟು ಮಾಹಿತಿ ಇರುವುದಿಲ್ಲ ಮತ್ತು ಆರೋಪಿಗಳು ಹಾಗೆಲ್ಲಾ ಮಾಡುವುದಕ್ಕೆ ಸಾಧ್ಯವೇ ಇಲ್ಲ ಎಂದು ಬಲವಾಗಿ ನಂಬಿರುತ್ತಾರೆ' ಎಂದು ಹ್ಯಾಶ್​ಟ್ಯಾಗ್​ ಫೇಕ್​, ಮೀಟೂ ಇಂಡಿಯಾ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ, ಈ ಮೀಟೂ ಅಭಿಯಾನವೆಂಬುದೇ ಫೇಕ್​ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net